ಹಾಸನ | ರಸ್ತೆ ಬದಿ ಕಸ ಹಾಕ್ತಿದ್ದವರ ಮನೆ ಅಂಗಳಕ್ಕೆ ಒಂದು ಲೋಡ್‌ ತ್ಯಾಜ್ಯ ಸುರಿದ ಪಾಲಿಕೆ ಸಿಬ್ಬಂದಿ

1 Min Read

ಹಾಸನ: ಎಲ್ಲೆಂದರಲ್ಲಿ ಕಸ ಬಿಸಾಡುತ್ತಿದ್ದವರಿಗೆ ಹಾಸನ ಮಹಾನಗರಪಾಲಿಕೆ (Hassan Municipal Corporation) ಸಿಬ್ಬಂದಿ ತಕ್ಕ ಪಾಠ ಕಲಿಸಿದ್ದಾರೆ. ಕಸ ಬಿಸಾಡಿದ್ದವರ ಮನೆಯ ಕಾಂಪೌಂಡ್ ಒಳಗೆ ಒಂದು ಲೋಡ್ ಕಸವನ್ನು ಸಿಬ್ಬಂದಿ ಸುರಿದಿದ್ದಾರೆ.

ಹಾಸನ (Hassan) ನಗರದ ಉದಯಗಿರಿ ಬಡಾವಣೆಗೆ ಹೋಗುವ ರಸ್ತೆಯ ಕರಿಯಪ್ಪ-ದ್ಯಾವಮ್ಮ ಎಂಬುವವರಿಗೆ ಸೇರಿದ ಮನೆಯವರು ರಸ್ತೆ ಬದಿ ಕಸ ಎಸೆಯುತ್ತಿದ್ದರು. ಹಲವು ಬಾರಿ ಮಹಾನಗರಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರ. ಆದರೂ ರಸ್ತೆ ಬದಿ ಕಸ ಎಸೆಯುತ್ತಿದ್ದರು. ಇದನ್ನೂ ಓದಿ: ಹಿಂದೂ ಸಮಾಜೋತ್ಸವದ ಫ್ಲೆಕ್ಸ್‌ಗೆ ಬ್ಲೇಡ್‌ – ಕಿಡಿಗೇಡಿಗಳ ವಿರುದ್ಧ ಆಕ್ರೋಶ

ಬೆಳಿಗ್ಗೆ ಪೌರಕಾರ್ಮಿಕರು ಒಂದು ಲೋಡ್ ಕಸವನ್ನು ಮನೆಯ ಆವರಣಕ್ಕೆ ಸುರಿದಿದ್ದಾರೆ. ಈ ವೇಳೆ ಮಹಿಳೆ (Woman) ಮಹಾನಗರಪಾಲಿಕೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಒನ್‌ ವೇ ಸಂಚಾರದ ವಿರುದ್ಧ ಆಪರೇಷನ್‌ – ಬರೋಬ್ಬರಿ 23 ಸಾವಿರ ಕೇಸ್ ದಾಖಲು

Share This Article