ಹಾಸನಾಂಬ ಉತ್ಸವಕ್ಕೆ ಕ್ಷಣಗಣನೆ – ಜಿಲ್ಲಾ ಖಜಾನೆಯಿಂದ ದೇವಾಲಯಕ್ಕೆ ಒಡವೆಗಳ ರವಾನೆ

Public TV
1 Min Read

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನದ (Hassan) ಅಧಿದೇವತೆ ಹಾಸನಾಂಬೆಯ (Hassanamba) ಜಾತ್ರಾ ಮಹೋತ್ಸವ ಇದೇ ಅ.24- ನ.3ರ ವರೆಗೆ ನಡೆಯಲಿದೆ.

ಜಾತ್ರೆಯ ಪೂರ್ವ ಸಿದ್ಧತಾ ಕಾರ್ಯ ಬಹುತೇಕ ಮುಗಿದಿವೆ. ಒಂದು ವರ್ಷದಿಂದ ಜಿಲ್ಲಾ ಖಜಾನೆಯಲ್ಲಿ ಭದ್ರಪಡಿಸಿದ್ದ ಒಡವೆಗಳನ್ನು ಇಂದು ಬಿಗಿ ಪೊಲೀಸ್ ಭದ್ರತೆಯ ನಡುವೆ ದೇವಾಲಯಕ್ಕೆ (Hassanamba Temple) ತರಲಾಯಿತು. ದೇವಿಯ ಗರ್ಭಗುಡಿ ಬಾಗಿಲು ತೆರೆದ ಮಾರನೇ ದಿನ ಹಾಸನಾಂಬೆಗೆ ಆಭರಣ ಧಾರಣೆ ಮಾಡಲಾಗುತ್ತದೆ.

ಒಡವೆಗಳನ್ನು ತರುವ ಮುನ್ನ ಖಜಾನೆ ಮುಂದೆ ಅರ್ಚಕರು ಪೂಜೆ ಸಲ್ಲಿಸಿದರು. ಬಳಿಕ ಒಡವೆಗಳನ್ನು ಪಲ್ಲಕ್ಕಿ ಮೇಲಿರಿಸಿ ಬೆಳ್ಳಿ ರಥದ ಮೂಲಕ ಮೆರವಣಿಗೆ ಮಾಡಿಕೊಂಡು ದೇವಾಲಯಕ್ಕೆ ತರಲಾಯಿತು. ಮೆರವಣಿಗೆಗೂ ಮುನ್ನ ಹಾಸನಾಂಬ ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಹಾಗೂ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಮೆರವಣಿಗೆ ವೇಳೆ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಭದ್ರತೆ ಒದಗಿಸಲಾಗಿತ್ತು. ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಸಾಗಿದ ಒಡವೆಗಳ ದರ್ಶನ ಮಾಡಿದರು.

Share This Article