ಬಿಗ್‌ ಬಾಸ್ ಸೀಸನ್-12ಕ್ಕೆ ಕಿಚ್ಚ ಸುದೀಪ್ ಒಪ್ಪಿಕೊಂಡ್ರಾ?

Public TV
1 Min Read

ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್‌ಬಾಸ್ (Bigg Boss Kannada) 11 ಸೀಸನ್‌ಗಳನ್ನ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಈ ಕಾರ್ಯಕ್ರಮದ ಏಕಮಾತ್ರ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಗುಡ್‌ಬೈ ಹೇಳಿದ್ರು. 11ನೇ ಸೀಸನ್ ನಡೆಯುತ್ತಿರುವಾಗಲೇ ಇದು ನಾನು ನಡೆಸಿಕೊಡುವ ಕೊನೆಯ ಸೀಸನ್ ಅಂತಾ ಅನೌನ್ಸ್ ಮಾಡಿದ್ದರು ಕಿಚ್ಚ ಸುದೀಪ್. ಕಿಚ್ಚನ ಈ ಮಾತು ಬಿಗ್‌ಬಾಸ್ ವೀಕ್ಷಕರಿಗೆ ಶಾಕ್ ನೀಡಿತ್ತು.

ಬಿಗ್‌ಬಾಸ್ ಸೀಸನ್ 12 ಶುರುವಾಗೋದಕ್ಕೆ ಇನ್ನು 3-4 ತಿಂಗಳು ಬಾಕಿ ಇದೆ. ಹೀಗಿರೋವಾಗ ಕಿಚ್ಚ ಸುದೀಪ್ ಅವರ ಮನಸ್ಸನ್ನ ಆ ವಾಹಿನಿ ಒಲಿಸುವುದಕ್ಕೆ ಪ್ರಯತ್ನ ಮಾಡಿದೆ ಎನ್ನಲಾಗುತ್ತಿದೆ. ಜೊತೆಗೆ ಈ ಬಾರಿಯ ಬಿಗ್‌ಬಾಸ್ ಶೋ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿಯನ್ನ ಕರೆಯಲಾಗಿದೆ. ಇದೇ ಜೂನ್ 30ರಂದು ಈ ಬಾರಿಯ ಬಿಗ್‌ಬಾಸ್ ರಿಯಾಲಿಟಿ ಶೋ ಬಗ್ಗೆ ಮಾಹಿತಿ ನೀಡಲು ಆಯೋಜಕರು ಹಾಗೂ ಕಲರ್ಸ್‌ ತಂಡ ಸಜ್ಜಾಗಿದೆ. ಇದನ್ನೂ ಓದಿ: ರಶ್ಮಿಕಾರನ್ನೇ ಫಾಲೋ ಮಾಡ್ತಿದ್ದಾರಾ ‘ಕಿಸ್ಸಿಕ್’ ಬೆಡಗಿ – 7 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡ ಶ್ರೀಲೀಲಾ!

ಬಿಗ್‌ಬಾಸ್ ಸೀಸನ್-12ರ ನಿರೂಪಣೆಯನ್ನ ಯಾರು ಮಾಡುತ್ತಾರೆ ಅನ್ನೋದು ಈಗಲೂ ಕೂಡಾ ಪ್ರಶ್ನೆಯಾಗಿ ಕಾಡುತ್ತಿದೆ. ಈ ವಿಚಾರವಾಗಿ ನಟ ಸುದೀಪ್ ಅವರನ್ನ ರಿಯಾಲಿಟಿ ಶೋಗೆ ನಿರೂಪಕರಾಗಿ ಮುಂದುವರೆಯುವಂತೆ ಮನವೊಲಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆದಿದೆಯಂತೆ. ಅಲ್ಲದೇ ಕಿಚ್ಚ ಸುದೀಪ್ ಅವರು ಕೂಡಾ ಕೆಲವು ಷರತ್ತುಗಳನ್ನ ಹಾಕಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಜೂನ್ 30 ಸೋಮವಾರದಂದು ನಡೆಯುವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇದನ್ನೂ ಓದಿ: ವೃದ್ಧಾಪ್ಯ ತಡೆಯುವ ಚಿಕಿತ್ಸೆಯೇ ಶೆಫಾಲಿ ಜರಿವಾಲಾಗೆ ಮುಳುವಾಯ್ತಾ ?

ಅಂದಹಾಗೆ ಈ ಬಾರಿಯ ರಿಯಾಲಿಟಿ ಶೋ ಯಾವ ರೀತಿಯಾದ ಕಾನ್ಸೆಪ್ಟ್‌ನಲ್ಲಿ ಮೂಡಿ ಬರಲಿದೆ..? ಯಾವ ರೀತಿಯಾದ ಸ್ಪರ್ಧಿಗಳಿಗೆ ಅವಕಾಶ ಸಿಗಲಿದೆ ಅನ್ನೋ ಬಗ್ಗೆ ಮಾಹಿತಿ ಕೂಡಾ ಹೊರಬೀಳಲಿದೆ. ಅಲ್ಲದೇ ಕೆಲವರ ಹೆಸರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಈ ಬಗ್ಗೆ ಕೂಡಾ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಗಳಿವೆ.  ಇದನ್ನೂ ಓದಿ: ಹನಿಮೂನ್ ಟ್ರಿಪ್‌ನಲ್ಲಿ ವೈಷ್ಣವಿ ಮಸ್ತ್ ಡ್ಯಾನ್ಸ್..ಫುಲ್ ಮಸ್ತಿ!

Share This Article