ಹರ್ಷನ ಹತ್ಯೆ- ಡೀಟೈಲ್ಸ್ ಎಲ್ಲ ಹೇಳೋಕೆ ಆಗಲ್ಲ: ಆರಗ ಜ್ಞಾನೇಂದ್ರ

Public TV
1 Min Read

ಬೆಂಗಳೂರು: ಹರ್ಷನ ಹತ್ಯೆ ವಿಚಾರವಾಗಿ ಸಂಪೂರ್ಣವಾಗಿ ವಿವರ ಕೊಡಲು ಸಾಧ್ಯವಾಗುವುದಿಲ್ಲ ಎಂದು ಗೃಹ ಮಂತ್ರಿ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸಿಎಂ ಬೊಮ್ಮಾಯಿ ಅವರನ್ನು ಆರಗ ಜ್ಞಾನೇಂದ್ರ ಅವರು ಆರ್‌ಟಿ ನಗರ ನಿವಾಸದಲ್ಲಿ ಭೇಟಿಯಾಗಿದ್ದು, ಶಿವಮೊಗ್ಗದ ಸದ್ಯದ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿದ್ದಾರೆ. ಈ ವೇಳೆ ಶಿವಮೊಗ್ಗ ಪರಿಸ್ಥಿತಿ ಕಂಟ್ರೋಲ್ ಮಾಡುವ ಬಗ್ಗೆ ಮಾಹಿತಿ ನೀಡಿದ್ದು, ಇಲ್ಲಿವರೆಗೂ ಆದ ಹರ್ಷನ ತನಿಖೆ ಪ್ರಗತಿ ಬಗ್ಗೆ ಬೊಮ್ಮಾಯಿ ಅವರಿಗೆ ಆರಗ ಅವರು ವಿವರಣೆ ನೀಡಿದ್ದಾರೆ. ಇದನ್ನೂ ಓದಿ: ಮುಸ್ಲಿಂನವರ ಕೊಲೆಯಾಗಿದ್ರೆ ರಾಹುಲ್, ಸೋನಿಯಾ ಗಾಂಧಿ ಬರ್ತಿದ್ರು: ಯತ್ನಾಳ್

ಸಿಎಂ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಪರಿಸ್ಥಿತಿ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಪೊಲೀಸ್ ಇಲಾಖೆಗೆ ಬಜೆಟ್‍ನಲ್ಲಿ ಹಣ ಮೀಸಲಿಡುವ ಬಗ್ಗೆ ಚರ್ಚೆ ಮಾಡಿದ್ದೇನೆ. ಶಿವಮೊಗ್ಗದಲ್ಲಿ ಪೊಲೀಸರ ವೈಫಲ್ಯ ಏನು ಇಲ್ಲ ಎಂದು ತಿಳಿಸಿದ್ದಾರೆ.

ಇವತ್ತು ರಮಣಗುಪ್ತ ಅವರು ಶಿವಮೊಗ್ಗಕ್ಕೆ ತೆರಳುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ನಿರ್ವಹಿಸಲು ರಮಣಗುಪ್ತ ಅವರನ್ನು ಅಲ್ಲಿಗೆ ಕಳುಹಿಸ್ತಿದ್ದೇವೆ ಎಂದು ಮಾಹಿತಿ ಕೊಟ್ಟರು. ಹರ್ಷನ ಹತ್ಯೆ ತನಿಖೆಯನ್ನು ಉನ್ನತ ಮಟ್ಟದ ತನಿಖೆಗೆ ವಹಿಸುವ ವಿಚಾರವಾಗಿ ಮಾತನಾಡಿದ ಅವರು, ವಿಚಾರಣೆಯ ಹಂತದಲ್ಲಿ ಇರೋದ್ರಿಂದ ಡೀಟೈಲ್ಸ್ ಎಲ್ಲ ಹೇಳೋಕೆ ಆಗಲ್ಲ. ಎಲ್ಲ ಹಂತದಲ್ಲೂ ತನಿಖೆ ಆಗ್ತಿದೆ. ಏನೇನು ಅಗತ್ಯತೆ ಇದೆಯೋ ಅದನ್ನೆಲ್ಲಾ ಪೊಲೀಸರು ಕ್ರಮ ತಗೊಳ್ತಿದ್ದಾರೆ.ಸದ್ಯಕ್ಕಂತೂ ಬೇರೆ ತನಿಖೆ ಆಲೋಚನೆ ಯಾವುದು ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಪೊಲೀಸ್ ಮುಂದೆ ಲಾಂಗ್ ಹಿಡಿದ ಪ್ರಕರಣವಾಗಿ ಪ್ರತಿಕ್ರಿಯಿಸಿದ ಅವರು, ಪೊಲೀಸರ ವೈಫಲ್ಯ ಏನು ಇಲ್ಲ. ಪೊಲೀಸರು ಎಲ್ಲ ರೀತಿ ತನಿಖೆ ಮಾಡುತ್ತಿದ್ದಾರೆ. ಯಾರನ್ನು ಯಾವಾಗ ಅರೆಸ್ಟ್ ಮಾಡಬೇಕು ಎಂದು ಪೊಲೀಸರು ನಿರ್ಧಾರ ಮಾಡ್ತಾರೆ. ಅದಕ್ಕೆ ಇಂದು ಹಿರಿಯ ಅಧಿಕಾರಿ ರಮಣ ಗುಪ್ತರನ್ನ ಶಿವಮೊಗ್ಗಗೆ ಕಳಿಸುತ್ತಿದ್ದೇವೆ. ಈಗಾಗಲೇ ಹಿರಿಯ ಅಧಿಕಾರಿಗಳು ಶಿವಮೊಗ್ಗದಲ್ಲಿ ಇದ್ದಾರೆ. ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು

Share This Article
Leave a Comment

Leave a Reply

Your email address will not be published. Required fields are marked *