ಹಾವೇರಿ| ಡಿವೈಡರ್‌ಗೆ ಡಿಕ್ಕಿ ಹೊಡೆದು ಆಟೋ ಮೇಲೆ ಬಿದ್ದ ಕಾರು – ಇಬ್ಬರು ಸ್ಥಳದಲ್ಲೇ ಸಾವು, ಓರ್ವ ಗಂಭೀರ

Public TV
1 Min Read

ಹಾವೇರಿ: ಡಿವೈಡರ್‌ಗೆ ಕಾರೊಂದು ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾವೇರಿ ನಗರ ಹೊರವಲಯದ ತೋಟದಯಲ್ಲಾಪುರ (Totadayallapur) ಗ್ರಾಮದ ಬಳಿಯ ಪುಣೆ-ಬೆಂಗಳೂರು (Pune-Bengaluru) ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಘಟನೆ ನಡೆದಿದೆ.

ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೃತರ ಹೆಸರು ಪತ್ತೆಯಾಗಿಲ್ಲ. ಮೃತರು ದಾವಣಗೆರೆ (Davanagere) ಮೂಲದವರು ಎನ್ನಲಾಗಿದೆ. ಕಾರು ಚಾಲಕನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರೋಡ್ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಆಟೋ ಮೇಲೆ ಬಿದ್ದ ರಭಸಕ್ಕೆ ಆಟೋದಲ್ಲಿದ್ದ ಪೇರಳೆ ಮತ್ತು ಚಿಕ್ಕು ಹಣ್ಣುಗಳು ಚೆಲ್ಲಾಪಿಲ್ಲಿಯಾಗಿವೆ. ಇದನ್ನೂ ಓದಿ: ಚುನಾವಣೆ ಉಚಿತ ಭರವಸೆಗಳನ್ನು ನಿರ್ಬಂಧಿಸುವಂತೆ ಅರ್ಜಿ – ಕೇಂದ್ರ, ಆಯೋಗಕ್ಕೆ ಸುಪ್ರೀಂನಿಂದ ನೋಟಿಸ್‌

ಆಟೋ ಹುಬ್ಬಳ್ಳಿಯಿಂದ (Hubballi) ರಾಣೆಬೆನ್ನೂರು ಕಡೆಗೆ ತೆರಳುತ್ತಿತ್ತು. ಕಾರು ದಾವಣಗೆರೆ ಕಡೆಯಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಹಾವೇರಿ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ: ಮಾದಕ ವಸ್ತುಗಳ ದಂಧೆಯನ್ನು ನಿಗ್ರಹಿಸುವುದು ಸರ್ಕಾರದ ಗುರಿ: ಸಿದ್ದರಾಮಯ್ಯ

Share This Article