ಫೇಸ್‌ಬುಕ್‌ ಲವ್‌ ಸ್ಟೋರಿ, ಕೊನೆಗೆ ಮದ್ವೆ – ಅಪರಂಜಿ ಚಿನ್ನವೋ ಎಂದಿದ್ದ ಅನೂಪ್

Public TV
1 Min Read

ಉಡುಪಿ: ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ (Anoop Pujari) ಸಾವು ಜನರನ್ನು ನೋವಿನ ಕಡಲಿಗೆ ತಳ್ಳುವಂತೆ ಮಾಡಿದೆ. 33ರ ಹರೆಯ, ಕುಟುಂಬದ ಆಕ್ರಂದನ ಪುಟ್ಟ ಮಗುವಿನ ಅಳು ಊರ ಜನರ ಪ್ರೀತಿ ಕೋಟ್ಯಾಂತರ ಜನರನ್ನು ವಿಚಲಿತಗೊಳಿಸಿದೆ.

ಅನೂಪ್ ಪೂಜಾರಿ ಮತ್ತು ಮಂಜುಶ್ರೀಯದ್ದು ಪ್ರೇಮ ವಿವಾಹ. ಸಂಗೀತಾಸಕ್ತರಾದ ಇಬ್ಬರಿಗೆ ಫೇಸ್‌ಬುಕ್ ನಲ್ಲಿ ಪರಿಚಯವಾಗಿತ್ತು. ಸಂಗೀತ ಮತ್ತು ಪ್ರೀತಿಗೆ ಜಾತಿ ಅಡ್ಡಿಯಾಗಲಿಲ್ಲ. ಎರಡು ಮನೆಯವರನ್ನು ಒಪ್ಪಿಸಿ 2022 ರಲ್ಲಿ ಮದುವೆಯಾಗಿದ್ದರು.

 

View this post on Instagram

 

A post shared by PUBLiC TV (@publictv)

ಅನೂಪ್ ಮತ್ತು ಮಂಜುಶ್ರೀ ಆಪ್ತರ, ಸಂಬಂಧಿಕರ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. ಇತ್ತೀಚೆಗೆ ಹಾಡಿದ್ದ ಹಾಡಿನ ವೀಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಅಪರಂಜಿ ಚಿನ್ನವೋ ಚಿನ್ನವೋ ನನ್ನ ಮನೆಯ ದೇವತೆ ಹಾಡನ್ನು ಜನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕಂಬನಿ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಪೂಂಚ್‍ನಲ್ಲಿ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮರಾಗಿದ್ದ ರಾಜ್ಯದ ಮೂವರು ಯೋಧರಿಗೆ ಕಣ್ಣೀರ ವಿದಾಯ

 

Share This Article