ಹರಿಪ್ರಸಾದ್ ವೈಯಕ್ತಿಕ ಅಸಮಾಧಾನ ಹೊರಹಾಕ್ತಿದ್ದಾರೆ, ಹೈಕಮಾಂಡ್‌ ನೋಡಿಕೊಳ್ಳುತ್ತೆ – ಸಚಿವ ಬೋಸರಾಜು

Public TV
2 Min Read

ರಾಯಚೂರು: ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ತಮ್ಮ ವೈಯಕ್ತಿಕ ಅಸಮಾಧಾನ ಹೊರಹಾಕುತ್ತಿದ್ದಾರೆ. ಎಲ್ಲೂ ಪಕ್ಷ ಹಾಗೂ ಸಿದ್ದರಾಮಯ್ಯ (Siddaramaiah) ಹೆಸರು ಬಳಕೆ ಮಾಡಿಲ್ಲ. ಅವರ ಅಸಮಾಧಾನ ಹೈಕಮಾಂಡ್ ನೋಡಿಕೊಂಡು ಸರಿಪಡಿಸುತ್ತೆ ಅಂತ ಸಚಿವ ಎನ್.ಎಸ್ ಬೋಸರಾಜು (NS Bosaraju) ಹೇಳಿದ್ದಾರೆ.

ರಾಯಚೂರಿನಲ್ಲಿ (Raichur) ಮಾತನಾಡಿದ ಎನ್.ಎಸ್.ಬೋಸರಾಜು ಕಾಂಗ್ರೆಸ್ ಪಕ್ಷದಲ್ಲಿ ಏನೇ ನಿರ್ಧಾರ ಆಗಬೇಕಾದರೂ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರುತ್ತೆ. ಬಿ.ಕೆ ಹರಿಪ್ರಸಾದ್ ನಮ್ಮ ಪಕ್ಷದ ಹಿರಿಯ ನಾಯಕರು. ಸಂಪುಟದಲ್ಲಿ ಸ್ಥಾನಮಾನ ಸಿಗುತ್ತೆ ಅಂತ ನಿರೀಕ್ಷೆ ಹೊಂದಿದ್ದರು. ಅವರಿಗೆ ಮಂತ್ರಿ ಸ್ಥಾನ ಸಿಗುತ್ತೆ ಅಂತ ಮಾತಿತ್ತು, ಏನಾಯ್ತೋ ಗೊತ್ತಿಲ್ಲ ಅದು ಹೈಕಮಾಂಡ್ ತೀರ್ಮಾನ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಕುಂಬ್ಳೆಗೂ ತಟ್ಟಿದ ಬೆಂಗಳೂರು ಬಂದ್ ಬಿಸಿ – ಬಿಎಂಟಿಸಿಯಲ್ಲಿ ಪ್ರಯಾಣʼ

ನಮ್ಮ ಪಕ್ಷದಲ್ಲಿ ಯಾರೇ ಸಿಎಂ ಇರಲಿ, ಯಾರೇ ಪಕ್ಷದ ಅಧ್ಯಕ್ಷರಿರಲಿ ಅಂತಿಮ ತೀರ್ಮಾನ ಹೈಕಮಾಂಡ್ ಮಾಡುತ್ತೆ. ಸಿದ್ದರಾಮಯ್ಯನವರ ಹೆಸರನ್ನ ಎಲ್ಲೂ ನೇರವಾಗಿ ಹೇಳಿಲ್ಲ, ಆದ್ರೆ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಸಂಪರ್ಕವಿದೆ, ಹೈಕಮಾಂಡ್ ಜೊತೆ ವಿಶ್ವಾಸವಿಟ್ಟುಕೊಂಡಿದ್ದಾರೆ. ಹರಿಪ್ರಸಾದ ಭಾಷಣದಲ್ಲಿ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದಾರೆ ಅಂತ ಕೆಲವರು ತಿಳಿದುಕೊಂಡಿರಬಹುದು. ಅವರು ಯಾವುದೇ ನಾಯಕರ ಹೆಸರನ್ನ ನೇರವಾಗಿ ಬಳಸಿ ಮಾತಾಡಿಲ್ಲ. ಹಿಂದುಳಿದ ವರ್ಗಗಳ ಸಭೆ ಮಾಡಿದ್ದಾರೆ. ಅಷ್ಟುಬಿಟ್ಟರೆ ಪಕ್ಷದ ಬಗ್ಗೆ, ಪಕ್ಷದ ನಾಯಕರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಸಮಸ್ಯೆಯಿದ್ದರೆ ಹೈಕಮಾಂಡ್ ಸರಿಪಡಿಸುವ ಕೆಲಸ ಮಾಡುತ್ತೆ ಎಂದಿದ್ದಾರೆ.

ಜಿ.ಪರಮೇಶ್ವರ್‌ ಅವರಿಗೆ ಸಿಎಂ ಸ್ಥಾನ ತಪ್ಪಿಸುವಂತಹ ಪ್ರಶ್ನೆಯೇ ಬರುವುದಿಲ್ಲ. ರಾಜ್ಯದ ರಾಜಕೀಯ ಸ್ಥಿತಿಗತಿ ನೋಡಿಕೊಂಡು ಹೈಕಮಾಂಡ್ ನಿಂದ ಸಿಎಂ ಆಯ್ಕೆ ಆಗಿರುತ್ತೆ. ಹರಿಪ್ರಸಾದ್‌ ಅವರ ಅಸಮಾಧಾನವನ್ನ ಹೈಕಮಾಂಡ್ ಸರಿಪಡಿಸುತ್ತೆ ಇದು ಮುಂದುವರಿಯಲ್ಲ ಅಂತ ಬೋಸರಾಜು ಹೇಳಿದ್ದಾರೆ. ಇದನ್ನೂ ಓದಿ: ಖಾಸಗಿ ಸಾರಿಗೆ ಒಕ್ಕೂಟದ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 5,500 ಕೋಟಿ ಬೇಕು: ರಾಮಲಿಂಗಾ ರೆಡ್ಡಿ

ಜೆಡಿಎಸ್‌ಗೆ ತತ್ವಸಿದ್ಧಾಂತಕ್ಕಿಂತ ಪಕ್ಷ ಮುಖ್ಯ:
ಇದೇ ವೇಳೆ ಜೆಡಿಎಸ್- ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಸಚಿವರು, ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ 123 ಸೀಟು ಬರುತ್ತೆ ಅಂತಾ ಹೇಳಿದ್ದರು, ಆದ್ರೆ ಬಂದಿರೋದು ಕೇವಲ 19 ಸೀಟು. ಪಕ್ಷ ಉಳಿಯುವುದಕ್ಕಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಅಂತ ದೇವೆಗೌಡರು ಹೇಳಿದ್ದಾರೆ. ಪಕ್ಷ ಉಳಿವಿಗಾಗಿ ಮೋದಿಯವರ ಜೊತೆ ಮಾತನಾಡಿದ್ದೇನೆ ಅಂತ ಹೇಳಿದ್ದಾರೆ. ತತ್ವಸಿದ್ಧಾಂತಗಳು ಅವರಿಗೆ ಮುಖ್ಯ ಅಲ್ಲಾ ಪಕ್ಷ ಮುಖ್ಯ. ಪ್ರತಿ ಬಾರಿ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದಾಗ ಬಿಜೆಪಿ ಜೊತೆ ಸೇರಿದರು, ನಮ್ಮ ಜೊತೆಯೂ ಮೈತ್ರಿ ಮಾಡಿಕೊಂಡಿದ್ದರು. ಈಗ ಪುನಃ ಬಿಜೆಪಿ ಜೊತೆ ಸೇರುತ್ತಿದ್ದಾರೆ. ಅಧಿಕಾರಕ್ಕಾಗಿ ಜೆಡಿಎಸ್‌ನವರು ಮೈತ್ರಿ ಮಾಡಿಕೊಳ್ಳುತ್ತಾರೆ. ಅವರ ಮೈತ್ರಿಯಿಂದ ನಮಗೆ ಭಯವಿಲ್ಲ ನಮ್ಮ ಭಯಕ್ಕೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಅಂತ ತಿರುಗೇಟು ನೀಡಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್