ಹಾಸನ: ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದ ಮಹಾನಗರ ಪಾಲಿಕೆಯ (Hassan Mahanagara Palike) ತ್ಯಾಜ್ಯ ವಿಲೇವಾರಿ ಘಟಕದ (Waste Segragation Plant) ಶೆಡ್ ಏಕಾಏಕಿ ಕುಸಿದುಬಿದ್ದ ಘಟನೆ ಹಾಸನದ (Hassan) ಅಗಿಲೆ ಗ್ರಾಮದ ಬಳಿ ನಡೆದಿದೆ.
ಕಾರ್ಮಿಕರು ಕೆಲಸ ಮಾಡುವ ವೇಳೆಯೇ ಬೃಹತ್ ಶೆಡ್ ದಿಢೀರ್ ಕುಸಿದುಬಿದ್ದಿದೆ. ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಶೆಡ್ ಕುಸಿತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಹಾಸನ | ಶಾಲೆಯಲ್ಲಿ ಮಕ್ಕಳ ನಡುವೆ ಗಲಾಟೆ – ತಂದೆಯ ಕೊಲೆಯಲ್ಲಿ ಅಂತ್ಯ
ಮರು ಬಳಕೆಯ ಕಸ ವಿಂಗಡಣೆಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಶೆಡ್ ನಿರ್ಮಾಣ ಮಾಡಲಾಗುತ್ತಿತ್ತು. ಇದಕ್ಕಾಗಿ ಸಿಮೆಂಟ್ ಪಿಲ್ಲರ್ ಮೇಲೆ ಬೃಹತ್ ಕಬ್ಬಿಣದ ಕಂಬ ಅಳವಡಿಸಲಾಗಿತ್ತು. ಇದ್ದಕ್ಕಿದ್ದಂತೆ ಕಂಬ ಬಿದ್ದು, ಶೆಡ್ ನೆಲಕ್ಕುರುಳಿದೆ. ಕಳಪೆ ಕಾಮಗಾರಿಯಿಂದ ಶೆಡ್ ಕುಸಿದು ಬಿದ್ದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಹಾಸನ | ರಸ್ತೆಗೆ ಮರ ಕೆಡವಿ ವಾಹನ ಸವಾರರನ್ನು ತಡೆದ ಗಜರಾಜ!