ತಮನ್ನಾಗೆ ತಲೆಬಿಸಿ ತಂದಿಟ್ಟ ಹಸಿಬಿಸಿ ವಿಡಿಯೋ: ಸೆಕ್ಸ್ ಸೈಟ್‌ನಲ್ಲಿ ಅಪ್‌ಲೋಡ್

Public TV
2 Min Read

‘ನೋ ಕಿಸ್, ನೋ ಬೆಡ್ ರೂಮ್ ಸೀನ್’ ಎಂಬ ಬೌಂಡರಿ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದ ನಟಿ ತಮನ್ನಾ (Tamannaah) ‘ಲಸ್ಟ್ ಸೋರಿಸ್ 2’ ಸಿನಿಮಾದಲ್ಲಿ ತಾವೇ ಹಾಕಿಕೊಂಡಿದ್ದ ಬೇಲಿಯನ್ನು ಕಿತ್ತೆಸೆದು ಮನಸೋ ಇಚ್ಛೆ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಕಿಸ್ ಇದೆ, ಬೆಡ್ ರೂಮ್ ದೃಶ್ಯಗಳಿವೆ. ಪಡ್ಡೆಗಳ ಕಣ್ಣಿಗೆ ಹಬ್ಬದಂತಹ ಹಸಿಬಿಸಿ ದೃಶ್ಯಗಳೂ ಇವೆ. ಈ ದೃಶ್ಯಗಳು ಈಗ ಸೆಕ್ಸ್ ಸೈಟ್‍ (Porn Website) ನಲ್ಲಿ ಅಪ್‌ಲೋಡ್ ಆಗಿವೆ.

ನಟಿ ತಮನ್ನಾ ಹಾಗೂ ನಟ ವಿಜಯ್ ವರ್ಮಾ (Vijay Varma) ಅವರ ಹಸಿಬಿಸಿ ದೃಶ್ಯಗಳ ಫೋಟೋಗಳು ಮತ್ತು ವಿಡಿಯೋಗಳು ಕೇವಲ ಟ್ರೋಲಿಗರ ಪೇಜ್ ನಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಷ್ಟೇ ಕಾಣಿಸಿಕೊಂಡಿದ್ದವು. ಇದೀಗ ಪೋರ್ನ್‌ ಸೈಟ್‌ನಲ್ಲಿ ಅವುಗಳನ್ನು ಅಪ್‌ಲೋಡ್ ಮಾಡಿ, ಅವು ನಿಜ ದೃಶ್ಯಗಳು ಎನ್ನುವಂತೆ ಬಿಂಬಿಸಲಾಗುತ್ತಿದೆಯಂತೆ. ಇದು ನಟಿ ತಮನ್ನಾ ಅವರಿಗೆ ತಲೆಬಿಸಿ ತಂದಿದೆ.

‘ಕೆಜಿಎಫ್’ (KGF) ನಟಿಯೂ ಆಗಿರುವ ತಮನ್ನಾ ದಕ್ಷಿಣದ ಸಿನಿಮಾಗಳಲ್ಲಿ ಉತ್ತಮ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಆದರೆ ಬೋಲ್ಡ್, ಲಿಪ್‌ಲಾಕ್ ಸೀನ್‌ಗಳಲ್ಲಿ ಎಂದೂ ತಮನ್ನಾ ನಟಿಸಿರಲಿಲ್ಲ. ಆದರೆ ಇತ್ತೀಚಿನ ಬಾಲಿವುಡ್‌ನ ‘ಜೀ ಕರ್ದಾ’, ʼಲಸ್ಟ್ ಸ್ಟೋರಿಸ್ 2′ ಸಿನಿಮಾದಲ್ಲಿ ತಮನ್ನಾ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರೇನಾ.? ಎಂದು ಅಭಿಮಾನಿಗಳು ಬಾಯಿ ಮೇಲೆ ಬೆರಳಿಡೋ ಹಾಗೇ ತಮನ್ನಾ ನಟಿಸಿ ಬಂದಿದ್ದಾರೆ. ಇದನ್ನೂ ಓದಿ:ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು

ಕೆಲ ವರ್ಷಗಳ ಹಿಂದೆ ಬಂದ ‘ಲಸ್ಟ್ ಸ್ಟೋರಿಸ್’  (Lust Stories) ಸೀರಿಸ್ ಬೋಲ್ಡ್ ದೃಶ್ಯಗಳಿಂದಲೇ ಹೆಚ್ಚು ಸದ್ದು ಮಾಡಿತ್ತು. ಅದನ್ನೂ ಮೀರಿಸುವಂತೆ ಸೀಕ್ವೆಲ್ ಸೀರಿಸ್ ಬರುತ್ತಿದೆ. ಇನ್ನೂ ತಮನ್ನಾ, ಲವರ್ ವಿಜಯ್ ವರ್ಮಾ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇಷ್ಟು ದಿನ ಲಿಪ್‌ಲಾಕ್ (Lip Lock) ಸೀನ್‌ಗೆ ಒಲ್ಲೆ ಎಂದಿದ್ದ ಮಿಲ್ಕಿಬ್ಯೂಟಿ ಈ ಸೀರಿಸ್‌ನಲ್ಲಿ ತುಟಿಗೆ ತುಟಿ ಸೇರಿಸಿದ್ದಾರೆ. ಪ್ರಿಯಕರನ ಜೊತೆ ನಟಿಸಿರೋದ್ರಿಂದ ಕೊಂಚ ಹೆಚ್ಚೇ ಇಂಟಿಮೆಂಟ್ ಸೀನ್‌ಗಳಲ್ಲಿ ನಟಿಸಿದ್ದಾರೆ.

 

ನೀವು ಭಾರತೀಯ ಸಂಸ್ಕೃತಿ ನಾಶ ಮಾಡುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ನಿನ್ನನ್ನು ಈ ರೀತಿ ನೋಡಲು ನಾಚಿಕೆ ಆಗುತ್ತಿದೆ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ. ನೀವು ಸೀ ಗ್ರೇಡ್ ನಟನ ಜೊತೆ ಇಂತಹ ಸನ್ನಿವೇಶದಲ್ಲಿ ಹೇಗೆ ನಟಿಸ್ತೀರಾ? ತಮನ್ನಾ ದಯವಿಟ್ಟು ಬಾಲಿವುಡ್ (Bollywood) ಬಿಟ್ಟು ಕಾಲಿವುಡ್, ಟಾಲಿವುಡ್‌ಗೆ (Tollywood) ಬಂದುಬಿಡಿ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್