ಐಪಿಎಲ್‌ನಲ್ಲಿ ಮೊದಲ ಶತಕ – ಕೋಲ್ಕತ್ತಾ ಬೌಲರ್‌ಗಳನ್ನು ಚೆಂಡಾಡಿದ ಬ್ರೂಕ್‌

Public TV
1 Min Read

ಕೋಲ್ಕತ್ತಾ: ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡದ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್‌ (Harry Brook) ಈ ಐಪಿಎಲ್‌ (IPL 2023) ಅವೃತ್ತಿಯಲ್ಲಿ ಮೊದಲ ಶತಕ (Century) ಸಿಡಿಸಿದ್ದಾರೆ.

ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧದ ಪಂದ್ಯದಲ್ಲಿ 55 ಎಸೆತಗಳಲ್ಲಿ ಔಟಾಗದೇ 100 ರನ್‌ (12 ಬೌಂಡರಿ, 3 ಸಿಕ್ಸರ್‌) ಚಚ್ಚಿದ್ದಾರೆ. ಪರಿಣಾಮ ಹೈದರಾಬಾದ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 228 ರನ್‌ ಗಳಿಸಿದೆ. ಇದು ಈ ಐಪಿಎಲ್‌ನಲ್ಲಿ ತಂಡವೊಂದರ ಟಾಪ್‌ ಸ್ಕೋರ್‌ ಆಗಿರುವುದು ವಿಶೇಷ.

ಮೊದಲ 32 ಎಸೆತಗಳಲ್ಲಿ 50 ರನ್‌ ಬಂದರೆ ನಂತರ 33 ಎಸೆತದಲ್ಲಿ ಬ್ರೂಕ್‌ 50 ರನ್‌ ಚಚ್ಚಿದ್ದಾರೆ. ಹೈದರಾಬಾದ್‌ ಪರ ನಾಯಕ ಐಡೆನ್ ಮಾರ್ಕ್ರಾಮ್ 50 ರನ್‌(26 ಎಸೆತ, 2 ಬೌಂಡರಿ, 5 ಸಿಕ್ಸರ್‌), ಅಭಿಷೇಕ್‌ ಶರ್ಮಾ 32 ರನ್‌(17 ಎಸೆತ, 3 ಬೌಂಡರಿ, 2 ಸಿಕ್ಸರ್)‌, ಕ್ಲಾಸೆನ್‌ ಔಟಾಗದೇ 1 6 ರನ್‌( 6 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದರು. ಇತರೇ ರೂಪದಲ್ಲಿ 12 ರನ್‌ (1 ನೋಬಾಲ್‌, 11 ವೈಡ್‌) ಬಂದಿತ್ತು.

ರನ್‌ ಏರಿದ್ದು ಹೇಗೆ?
50 ರನ್‌ – 26 ಎಸೆತ
100 ರನ್‌ – 66 ಎಸೆತ
150 ರನ್‌ – 59 ಎಸೆತ
200 ರನ್‌ – 109 ಎಸೆತ
228 ರನ್‌ – 120 ಎಸೆತ

Share This Article