ಬೆಂಗಳೂರು: ಹರ್ಷಿತಾ ರಾಜ್ ಗೌಡ ಜೀವನದ ಹಂಗು ತೊರೆದು ಕಾರು ಚಲಾಯಿಸುತ್ತಾರೆ. ಸದ್ಯ ಇವರೇ ಭಾರತ ರೇಸಿಂಗ್ ಲೋಕದ ಅಧಿಪತಿಯಾಗಿದ್ದು, ಇವರು ಕನ್ನಡತಿ ಅನ್ನೋದೇ ಹೆಮ್ಮೆ ಸಂಗತಿಯಾಗಿದೆ.
ಹರ್ಷಿತಾ ರಾಜ್ ಇವರು ಆಟೋ ಕ್ರಾಸ್ ರೈಸ್, ಮೊಟೋ ಕ್ರಾಸ್ ರೈಸ್ ಗಳಲ್ಲಿ ವಿಶ್ವದ ಮಟ್ಟದ ದಾಖಲೆಗಳನ್ನು ಬರೆದಿದ್ದಾರೆ. ಜೊತೆಗೆ ಹಲವು ಚಾಂಪಿಯನ್ ಶಿಪ್ ಪ್ರಶಸ್ತಿಗಳನ್ನ ಗೆದ್ದಿದ್ದಾರೆ. ಇದೇ 25 ನಡೆಯುತ್ತಿರುವ INRC ಆಟೋ ಕ್ರಾಸ್ ರ‍್ಯಾಲಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಈ ಸಾಧನೆ ಬಗ್ಗೆ ಹರ್ಷಿತಾ ತಂದೆ ಖುಷಿ ವ್ಯಕ್ತಪಡಿಸಿದ್ದಾರೆ.
ನಾನು ಹತ್ತು ವರ್ಷ ಡ್ರೈವರ್, ರೈಡರ್ ಆಗಿದ್ದರೂ ಎಲ್ಲೂ ನನ್ನನ್ನು ಗುರುತಿಸಿಲ್ಲ. ಆದರೆ ಇಂದು ಹರ್ಷಿತಾ ಗೌಡ ತಂದೆ ಗುರುತಿಸುತ್ತಿದ್ದಾರೆ. ಇಂದು ಎಲ್ಲಾ ಕಡೆ ಪುರುಷರು ಎಂದು ಹೇಳುತ್ತಿದ್ದಾರೆ. ಆದರೆ ನನ್ನ ಮಗಳು ರೇಸಿಂಗ್ ನಲ್ಲಿ ಕಲಿತು ಸಾಧನೆ ಮಾಡುತ್ತಿದ್ದಾಳೆ. ಅವಳ ಆಶಕ್ತಿಗೆ ನಾನು ಬೆಂಬಲ ಕೊಡುತ್ತೇನೆ ಎಂದು ಹರ್ಷಿತಾ ತಂದೆ ರಾಜಶೇಖರ್ ಗೌಡ ಹೇಳಿದ್ದಾರೆ.
ಹರ್ಷಿತಾ ಕಾರ್, ಬೈಕ್ ರೇಸಿಂಗ್ ನಲ್ಲಿಯೂ ಹೆಣ್ಮಕ್ಕಳು ಕಮ್ಮಿಯಿಲ್ಲ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಮುಂದಿನ ಕಾಂಪಿಟೇಷನ್‍ಗಳಲ್ಲಿ ಹರ್ಷಿತಾ ರಾಜ್ ಗೌಡ ಉತ್ತಮ ಸಾಧನೆ ತೋರಲಿ ಎಂದು ಎಲ್ಲರ ಆಶಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv