ಎಂಗೇಜ್‌ಮೆಂಟ್‌ ರಿಂಗ್ ಹಿಂದಿರುವ ಸೀಕ್ರೆಟ್ ಬಿಚ್ಚಿಟ್ಟ ನಟಿ ಹರಿಪ್ರಿಯಾ

Public TV
1 Min Read

ಸ್ಯಾಂಡಲ್‌ವುಡ್‌ನಲ್ಲಿ (Sandalwood) `ಸಿಂಹಪ್ರಿಯ’ (SimhaPriya) ಜೋಡಿ ಹಸೆಮಣೆ ಏರಲು ರೆಡಿಯಾಗಿದೆ. ಇತ್ತೀಚೆಗಷ್ಟೇ ವಸಿಷ್ಠ (Vasista) ಮತ್ತು ಹರಿಪ್ರಿಯಾ (Haripriya) ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದರು. ಇದೀಗ ಈ ಎಂಗೇಜ್‌ಮೆಂಟ್ ರಿಂಗ್ ಹಿಂದಿರುವ ಸೀಕ್ರೆಟ್ ಅನ್ನ ನಟಿ ಹರಿಪ್ರಿಯಾ ರಿವೀಲ್ ಮಾಡಿದ್ದಾರೆ.

ಚಂದನವನದ ಪ್ರತಿಭಾನ್ವಿತ ನಟ ವಸಿಷ್ಠ ಮತ್ತು ಹರಿಪ್ರಿಯಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಡಿ.3ರಂದು ಕುಟುಂಬಸ್ಥರ ಮುಂದೆ ಎಂಗೇಜ್ ಆದ್ರು. ಈ ಬಗ್ಗೆ ಸ್ಪೆಷಲ್ ಪೋಸ್ಟ್ ಹಂಚಿಕೊಂಡು ನಿಶ್ಚಿತಾರ್ಥದ ಬಗ್ಗೆ ರಿವೀಲ್ ಮಾಡಿದ್ದರು. ಇದೀಗ ತಮ್ಮ ನಿಶ್ಚಿತಾರ್ಥದ ಉಂಗುರ ಹೇಗಿದೆ ಎಂಬುದರ ರಿವೀಲ್ ಮಾಡಿದ್ದಾರೆ. ಸ್ಪೆಷಲ್ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಟಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?

 

View this post on Instagram

 

A post shared by Hariprriya (@iamhariprriya)

ಸಾಮಾನ್ಯಕ್ಕಿಂತ ವಿಭಿನ್ನವಾಗಿರುವುದು ನನ್ನ ಆಯ್ಕೆ ಆಗಿರುತ್ತದೆ. ಸಿಂಹದ ಚಿಹ್ನೆ ನನ್ನ ಎಂಗೇಜ್‌ಮೆಂಟ್‌ ರಿಂಗ್ ಮೇಲೆ ಇರಬೇಕು ಎಂಬುದು ನನ್ನ ಆಯ್ಕೆ ಆಗಿತ್ತು. ಜೀವನ ಪೂರ್ತಿ ನಮ್ಮ ಜೊತೆಯಿರುವ ಉಂಗುರ ಇದಾಗಲಿದೆ. ಕಸ್ಟಮ್ ಡಿಸೈನರ್‌ಗಳ ಜೊತೆ ಸೇರಿಕೊಂಡು ನಾವು ಈ ಡಿಸೈನ್ ಮಾಡಿಸಿದ್ದೇವೆ. ನಮ್ಮ ಉಂಗುರ ಹೇಗಿದೆ ನೋಡಿ. ಈ ರೀತಿ ಮೂಡಿ ಬಂದಿರುವುದಕ್ಕೆ ತುಂಬಾನೇ ಖುಷಿಯಿದೆ ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ. ಇನ್ನೂ ಮುಂದಿನ ವರ್ಷ ಈ ಜೋಡಿ ಹಸೆಮಣೆ ಏರಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *