– 3 ವರ್ಷಗಳಿಂದ ಪರಿಚಯಸ್ಥನಾಗಿದ್ದ ಜೂನಿಯರ್ ಕೋಚ್‌ನಿಂದಲೇ ಅತ್ಯಾಚಾರ
ಚಂಡೀಗಢ: ಸ್ಟೇಡಿಯಂನ ಬಾತ್ರೂಮ್‌ನಲ್ಲಿ ಅಪ್ರಾಪ್ತ ಹಾಕಿ ಆಟಗಾರ್ತಿಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಗರ್ಭಪಾತ ಮಾಡಿಸಿರುವ ಆರೋಪದ ಮೇಲೆ ಜೂನಿಯರ್ ಹಾಕಿ (Hockey) ಕೋಚ್‌ನ್ನು ಅರೆಸ್ಟ್ ಮಾಡಲಾಗಿದೆ.
ಸಂತ್ರಸ್ತ ಬಾಲಕಿಯ 12ನೇ ತರಗತಿಯಲ್ಲಿ ಓದುತ್ತಿದ್ದು, ರೇವಾರಿ (Rewari) ಜಿಲ್ಲೆಯವರು. ಕಳೆದ ಕೆಲ ಸಮಯದಿಂದ ಹಾಕಿ ತರಬೇತಿ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮದುವೆ ಹೆಸರಲ್ಲಿ ರೇಪ್, ಗರ್ಭಪಾತಕ್ಕೆ ಒತ್ತಾಯ – ಕೇರಳದ ಕಾಂಗ್ರೆಸ್ ಉಚ್ಚಾಟಿತ ಶಾಸಕ ಅರೆಸ್ಟ್
ಈ ಸಂಬಂಧ ಬಾಲಕಿ ಖೋಲ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪದ ಮೇಲೆ ದೂರು ದಾಖಲಿಸಿದ್ದಾಳೆ. ನಾನು ಹಾಕಿ ಆಡುತ್ತಿದ್ದೆ. ಸುಮಾರು ನಾಲ್ಕು ತಿಂಗಳ ಹಿಂದೆ ಮೂರು ವರ್ಷಗಳಿಂದ ನನಗೆ ಪರಿಚಿತನಾಗಿದ್ದ ಜೂನಿಯರ್ ಕೋಚ್ ಕ್ರೀಡಾಂಗಣದ ಬಾತ್ರೂಮ್‌ಗೆ ನನ್ನನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.
ಬಾಲಕಿ ಮಾತನಾಡಿ, ನಾನು ಗರ್ಭಿಣಿಯಾದೆ. ಇದನ್ನು ತಿಳಿದು ಜ.5ರಂದು ನನಗೆ ಗರ್ಭಪಾತ ಮಾಡಿಸಿದರು. ನಂತರ ನನ್ನ ಆರೋಗ್ಯದಲ್ಲಿ ಏರುಪೇರಾಯಿತು. ಇದರಿಂದ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ, ಗರ್ಭಪಾತ ಮಾಡಿದ ಆರೋಪದ ಮೇಲೆ ಜೂನಿಯರ್ ಹಾಕಿ ಕೋಚ್‌ನನ್ನು ಅರೆಸ್ಟ್ ಮಾಡಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಋತುಚಕ್ರದ ವೇಳೆ ಹೊಟ್ಟೆ ನೋವು ತಾಳದೆ ನೇಣಿಗೆ ಶರಣಾದ ಯುವತಿ

