ಕಿಚ್ಚ ಸುದೀಪ್ ಅಭಿಮಾನಿಯ ಚಳಿ ಬಿಡಿಸಿದ ಹರ್ಷಿಕಾ ಪೂಣಚ್ಚ!

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ಚಿಟ್ಟೆ, ನಟಿ ಹರ್ಷಿಕಾ ಪೂಣಚ್ಚ ಅವರು ಕಿಚ್ಚ ಸುದೀಪ್ ಅಭಿಮಾನಿಗಳ ಮೇಲೆ ಗರಂ ಆಗಿದ್ದಾರೆ.

ಹರ್ಷಿಕಾ ಪೂಣಚ್ಚ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಿಂದಿ ಚಿತ್ರದ ಹಾಡೊಂದಕ್ಕೆ ಡಬ್ ಸ್ಮ್ಯಾಶ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದರು. ಆದರೆ ವ್ಯಕ್ತಿಯೊಬ್ಬ ಈ ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ನಟಿಯ ಕಾಲೆಳೆದಿದ್ದಾರೆ. ಇದರಿಂದ ಕೋಪಗೊಂಡ ನಟಿ ಟ್ವಿಟ್ಟರ್ ನಲ್ಲೇ ಹಿಗ್ಗಾಮುಗ್ಗಾ ಜಾಡಿಸಿ ಬೈದಿದ್ದಾರೆ.

`ಸಿನಿಮಾದಲ್ಲಿ ಅವಕಾಶ ಸಿಕ್ತಿಲ್ಲ ಅಂತ ಡಬ್ ಸ್ಮ್ಯಾಶ್ ಮಾಡಿದ್ಯಾ ಚಿನ್ನಾ’ ಎಂದು ಮಲ್ಲಿಕಾರ್ಜುನ ಎಂಬ ವ್ಯಕ್ತಿ ಟ್ವೀಟ್ ಮಾಡಿದ್ದಾರೆ. ಮತ್ತೋರ್ವ ವ್ಯಕ್ತಿ, ಎಲ್ಲಾರೂ ಆಕೆಯ ಫಿಲ್ಮ್ ನೋಡ್ಬೇಡಿ, ನಾವು ನೋಡಿದ್ರೆ ಜಾಬ್ ಲೆಸ್ ಆಗ್ತಿವಿ’ ಎಂದಿದ್ದಾರೆ.

ನನ್ನ ಮನಸ್ಸಿಗೆ ನೋವಾದಾಗ ನೇರವಾಗಿ ಮಾತನಾಡೋದನ್ನ ಕಿಚ್ಚ ಸುದೀಪ್ ಅವರಿಂದ ಕಲಿತಿದ್ದೇನೆ. ಅಂತವರ ಅಭಿಮಾನಿಯಾಗಿ ಈ ರೀತಿ ಮಾತನಾಡಲು ನಾಚಿಕೆ ಆಗೋದಿಲ್ವ. `ಥೂ ನಿನ್ನ ಜನ್ಮಕ್ಕೆ. ಟ್ವೀಟ್ ಮಾಡಿದ್ರೆ ಯಾರು ಲೈಕ್ ಮಾಡುತ್ತಿಲ್ಲ ಎಂದು ಈ ರೀತಿ ಸ್ಟುಪಿಡ್ ಆಗಿ ಬರೆಯೋಕೆ ನಾಚಿಕೆ ಆಗಬೇಕು ನಿನಗೆ. ನಾನು ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಈ ರೀತಿ ವಿಡಿಯೋ ಮಾಡುತ್ತೇನೆ. ನೀನು ಕೆಲಸ ಇಲ್ಲದೆ ಕೂತಿರಬಹುದು, ನಾನಲ್ಲ. ನಾನು ಮೂರು ದೊಡ್ಡ ಸಿನಿಮಾಗಳನ್ನ ಮಾಡುತ್ತಿದ್ದೇನೆ’ ಎಂದು ರೀ ಟ್ವೀಟ್ ಮಾಡೋ ಮೂಲಕ ಸುದೀಪ್ ಅಭಿಮಾನಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

`ಉಪೇಂದ್ರ ಮತ್ತೆ ಬಾ’ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದ ಹರ್ಷಿಕಾ ಪೂಣಚ್ಚ ಸದ್ಯಕ್ಕೆ ಮಲಯಾಳಂನ `ಚಾರ್ ಮಿನರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ `ಚಿಟ್ಟೆ’, ‘ಅಧಿತಿ’ ಚಿತ್ರಗಳಲ್ಲಿ ನಟಿಸುತ್ತಿರುವ ಹರ್ಷಿಕಾ, ತೆಲುಗು ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಚಿತ್ರದ ಅಭಿನಯಕ್ಕಾಗಿ ತನ್ನ ಮೈಮೇಲೆ ಚಿಟ್ಟೆಯ ಹಚ್ಚೆ ಹಾಕಿಸಿ ಫೋಟೋ ಶೂಟ್ ಮಾಡಿಕೊಳ್ಳುವ ಮೂಲಕ ಇತ್ತೀಚೆಗಷ್ಟೇ ಸುದ್ದಿಯಾಗಿದ್ದರು.

https://twitter.com/actressharshika/status/937892248858984448

https://twitter.com/actressharshika/status/939408118693314560

https://twitter.com/actressharshika/status/939552071946080256

Share This Article
Leave a Comment

Leave a Reply

Your email address will not be published. Required fields are marked *