ಹಂಸ ದಮಯಂತಿಯಂತೆ ಪೋಸ್ ಕೊಟ್ಟ ಹರ್ಷಿಕಾ

Public TV
1 Min Read

ನ್ನು ಕೆಲವೇ ದಿನಗಳಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡಲು ತಯಾರಾಗಿರುವ ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚ (Harshika Poonachcha) ಹೊಸದೊಂದು ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಬೆಲೆಕಟ್ಟಲಾಗದ ಕುಂಚ ಮಾಂತ್ರಿಕ ರವಿಮರ್ಮರ ಪೇಂಟಿಂಗ್ ರೀತಿ ಪೋಸ್ ಕೊಟ್ಟಿದ್ದಾರೆ. ಗುಲಾಬಿ ಬಣ್ಣದ ಸೀರೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕ ನೋಟದಲ್ಲಿ ಕಂಗೊಳಿಸಿದ್ದಾರೆ.

ಹಿಂದೆಯೂ ಹರ್ಷಿಕಾ ಪೂಣಚ್ಚ ರವಿವರ್ಮರ ಕುಂಚದಲ್ಲಿ ಅರಳಿದ ಸುಂದರ ನಾರಿಯ ಪೋಸ್‌ನ್ನೇ ಹೋಲುವಂತೆ ಫೋಟೋಶೂಟ್ ಮಾಡಿಸಿದ್ದರು. ಅದು ಬಹಳ ಮೆಚ್ಚುಗೆ ಬಂದ ಕಾರಣ ಇದೀಗ ರವಿವರ್ಮರ ಇನ್ನೊಂದು ಕಲಾಕೃತಿ ಹಂಸ ದಮಯಂತಿ ಚಿತ್ರದಂತೆ ಪೋಸ್ ಕೊಟ್ಟಿದ್ದಾರೆ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚಾ.

 

ಅಕ್ಟೋಬರ್ ತಿಂಗಳಲ್ಲಿ ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ತಾರಾದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಮಗುವಿನ ಆಗಮನದ ಖುಷಿಯನ್ನ ಇನ್ಸ್ಟಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ವಿಭಿನ್ನ ಶೈಲಿಯಲ್ಲಿ ಫೋಟೂಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ ಗರ್ಭಿಣಿ ನಟಿ ಹರ್ಷಿಕಾ.

Share This Article