#HarGharTiranga: ಮೋದಿ ಕರೆಗೆ ಓಗೊಟ್ಟು ಡಿಪಿ ಬದಲಿಸಿ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್‌ ಕಳೆದುಕೊಂಡ BCCI

By
2 Min Read

ನವದೆಹಲಿ: 77ನೇ ಸ್ವಾತಂತ್ರ್ಯ ದಿನಾಚರಣೆ ಬೆನ್ನಲ್ಲೇ ʻಹರ್‌ ಘರ್‌ ತಿರಂಗಾʼ (HarGharTiranga) ಅಭಿಯಾನ ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಡಿಪಿ ಚಿತ್ರದಲ್ಲಿ ರಾಷ್ಟ್ರ ಧ್ವಜ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಗೆ ಓಗೊಟ್ಟು, ಡಿಪಿ ಬದಲಿಸಿದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟ್ವಿಟ್ಟರ್‌ (X)‌ ಖಾತೆಯಲ್ಲಿ ಬ್ಲೂ ಟಿಕ್‌ ಕಳೆದುಕೊಂಡಿದೆ.

ಆಗಸ್ಟ್ 15 ರಂದು ದೇಶಾದ್ಯಂತ ಆಚರಿಸಲಾಗುವ 77ನೇ ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ, ಮೋದಿ (NarendraModi) ಅವರು ತಮ್ಮ ಪ್ರೊಫೈಲ್ ಚಿತ್ರಗಳ ಬದಲಿಗೆ ರಾಷ್ಟ್ರ ಧ್ವಜದ ಚಿತ್ರ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಅದರಂತೆ ವೆಸ್ಟ್‌ ಇಂಡೀಸ್‌ ವಿರುದ್ಧ ಅಂತಿಮ ಟಿ20 ಪಂದ್ಯಕ್ಕೂ ಮುನ್ನ ಬಿಸಿಸಿಐ ಟ್ವಿಟ್ಟರ್‌ ಡಿಪಿಯಲ್ಲಿ ಬಿಸಿಸಿಐ ಲೋಗೋ ಬದಲಿಗೆ ರಾಷ್ಟ್ರ ಧ್ವಜದ ಚಿತ್ರ ಹಾಕಿಕೊಂಡಿತು. ಇದನ್ನೂ ಓದಿ: ಸೋಲುವುದು ಕೂಡ ಒಳ್ಳೆಯದೇ, ಒಂದು ಸರಣಿ ಮ್ಯಾಟರ್‌ ಅಲ್ವೇ ಅಲ್ಲ – ಪಾಂಡ್ಯ ಸಮರ್ಥನೆ

ಈ ಕಾರಣಕ್ಕೆ ಬಿಸಿಸಿಐ ತನ್ನ ಟ್ವಿಟ್ಟರ್‌ ಹ್ಯಾಂಡಲ್​​ನಲ್ಲಿ ತನ್ನ ಬ್ಲೂ ಟಿಕ್ ಕಳೆದುಕೊಂಡಿತು. ಎಕ್ಸ್​​ನ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಎಕ್ಸ್ ಮ್ಯಾನೇಜ್ಮೆಂಟ್​ನ ಈಗ ಬಿಸಿಸಿಐನ ಪ್ರೊಫೈಲ್ ಅನ್ನು ಪರಿಶೀಲನೆ ನಡೆಸಬೇಕಾಗಿದೆ. ಬಿಸಿಸಿಐ ತನ್ನ ಲೋಗೋ ಬದಲಿಸಿದ ಬಳಿಕ ಎಲ್ಲ ಮಾರ್ಗಸೂಚಿಗಳನ್ನ ಪೂರೈಸಿದರೆ ಮಾತ್ರ ಬ್ಲ್ಯೂಟಿಕ್ ಮರುಸ್ಥಾಪನೆಯಾಗಲಿದೆ. ಸ್ವಾತಂತ್ರ್ಯ ದಿನಾಚರಣೆಯ ನಂತರ, ಬಿಸಿಸಿಐ ತನ್ನ ಮೂಲ ಲೋಗೋಗೆ ಮರಳಲಿದೆ. ಇದನ್ನೂ ಓದಿ: ನಾಟೌಟ್‌ ಅನ್ನು ಔಟ್‌ ಅಂತಾ ಬಿಟ್ಟುಕೊಟ್ರಾ? – DRS ತೆಗೆದುಕೊಳ್ಳದೇ ವಿಂಡೀಸ್‌ ವಿರುದ್ಧ ಮಕ್ಕರ್‌ ಆದ ಗಿಲ್‌

ವಿಂಡೀಸ್‌ ವಿರುದ್ಧ ಸರಣಿ ಸೋಲು:
5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಾಧ್ಯವಾಯಿತು. 166 ರನ್‌ಗಳ ಗುರಿ ಪಡೆದ ವಿಂಡೀಸ್ 18 ಓವರ್‌ಗಳಲ್ಲೇ ಕೇವಲ 2 ವಿಕೆಟ್ ನಷ್ಟಕ್ಕೆ 171 ರನ್ ಚಚ್ಚಿ ಜಯ ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 3-2 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿತು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್