ಸ್ಲಂ ಬೋರ್ಡ್ ಮನೆ ನಿರ್ಮಾಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ತಹಶೀಲ್ದಾರ್ ವರದಿಯಲ್ಲಿ ಬಯಲಾಯ್ತು ಕರ್ಮಕಾಂಡ‌

Public TV
2 Min Read

ಹಾವೇರಿ: ಕೊಳಗೇರಿ ನಿವಾಸಿಗಳಿಗೆ ಕಳೆದ ಎರಡು ವರ್ಷಗಳಿಂದ ಸ್ಲಂ ಬೋರ್ಡ್‌ನಿಂದ (Slum Board) ಮನೆಗಳನ್ನು ನಿರ್ಮಿಸಲಾಗುತ್ತಿದೆ. ಅದರೆ ಸ್ಲಂ ಬೋರ್ಡ್‌ನ ಅಧಿಕಾರಿಗಳ ಮತ್ತು ಗುತ್ತಿಗೆದಾರ ಹಣದಾಹದಿಂದ ಮನೆಗಳು ಅರ್ಧಕ್ಕೆ ನಿಂತಿದ್ದು, ಫಲಾನುಭವಿಗಳು ಕಣ್ಣೀರು ಹಾಕುತ್ತಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಒಂದು ಸ್ವಂತ ಸೂರು ಇರಬೇಕು ಎನ್ನುವ ಕನಸು ಇರುತ್ತೆ. ಈ ಕನಸು ನನಸು ಮಾಡಲು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಮುಂದಾಗಿತ್ತು. ಆದರೆ ಅಧಿಕಾರಿಗಳ ಹಣದಾಹದಿಂದ ಆ ಕನಸು ನುಚ್ಚುನೂರಾಗಿದೆ.

ಶಿಗ್ಗಾಂವಿ (Shiggaon) ತಾಲೂಕಿನ ಬಂಕಾಪುರದಲ್ಲಿ (Bankapura) ಹಿಂದೆ ಸ್ಲಂ ಬೋರ್ಡ್‌ನಿಂದ ಮನೆ ಮಂಜುರಾಗಿತ್ತು. ಆದರೆ ಗುತ್ತಿಗೆದಾರ ಅರ್ಧ ಮನೆ ನಿರ್ಮಾಣ ಮಾಡಿ ನಾಪತ್ತೆ ಆಗಿದ್ದಾನೆ. ಹೀಗಾಗಿ ಜನರೇ ಹಣ ಹಾಕಿ ಮನೆ ನಿರ್ಮಾಣ ಮಾಡಿಕೊಳ್ಳಲು ಮುಂದಾಗಿದ್ದಾರೆ. ಸರ್ಕಾರದಿಂದ ಮನೆ ನಿರ್ಮಾಣ ಮಾಡಲು ಪ್ರತಿ ಮನೆಗಳಿಗೆ 7 ಲಕ್ಷದ 20 ಸಾವಿರ ರೂ. ಹಣ ಬಿಡುಗಡೆ ಮಾಡಿದೆ. ಅದರೆ ಸ್ಲಂ ಬೋರ್ಡ್ ಅಧಿಕಾರಿಗಳು ಮತ್ತು ಗುತ್ತಿಗೆದಾರರ 50% ರಷ್ಟು ಜಲ್ಲಿಕಲ್ಲು, ಕಬ್ಬಿಣ ಮತ್ತು ಸಿಮೆಂಟ್ ನೀಡಿ ಕೈತೊಳೆದುಕೊಂಡಿದ್ದಾರೆ. ಇದನ್ನೂ ಓದಿ: ಹುಕ್ಕೇರಿಯಲ್ಲಿ ಗೋರಕ್ಷಕರ ಮೇಲೆ ಹಲ್ಲೆ ಪ್ರಕರಣ – ಶ್ರೀರಾಮಸೇನೆ ಕಾರ್ಯಕರ್ತರ ವಿರುದ್ಧ FIR

ಬಂಕಾಪುರ ಪಟ್ಟಣದಲ್ಲಿಯೇ 27.76 ಕೋಟಿ ರೂ. ವೆಚ್ಚದಲ್ಲಿ 454 ಮನೆಗಳ ಮಂಜೂರು ಮಾಡಲಾಗಿದೆ. ಸರಿಯಾದ ಮೂಲಭೂತ ಸೌಕರ್ಯಗಳ ಕೊರತೆ ದೂರು ನೀಡಿದ ಹಿನ್ನಲೆ ಸವಣೂರು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ 7 ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಜಿಲ್ಲಾಡಳಿತಕ್ಕೆ ವರದಿಯ ನೀಡಲಾಗಿದೆ. ಮನೆಯ ನಿರ್ಮಾಣಕ್ಕಾಗಿ ಇಟ್ಟಿಗೆ ಸಿಮೆಂಟ್, ಕಬ್ಬಿಣವನ್ನು 50% ಮಾತ್ರ ನೀಡಿದ್ದಾರೆ. ಮನೆ ಕಟ್ಟಿದ ಕಾರ್ಮಿಕರ ಕೂಲಿಯನ್ನೂ ನೀಡಿಲ್ಲ ಎಂದು ಫಲಾನುಭವಿಗಳು ಆಕ್ರೋಶ ಹೊರಹಾಕಿದ್ದಾರೆ. ಕಳಪೆ ಗುಣಮಟ್ಟದ ವಸ್ತುಗಳ ಬಳಕೆ ಮಾಡಿದ್ದರಿಂದ ಮನೆಗಳು ಮಳೆಯಿಂದ ಸೋರುತ್ತಿವೆ. ಮನೆಯಲ್ಲಿದ್ದವರ ಬಂಗಾರ ಮಾರಾಟ ಮಾಡಿ ಮನೆ ಕಟ್ಟಲು ಹಾಕಿದರೂ ಮನೆ ಮುಕ್ತಾಯ ಆಗಿಲ್ಲ ಎಂದು ಜನ ಬೇಸರ ಹೊರಹಾಕಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ 43 ಕೋಟಿ ರೂ. ವೆಚ್ಚದಲ್ಲಿ 696 ಮನೆಗಳು ಮಂಜೂರು, ಶಿಗ್ಗಾಂವಿ 46 ಕೋಟಿಯಲ್ಲಿ 850 ಮನೆಗಳು ಮಂಜೂರಾಗಿವೆ. ಕಳೆದ ಎರಡು ವರ್ಷಗಳಿಂದ 20% ರಷ್ಟು ಮನೆಗಳು ಮಾತ್ರ ಪೂರ್ಣಗೊಂಡಿದ್ದು, ಇನ್ನೂ 60% ಮನೆಗಳು ಪ್ರಗತಿ ಹಂತದಲ್ಲಿವೆ. ಸ್ಥಳ ಪರಿಶೀಲನೆ ವೇಳೆ 50% ರಷ್ಟು ಮಾತ್ರ ಮನೆಗಳಿವೆ. ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ ಹಾಗೂ ಮನೆಯ ನಿರ್ಮಾಣ ಮಾಡಿದ ಲೇಬರ್ ಹಣ ಬಿಡುಗಡೆ ಮಾಡಿಲ್ಲ ಎಂಬುದನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಕೆಲವು ಫಲಾನುಭವಿಗಳಿಗೆ ಬಂಗಾರ ಮಾರಾಟ ಮಾಡಿ ಮನೆಯನ್ನ‌ ಕಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಫಲಾನುಭವಿಗಳು ಜಮೀನು ಅಡವಿಟ್ಟು ಮನೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಈ ವರದಿಯನ್ನು ಸ್ಲಂ ಬೋರ್ಡ್ ಕೇಂದ್ರ ಕಚೇರಿಗೆ ಕಳಿಸಲಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ದಾನಮ್ಮನವರ್ ಹೇಳಿದ್ದಾರೆ.

ಸ್ಲಂ ಬೋರ್ಡ್‌ನಿಂದ ಸರ್ಕಾರ ಬಡವರಿಗೆ ಕೋಟ್ಯಂತರ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲು ಮುಂದಾಗಿತ್ತು. ಆದರೆ ಅಧಿಕಾರಿಗಳ ಮತ್ತು ಗುತ್ತಿಗೆದಾರ ಹಣದಾಹದಿಂದ ಫಲಾನುಭವಿಗಳಿಗೆ ಇದು ನೆರವೇರಿಲ್ಲ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು, ಉಳಿದ ಅನುದಾನ ಬಿಡುಗಡೆ ಮಾಡಿ ಮನೆಗಳನ್ನ ಪೂರ್ಣಗೊಳಸಬೇಕು ಎಂದು ಫಲಾನುಭವಿಗಳು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಲವು ಮಹಿಳೆಯರ ಜೊತೆ ಅಫೇರ್‌ ಇಟ್ಕೊಂಡಿದ್ದ – ಯಶ್‌ ದಯಾಳ್‌ ವಿರುದ್ಧ ಮಹಿಳೆಯಿಂದ ಮತ್ತೊಂದು ಆರೋಪ

Share This Article