ರಶ್ಮಿಕಾಗೆ ಡಿಮ್ಯಾಂಡ್ ಕಮ್ಮಿಯಾಯ್ತಾ? ಸಂಭಾವನೆನೂ ಕಮ್ಮಿಯಾಯ್ತಾ?

Public TV
2 Min Read

ಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಮನೋಜ್ಞ ಅಭಿನಯದಿಂದಲೇ ಅಭಿಮಾನಿಗಳ ಮನ ಕದ್ದಿದ್ದಾರೆ. ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೆಸರು ಮಾಡಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ. ಕನ್ನಡ ಸಿನಿಮಾಗಳಿಂದ ಸಿನಿಪಯಣವನ್ನ ಆರಂಭಿಸಿದ ರಶ್ಮಿಕಾ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ನಟಿಸಿದ್ದಾರೆ. ಸದ್ಯ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರ ಸಾಲಿನಲ್ಲಿ ನಟಿ ರಶ್ಮಿಕಾ ಕೂಡಾ ಒಬ್ಬರು.

ಟಾಲಿವುಡ್‌ನಲ್ಲಿ ಸ್ಟಾರ್ ನಟರ ಜೊತೆ ಸಿನಿಮಾಗಳನ್ನ ಮಾಡಿರುವ ರಶ್ಮಿಕಾಗೆ ಪುಷ್ಪ ಪಾರ್ಟ್-1 ಹಾಗೂ ಪುಷ್ಪ-2 ಸಿನಿಮಾಗಳು ಬೇರೆಯದ್ದೇ ಮೈಲೇಜ್ ನೀಡಿವೆ. ಇನ್ನು ಬಾಲಿವುಡ್‌ನಲ್ಲಿ ನಟಿಸಿದ ಅನಿಮಲ್ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ರಶ್ಮಿಕಾಗೆ ಡಿಫರೆಂಟ್ ಇಮೇಜ್ ಕ್ರಿಯೇಟ್ ಮಾಡಿದೆ. ಈ ಮೂಲಕ ಭಾರೀ ಬೇಡಿಕೆಯನ್ನ ಹೆಚ್ಚಿಸಿಕೊಂಡಿದ್ದ ರಶ್ಮಿಕಾ ಹಾಗೂ ಅವ್ರ ಅಭಿಮಾನಿ ಬಳಗ ಶಾಕ್‌ಗೆ ಒಳಗಾಗುವ ಸುದ್ದಿಯೊಂದು ಹರಿದಾಡ್ತಿದೆ.ಇದನ್ನೂ ಓದಿ: ಭ್ರಷ್ಟಾಚಾರವನ್ನ ಜನತೆ ಮುಂದೆ ಬಿಚ್ಚಿಟ್ಟ ಬಿ.ಆರ್‌ ಪಾಟೀಲ್‌ಗೆ ʻಕೈʼ ನಾಯಕರಿಂದಲೇ ಬೆದರಿಕೆ: ವಿಜಯೇಂದ್ರ

ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಆದ್ರೆ ಸಲ್ಮಾನ್ ಖಾನ್ (Salman Khan)  ಜೊತೆ ನಟಿಸಿದ `ಸಿಕಂದರ್’ (Sikandar) ಸಿನಿಮಾ ರಶ್ಮಿಕಾ ಕೆರಿಯರ್‌ಗೆ ದೊಡ್ಡ ಆಘಾತ ತಂದೊಡ್ಡಿದೆ. ಅಲ್ಲದೇ ಇದೇ ತಿಂಗಳು ಜೂನ್ 20ಕ್ಕೆ ಕುಬೇರ ಸಿನಿಮಾ ತೆರೆಕಂಡಿದೆ. ಆದ್ರೆ ರಶ್ಮಿಕಾ ಸುದ್ದಿನೇ ಇಲ್ಲ ಅನ್ನೋ ಚರ್ಚೆ ಶುರುವಾಗಿದೆ. ಜೊತೆಗೆ ಈ ಬೆಳವಣಿಗೆಯಿಂದ ರಶ್ಮಿಕಾ ಮಂದಣ್ಣ ಸಂಭಾವನೆ ಕೂಡಾ ಕಮ್ಮಿ ಮಾಡಿಕೊಂಡಿದ್ದಾರೆ ಅನ್ನೋ ಚರ್ಚೆ ಕೂಡಾ ಶುರುವಾಗಿದೆ.

ಅಂದಹಾಗೆ ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿರುವ ಮುಂದಿನ ಸಿನಿಮಾಗಳು ಸಹ ಹೇಳಿಕೊಳ್ಳುವ ಹಾಗಿಲ್ಲ. ಹೀಗಾಗಿ ಎಲ್ಲೋ ಒಂದು ಕಡೆ ರಶ್ಮಿಕಾಗೆ ಆಫರ್ಸ್‌ ಕಮ್ಮಿ ಆಗುತ್ತಿದೆಯಾ ಅನ್ನಿಸುತ್ತಿದೆ. ಹೀಗಾಗಿ ತಮ್ಮ ಮುಂದಿನ ಸಿನಿಮಾಗಳಿಗೆ ಸಂಭಾವನೆಯನ್ನ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಸದ್ಯ ಜೂನ್ 20 ರಂದು ಧನುಷ್, ನಾಗಾರ್ಜುನ್ ಹಾಗೂ ರಶ್ಮಿಕಾ ನಟಿಸಿರುವ ಕುಬೇರ ಸಿನಿಮಾ ತೆರೆಕಂಡಿದೆ. ಇನ್ನು ಗರ್ಲ್ಫ್ರೆಂಡ್, ಥಮ ಹಾಗೂ ಕಾಕ್ಟೈಲ್‌-2 ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.ಇದನ್ನೂ ಓದಿ: ಶಾಂತಿ ಸ್ಥಾಪಿಸಿ, ಇಲ್ಲದಿದ್ರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತೆ – ಇರಾನ್‌ಗೆ ಟ್ರಂಪ್ ಖಡಕ್ ವಾರ್ನಿಂಗ್

Share This Article