ಭವಾನಿ ರೇವಣ್ಣ ಕಾರಿಗೆ ಬೈಕ್‌ ಡಿಕ್ಕಿ – ಬೈಕ್ ಸೀಸ್‌ ಮಾಡ್ರಿ ಎಂದು ದೊಡ್ಡ ಗೌಡ್ರ ಸೊಸೆ ಗರಂ

By
1 Min Read

ಹಾಸನ/ಮೈಸೂರು: ಮಾಜಿ ಸಚಿವ ಹೆಚ್‌ಡಿ ರೇವಣ್ಣ ಪತ್ನಿ ಹಾಗೂ ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ (Bhavani Revanna) ಅವರ ಕಾರಿಗೆ (Car)  ಬೈಕ್‌  (Bike) ಡಿಕ್ಕಿ ಹೊಡೆದಿರುವ ಘಟನೆ ಮೈಸೂರು (Mysuru) ಜಿಲ್ಲೆಯ ಸಾಲಿಗ್ರಾಮ ಬಳಿ ನಡೆದಿದೆ.

ಭವಾನಿ ರೇವಣ್ಣ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಬೈಕ್‌ವೊಂದು ಡಿಕ್ಕಿ ಹೊಡೆದಿದೆ. ಇದರಿಂದ ರೊಚ್ಚಿಗೆದ್ದ ಭವಾನಿ ರೇವಣ್ಣ ಅವರು ಬೈಕ್‌ ಸವಾರನಿಗೆ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಕಾರಿನ ಬೋರ್ಡ್‌ಗೆ ಡ್ಯಾಮೇಜ್‌ ಆಗಿದೆ ಎಂದು ಕ್ಲಾಸ್‌ ತೆಗೆದುಕೊಂಡಿರುವ ಘಟನೆ ನಡೆದಿದೆ. ಈ ದೃಶ್ಯದ ವೀಡಿಯೋ ವೈರಲ್‌ ಆಗಿದೆ. ಇದನ್ನೂ ಓದಿ: ರೇವಂತ್ ರೆಡ್ಡಿಯನ್ನು ಭೇಟಿಯಾದ ತೆಲಂಗಾಣ ಡಿಜಿಪಿ ಅಮಾನತು

ರಸ್ತೆಗಿಳಿದು ಬೈಕ್ ಸವಾರನನ್ನು ಭವಾನಿ ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟು ದೂರದಿಂದ ಟೈರ್ ಉಜ್ಜಿಕೊಂಡು ಕಂಟ್ರೋಲ್‌ ಮಾಡಿದ್ದೀವಿ. ಬೈಕ್ ಓಡ್ಸೋಕೆ ಇತಿಮಿತಿ ಇಲ್ವಾ? ನಿನಗೆ ರೈಟ್ ಸೈಡ್ ಬರೋಕೆ ರೂಲ್ಸ್ ಎಲ್ಲಿದೆ? ಲೆಫ್ಟ್ ಸೈಡ್ ಬರಬೇಕು ನೀನು ಎಂದು ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ತೆಲಂಗಾಣದಲ್ಲಿ ಬಿಆರ್‌ಎಸ್‌ ಸೋಲು – ತನ್ನನ್ನು ತಾನೇ ಟ್ರೋಲ್‌ ಮಾಡಿಕೊಂಡ ಕೆಸಿಆರ್‌ ಪುತ್ರ

Share This Article