ಹಿಜಬ್ ಹಾಕಿದಂತೆ ಶಾಲೆಗಳಲ್ಲಿ ಕೇಸರಿ ಹಾಕಿಸುತ್ತೇವೆ, ನಮ್ಮ ಅನ್ನ ತಿಂದು ನಮಗೆ ದ್ರೋಹ: ಬಸವರಾಜ್

Public TV
2 Min Read

– ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಪ್ರತಿಭಟನೆ
– ಸಿದ್ದರಾಮಯ್ಯನವರ ಕೈಯಲ್ಲಿ ಕೇಸರಿ ಧ್ವಜ ಇಡಿಸುತ್ತೆವೆ

ಬೆಂಗಳೂರು: ನಮ್ಮ ಅನ್ನ ತಿಂದು ನಮಗೆ ದ್ರೋಹ ಮಾಡುತ್ತಿರುವ ನೀವು ಕುನ್ನಿಗಳು. ಶಾಲೆಗಳಲ್ಲಿ ಕೋಮು ತರುತ್ತಿದ್ದೀರಿ. ಹಿಜಬ್ ಹಾಕಿದ ಹಾಗೇ ಕೇಸರಿಯನ್ನು ಹಾಕಿಸುತ್ತೇವೆ ಎಚ್ಚರ ಇರಲಿ ಎಂದು ವಿಹೆಚ್‍ಪಿ ನಾಯಕ ಬಸವರಾಜ್ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗ ಹರ್ಷ ಹತ್ಯೆ ಖಂಡಿಸಿ ಇಂದು ಸಂಜೆ ಬೆಂಗಳೂರಿನ ಟೌನ್ ಹಾಲ್ ಮುಂಭಾಗ ನಡೆದ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಸವರಾಜ್ ಹಿಂದೂ ಸಮಾಜ ಎಚ್ಚರವಾಗಿದೆ. ಹಿಂದೂಗಳ ಬಿಸಿ ರಕ್ತ ಕುದಿಯುತ್ತಿದೆ. ಹಿಂದೂ ಸಮಾಜದ ಮೇಲೆ ಕಣ್ಣು ಹಾಕಿದ್ರೆ ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯನಿಗೂ ಕೇಸರಿ ಶಾಲು ಹಾಕಿಸುತ್ತೇವೆ. ಸಿದ್ದರಾಮಯ್ಯನವರ ಕೈಯಲ್ಲಿ ಕೇಸರಿ ಧ್ವಜ ಇಡಿಸುತ್ತೆವೆ ಇದು ಸತ್ಯ ಸತ್ಯ ಬಸವರಾಜ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ನಾವು ಹಿಜಬ್ ತೆಗೆಯೋದಿಲ್ಲ ಹೇಳಿಕೆ ಸುಳ್ಳು – ಆಧಾರ್ ಕಾರ್ಡ್‍ನಲ್ಲಿ ಹಿಜಬ್ ಧರಿಸಿಲ್ಲ

ಇದೇ ಸಂದರ್ಭದಲ್ಲಿ ಮಾತನಾಡಿದ ವಿಹೆಚ್‍ಪಿ ನಾಯಕ ಉಲ್ಲಾಸ್ ರಾಜ್ಯವನ್ನು ಇಸ್ಲಾಮಿಕರಣ ಮಾಡಲು ಅಡ್ಡಿಯಾಗುತ್ತಿರುವುದು ಕೇಸರಿ. ಕೇಸರಿಯನ್ನು ಭೀತಿಗೊಳಿಸುವ ಹುನ್ನಾರ ಪಿಎಫ್‍ಐ ಮಾಡುತ್ತಿದೆ. ಪಿಎಫ್‍ಐ ಇಲ್ಲಿ ವರೆಗೆ ತುಂಬಾ ಹತ್ಯೆಗಳನ್ನು ಮಾಡಿದೆ. ಹೀಗಿದ್ದರೂ ಏನಾದರೂ ಕ್ರಮ ಕೈಗೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಇವರು ಕೊಲೆ ಮಾಡುತ್ತಿಲ್ಲ. ಭಯೋತ್ಪಾದಕ ಕೃತ್ಯ ಮಾಡುತ್ತಾ ಇದ್ದಾರೆ. ಪಿಎಫ್‍ಐ ಹಿಂದೆ ಭಯೋತ್ಪಾದಕ ಶಕ್ತಿಯಿದೆ. ಇದು ರಾಷ್ಟ್ರಕ್ಕೆ ಮಾರಕ. ಪಿಎಫ್‍ಐ ಮುಸಲ್ಮಾನ ಸಮುದಾಯದ ಮಧ್ಯೆ ಗೊಂದಲ ಸೃಷ್ಟಿ ಮಾಡಿ ಸಿಎಎ ಕಾಯ್ದೆ ವಿರುದ್ದ ಹೋರಾಡುವ ಹಾಗೆ ಮಾಡಿದ್ದಾರೆ. ಕೋಮು-ಗಲಭೆ ಸೃಷ್ಟಿ ಮಾಡುವುದೇ ಅವರ ಉದ್ದೇಶ ಎಂದು ಹೇಳಿದರು.

ಈ ರಾಜ್ಯದಲ್ಲಿ ಬರೀ ಹಿಂದೂಗಳ ಹತ್ಯೆ ನಡೆಯುತ್ತಿಲ್ಲ. ಬೆಂಗಳೂರಿನಲ್ಲಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಕೃತ್ಯ ಗೊತ್ತಿದೆಯಲ್ಲ. ಅದು ಯಾರ ಮೇಲೆ ಮಾಡಿದ್ದು ತಿಳಿದಿದೆಯಲ್ಲ. ಸುರಕ್ಷತಾ ವ್ಯವಸ್ಥೆ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ಶ್ರೀನಗರದಲ್ಲಿ ಹಿಮಪಾತ – ಕೊಡಗು ಮೂಲದ ಯೋಧ ಹುತಾತ್ಮ

ಹಿಜಬ್ ಪ್ರಕರಣ ಶುರುವಾಗಿದ್ದು ಪಿಎಫ್‍ಐಯಿಂದ. ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿಯೇ ಬರುತ್ತಿದ್ದರು ಎಂದು ಕಾಲೇಜಿನವರೇ ಹೇಳಿದ್ದಾರೆ. 6 ಹೆಣ್ಣುಮಕ್ಕಳ ತಲೆಯಲ್ಲಿ ಮತೀಯತೆ ತುಂಬಿ, ಮುಸ್ಲಿಂ ಹೆಣ್ಣು ಮಕ್ಕಳಲ್ಲಿ ಪ್ರತ್ಯೇಕತಾ ಭಾವನೆ ಮೂಡುವಂತೆ ಮಾಡಿದರು ಎಂದು ಕಿಡಿಕಾರಿದರು.

ಹರ್ಷ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆ ಬೃಹತ್ ಪ್ರತಿಭಟನೆಗೂ ಮುನ್ನ ಒಂದು ನಿಮಿಷ ಮೌನಾಚರಣೆ ಮೂಲಕ ಹರ್ಷನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಟೌನ್ ಹಾಲ್‍ನಲ್ಲಿ ಭದ್ರತೆಗೆ 250 ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಲಾಗಿತ್ತು. ಬೇರೆ ಬೇರೆ ಭಾಗದಿಂದ ಪ್ರತಿಭಟನಕಾರರು ಆಗಮಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ಟ್ರಾಫಿಕ್ ಪೊಲೀಸ್ ನಿಯೋಜನೆ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *