ತಿರುಪತಿಯಲ್ಲಿ ಅಪ್ಪು ಪೋಸ್ಟರ್ ತೆರವು: ನಟ ಶಿವಣ್ಣ ಬೇಸರ

By
1 Min Read

ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವಾಗ ಕಾರಿನ ಮೇಲಿದ್ದ ಫೋಟೋ ಮತ್ತು ನಾಡಧ್ವಜವನ್ನು ತೆರೆವು ಮಾಡಿದ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರೋ ನಟ ಶಿವರಾಜ್‌ಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ತಿರುಪತಿಯಲ್ಲಿ ಅಪ್ಪು ಪೋಸ್ಟರ್ ತೆರವು ಮಾಡಿದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಶಿವಣ್ಣ, ಪುನೀತ್ ಭಾವಚಿತ್ರ ತೆಗೆಸಿರುವ ವಿಚಾರ ನನಗೆ ಗೊತ್ತಿಲ್ಲ ಆದರೆ ಯಾರದ್ದೇ ಆಗಲಿ ಈ ರೀತಿ ಮಾಡಬಾರದು. ನನ್ನ ತಮ್ಮ ಅಂತಾ ಈ ಮಾತನ್ನ ಹೇಳುತ್ತಿಲ್ಲ ಏಕೆಂದರೆ ಅಭಿಮಾನದಿಂದ ಅಭಿಮಾನಿಗಳು ಫೋಟೋ ಹಾಕಿರುತ್ತಾರೆ. ಅವರ ಭಾವನೆಗೆ ಧಕ್ಕೆ ತರಬಾರದು. ಒಬ್ಬ ಮನುಷ್ಯನಿಗೆ ಇನ್ನೊಬ್ಬ ಮನುಷ್ಯ ನೋವು ಕೊಡಬಾರದು.

ಎಲ್ಲರಲ್ಲೂ ಒಂದು ಟ್ರೂ ಫೀಲಿಂಗ್ ಇರುತ್ತೆ ಅದಕ್ಕೆ ಮಸಿ ಬಳಿಯಬಾರದು. ನಮಗೆ ಇಷ್ಟ ಇರುತ್ತೋ ಇಲ್ವೋ ಗೊತ್ತಿಲ್ಲ ಯಾರು ಈ ರೀತಿ ಮಾಡಬಾರದು. ವಿಐಪಿ ಆಗಿರಲಿ, ಸಾಮಾನ್ಯ ವ್ಯಕ್ತಿಯಾಗಿರಲಿ ನೋವಾಗುವಂತೆ ಯಾರು ನಡೆದುಕೊಳ್ಳಬಾರದು ಅವರಲ್ಲಿ ಒಂದು ಫೀಲಿಂಗ್ಸ್ ಇರುತ್ತೆ. ಅದರಲ್ಲೂ ಫ್ಯಾನ್ಸ್‌ಗಳಿಗೆ ಅವಮಾನ ಮಾಡಬಾರದು ಎಂದರು. ಇದನ್ನೂ ಓದಿ: ಪ್ರಿನ್ಸ್‌ ಮಹೇಶ್‌ ಬಾಬುಗೆ ʻಭರಾಟೆʼ ಬ್ಯೂಟಿ ಜೋಡಿ

ಇದೇ ವೇಳೆ ಸಂಚಲನ ಮೂಡಿಸುತ್ತಿರುವ ರಾಷ್ಟ್ರ ಭಾಷೆ ಕುರಿತಂತೆ ಮಾತಾನಾಡಿದ ಶಿವಣ್ಣ, ಎಲ್ಲಾ ಭಾಷೆಗಳು ಒಂದೇ ಅಂತಾ ನಮ್ಮ ರಾಷ್ಟ್ರ ಗೀತೆಯಲ್ಲಿದೆ. ದೇಶದಲ್ಲಿ ಎಲ್ಲಾ ಭಾಷೆ ಇದೆ. ನಾವೆಲ್ಲಾ ಒಂದೇ ಆದರೆ ಕನ್ನಡದ ವಿಚಾರಕ್ಕೆ ಬಂದರೆ ನಮಗೆ ಕನ್ನಡವೇ ಮುಖ್ಯ ಎಂದರು.

Share This Article
Leave a Comment

Leave a Reply

Your email address will not be published. Required fields are marked *