ಪ್ರೀತಿಯ ನಾಟಕವಾಡಿ ಯುವತಿಯರಿಗೆ ವಂಚನೆ- ಚಿತ್ರಹಿಂಸೆ ನೀಡುವ ವೀಡಿಯೋ ವೈರಲ್

Public TV
1 Min Read

ಹಾಸನ: ಪ್ರೀತಿಯ ಹೆಸರಿನಲ್ಲಿ ಯುವಕನೊಬ್ಬ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡು ಚಿತ್ರಹಿಂಸೆ ನೀಡಿರುವ ಪ್ರಕರಣ ಸಕಲೇಶಪುರದಲ್ಲಿ (Sakleshpura) ಬೆಳಕಿಗೆ ಬಂದಿದೆ.

ದೌರ್ಜನ್ಯಕ್ಕೊಳಗಾದ ಯುವತಿ ಈಗ ಕುಶಾಲನಗರ ಬಡಾವಣೆಯ ಶರತ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮೂರು ವರ್ಷದಿಂದ ಯುವತಿಯನ್ನು ಪ್ರೀತಿಸುವ ನಾಟಕವಾಡಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಶರತ್, ಆಕೆಯಿಂದ ಹಣ ಹಾಗೂ ಒಡವೆಗಳನ್ನು ಪಡೆದಿದ್ದ. ಅಲ್ಲದೇ ಆಕೆಯೊಂದಿಗೆ ಸಂಪರ್ಕದಲ್ಲಿರುವಾಗಲೇ ಶಿವಮೊಗ್ಗ ಮೂಲದ ಮತ್ತೋರ್ವ ಯುವತಿ ಜೊತೆ ಓಡಾಟ ಆರಂಭಿಸಿದ್ದ. ಆಕೆಯೊಂದಿಗೂ ಪ್ರೀತಿಯ ನಾಟಕವಾಡಿದ್ದಾನೆ. ಇದನ್ನೂ ಓದಿ: ಮದುವೆ ಒಪ್ಪಂದಕ್ಕೆ ಒಪ್ಪದ ಶಿಕ್ಷಕಿಯ ಅಪಹರಣ

ಬೇರೆ ಯುವತಿಯ ಜೊತೆಗಿನ ಸಂಬಂಧ ತಿಳಿಯುತ್ತಿದ್ದಂತೆ ಆಕೆಗೆ ಇನ್ಸ್ಟಾಗ್ರಾಂನಲ್ಲಿ ಟ್ಯಾಗ್ ಮಾಡಿ ಶರತ್‍ನನ್ನು ಯುವತಿ ಪ್ರಶ್ನಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಶರತ್ ಪ್ರೇಯಸಿಗೆ ಮನಬಂದಂತೆ ಥಳಿಸಿದ್ದಾನೆ. ಹಲ್ಲೆ ನಡೆಸುವಾಗಲೇ ವೀಡಿಯೋ ಕಾಲ್ ಮಾಡಿ ಹೊಸ ಗೆಳತಿಗೂ ತೋರಿಸಿದ್ದಾನೆ. ಆಕೆ ವೀಡಿಯೋ ಕಾಲ್ ಅನ್ನು ರೆಕಾರ್ಡ್ ಮಾಡಿಕೊಂಡಿದ್ದು, ವೀಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೇ ಆತ ತನ್ನ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದು, ಹಣ ಒಡವೆ ಪಡೆದಿದ್ದಾನೆ ಎಂದು ಆರೋಪಿಸಿದ್ದಾಳೆ. ಇದೀಗ ಯುವತಿಗೆ ಚಿತ್ರಹಿಂಸೆ ನೀಡುತ್ತಿರುವ ವೀಡಿಯೋ ವೈರಲ್ ಆಗಿದೆ.

ಈ ಸಂಬಂಧ ಸಕಲೇಶಪುರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನಕ್ಕೆ ಕಿಂಗ್ ಮೇಕರ್ ಆಗ್ತಾರಾ ಡಿಕೆ ಶಿವಕುಮಾರ್?

Share This Article