ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ: ಪ್ರೀತಂಗೌಡ

Public TV
2 Min Read

ಹಾಸನ : ಸಂಸದ ಡಿ.ಕೆ.ಸುರೇಶ್ ನಡವಳಿಕೆಯನ್ನು ಇಡೀ ರಾಜ್ಯದ ಜನತೆ ಖಂಡಿಸುತ್ತಿದ್ದಾರೆ. ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ. ಅಲ್ಲಿ ಪಾಳೇಗಾರರ ಸಂಸ್ಕೃತಿ ನಡೆಯುತ್ತಿಲ್ಲ. ಇನ್ಮುಂದೆ ಅವರ ನಡವಳಿಕೆಯನ್ನು ತಿದ್ದಿಕೊಳ್ಳಬೇಕು ಎಂದು ಶಾಸಕ ಪ್ರೀತಂಗೌಡ ಹೇಳಿದರು.

ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಮಂತ್ರಿ ಭಾಷಣ ಮಾಡುವಾಗ ಪಾಳೇಗಾರರ ಸಂಸ್ಕೃತಿಯಲ್ಲಿ ಜಗಳಕ್ಕೆ ಹೋಗಿದ್ದಾರೆ. ಸಂಸದ ಡಿ.ಕೆ.ಸುರೇಶ್ ನಡವಳಿಕೆಯನ್ನು ಇಡೀ ರಾಜ್ಯದ ಜನತೆ ಖಂಡಿಸುತ್ತಿದ್ದಾರೆ. ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ. ಅಲ್ಲಿ ಪಾಳೇಗಾರರ ಸಂಸ್ಕೃತಿ ನಡೆಯುತ್ತಿಲ್ಲ. ಇನ್ಮುಂದೆ ಅವರ ನಡವಳಿಕೆಯನ್ನು ತಿದ್ದಿಕೊಳ್ಳಬೇಕು. ಇಡೀ ರಾಜಕಾರಣಿಗಳು ತಲೆ ತಗ್ಗಿಸುವ ಕೆಲಸವನ್ನು ನಿನ್ನೆ ರಾಮನಗರದಲ್ಲಿ ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕನಕಪುರ, ರಾಮನಗರ ಯಾರೋಬ್ಬರ ಸ್ವತ್ತಲ್ಲ: ಎಚ್‍ಡಿಕೆ ಕಿಡಿ

ಇಂದು ರಾಜ್ಯಾದ್ಯಂತ ಅಶ್ವತ್ಥನಾರಾಯಣ ಅವರನ್ನು ಬೆಂಬಲಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಮಾಫಿಯಾ ಆಫ್ ರಾಮನಗರ ಖಂಡಿಸುತ್ತೇವೆ. ಅವರು ಮಾಡುತ್ತಿರುವುದು ಅವರ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಂತೆ. ಕಾರ್ಯಕ್ರಮಕ್ಕೆ ಡಿ.ಕೆ ಸುರೇಶ್ ಅವರಿಗೆ ಡೋಲ್ ಸೆಟ್ಟು ಇಟ್ಟು ಆಹ್ವಾನ ಕೊಡಲು ಆಗಲ್ಲ. ಡಿಸಿಯಿಂದ ಸಮಸ್ಯೆ ಆಗಿದ್ದರೆ ಹಕ್ಕುಚ್ಯುತಿ ಮಂಡಿಸಲಿ. ಸಾವಿರ ಜನ ಕರೆದುಕೊಂಡು ಬಂದು ಧಿಕ್ಕಾರ ಕೂಗುವುದು ಸಭ್ಯತೆಯಲ್ಲ. ಒಂದೂವರೆ ವರ್ಷ ಸಮ್ಮಿಶ್ರ ಸರ್ಕಾರ ಇತ್ತು. ನನ್ನನ್ನು ಕರೆಯುತ್ತಿರಲಿಲ್ಲ. ನಾನು ಸ್ಟೇಜ್ ಮೇಲೆ ಹೋಗಿ ಕೂಗಾಡಿದ್ನಾ. ನನಗೇನು ಕೂಗಾಡಲು ಬರಲ್ವಾ. ನನ್ನ ಹತ್ರ ಹಾಸನದಲ್ಲಿ ಜನ ಇಲ್ವಾ. ನಾನು ಆ ರೀತಿ ಮಾಡಿದ್ನಾ. ಸಮಾಧಾನವಾಗಿಯೇ ಇದ್ದೆ. ರಾಜಕೀಯ ಬಂದಾಗ ರಾಜಕೀಯ ಮಾಡೋಣ ಎಂದು ಹೇಳಿದರು.

ಮುಂದಿನ ಚುನಾವಣೆಯಲ್ಲಿ ಹಾಸನದಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಳೆದ ಬಾರಿ ಯಾರೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದರೋ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೋ ಅವರು ಏಳಕ್ಕೆ ಏಳು ಕಾಂಗ್ರೆಸ್ ಗೆಲ್ಲುತ್ತದೆ ಎಂದಿದ್ದರು. ಏಳು ಮಕಾಡೆ ಮಲಗಿ, ಹೇಳಿದವರು ಸೋತರು ಎಂದು ಮಾಜಿ ಸಚಿವ ಎ.ಮಂಜು ವಿರುದ್ಧ ಕುಟುಕಿದರು.

ನಂತರ 224 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳುತ್ತೇನೆ. ಮೈಕ್ ಮುಂದೆ ಹೇಳುವುದೇ ಬೇರೆ ರಾಜಕೀಯವೇ ಬೇರೆ. ಮತಗಳೇನು ಅವರ ಜೇಬಿನಲ್ಲಿ ಇರಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಟಾಂಗ್ ನೀಡಿದರು. ಇದನ್ನೂ ಓದಿ: ರಾಮನಗರ ಶಾಂತಿಯ ಜಿಲ್ಲೆ, ಗೂಂಡಾ ರೀತಿಯ ವರ್ತನೆ ಮಾಡಿದ್ದು ತಪ್ಪು: ಎಚ್‍ಡಿಕೆ ಕಿಡಿ

ಇದೇ ವೇಳೆ ಡಿ.ಕೆ.ಶಿವಕುಮಾರ್ ಮೇಕೆದಾಟು ಯೋಜನೆ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಮೇಕೆದಾಟು ಹೋರಾಟ ರೈತರಿಗೋಸ್ಕರ, ಜನರಿಗೋಸ್ಕರ ಮಾಡುವುದಾದರೆ ಮಾಡಲಿ. ಅದನ್ನು ಬಿಟ್ಟು ರಾಜಕೀಯಕ್ಕಾಗಿ ಮಾಡಬಾರದು. ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಮೇಕೆದಾಟು ಚುನಾವಣೆ ಗಿಮಿಕ್ ಎಂದರ್ಥ. ಹಾಸನ, ಹಳೇ ಮೈಸೂರು ಭಾಗದ ಜನರಿಗೆ ಚುನಾವಣೆ ಗಿಮಿಕ್ ಅವಶ್ಯಕತೆ ಇಲ್ಲ. ಈ ಹೋರಾಟದಿಂದ ಹೊಸದಾಗಿ ಸೂಟುಬೂಟು ಹೊಲಿಸಿಕೊಳ್ಳಬಹುದು ಎಂದುಕೊಂಡಿದ್ದರೆ ಆ ಸೂಟು, ಬೂಟು ರೂಂನಲ್ಲಿ ಉಳಿಯುತ್ತದೆ ಹೊರತು ಧರಿಸಲು ಅವಕಾಶ ಸಿಗಲ್ಲ. ಮೇಕೆದಾಟು ವಿಚಾರವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲು ಹೊರಟಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ ಮೇಕೆದಾಟು ಮಾಡುತ್ತೇವೆ ಎಂದಿದ್ದಾರೆ ಕಾದುನೋಡಿ ಎಂದಿದ್ದಾರೆ. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಟಫ್‍ರೂಲ್ಸ್ ಅನ್ವಯ – ಬಿಜೆಪಿಯಿಂದ ಷಡ್ಯಂತ್ರ ಎಂದ ಕಾಂಗ್ರೆಸ್‌

Share This Article
Leave a Comment

Leave a Reply

Your email address will not be published. Required fields are marked *