ಗೆಳತಿ ಜೊತೆ 12 ಕೋಟಿ ಮೌಲ್ಯದ ಫೆರಾರಿಯಲ್ಲಿ ಪಾಂಡ್ಯ ಸುತ್ತಾಟ – ಕಾರಿನ ವಿಶೇಷತೆ ಏನು?

1 Min Read

ಮುಂಬೈ: ಟಿ20 ವಿಶ್ವಕಪ್‌ನಲ್ಲಿ ಆಲ್‌ರೌಂಡರ್‌ ಪ್ರದರ್ಶನ ನೀಡಿದ ಹಾರ್ದಿಕ್‌ ಪಾಂಡ್ಯ (Hardik Pandya) ಹೊಸ ಸೂಪರ್‌ ಕಾರು (Super Car) ಖರೀದಿಸಿದ್ದಾರೆ.

12 ಕೋಟಿ ರೂ. ಮೌಲ್ಯದ ಕಪ್ಪು ಬಣ್ಣದ ಐಷಾರಾಮಿ ಫೆರಾರಿ 12 ಸಿಲಿಂಡ್ರಿಯನ್ನು(Ferrari 12Cilindri ) ಖರೀದಿಸಿ ಗೆಳತಿ ಮಹೀಕಾ ಶರ್ಮಾ(Mahieka Sharma) ಜೊತೆ ರೌಂಡ್ಸ್‌ ಹಾಕಿದ್ದಾರೆ.

ಈಗಾಗಲೇ ಪಾಂಡ್ಯ ಜೊತೆ ರೋಲ್ಸ್ ರಾಯ್ಸ್ ಫ್ಯಾಂಟಮ್, ಲಂಬೋರ್ಘಿನಿ ಹುರಾಕನ್ ಇವಿಒ, ಲಂಬೋರ್ಘಿನಿ ಉರಸ್, ಮರ್ಸಿಡಿಸ್-ಎಎಂಜಿ ಜಿ63, ರೇಂಜ್ ರೋವರ್ ವೋಗ್ ಮತ್ತು ಔಡಿ ಎ6 ನಂತಹ ಕಾರುಗಳ ಜೊತೆ ಹೊಸದಾಗಿ ಫೆರಾರಿ 12 ಸಿಲಿಂಡ್ರಿ ಸೇರ್ಪಡೆಯಾಗಿದೆ. ಇದನ್ನೂ ಓದಿ: ಭಾರತ ಟಿ20 ವಿಶ್ವಕಪ್‌ ಗೆದ್ದ ಖುಷಿಗೆ ಉದ್ಯೋಗಿಗಳಿಗೆ ತಲಾ 2,000 ರೂ. ಗಿಫ್ಟ್‌ ಕೊಟ್ಟ ಕೇರಳ ಉದ್ಯಮಿ

ಕಾರಿನ ವಿಶೇಷತೆ ಏನು?
6.5-ಲೀಟರ್ V12 ಎಂಜಿನ್ ಹೊಂದಿರುವ ಕಾರಿನ ಗರಿಷ್ಠ ಶಕ್ತಿ 9,500 rpm ನಲ್ಲಿ 818 bhp ಆಗಿದ್ದು, ಗರಿಷ್ಠ ಟಾರ್ಕ್ 7,250 rpm ನಲ್ಲಿ 678 Nm ಆಗಿದೆ. ಗಂಟೆಗೆ 340 ಕಿ.ಮೀ. ಗರಿಷ್ಠ ವೇಗ ಹೊಂದಿರುವ ಈ ಕಾರು ಕೇವಲ 2.9 ಸೆಕೆಂಡುಗಳಲ್ಲಿ 0 ರಿಂದ 100 ತಲುಪುತ್ತದೆ. ಚಾಲಕ ಸೇರಿದಂತೆ ಇಬ್ಬರು ಕುಳಿತುಕೊಳ್ಳಬಹುದಾದ ಕಾರಿನಲ್ಲಿ 92 ಲೀಟರ್‌ ಇಂಧನ ತುಂಬಿಸಬಹುದು.

32 ವರ್ಷದ ಪಾಂಡ್ಯ ಟಿ20 ವಿಶ್ವಕಪ್‌ನ 9 ಇನ್ನಿಂಗ್ಸ್‌ಗಳಲ್ಲಿ 27.12 ಸರಾಸರಿ ಮತ್ತು 160.74 ಸ್ಟ್ರೈಕ್ ರೇಟ್‌ನಲ್ಲಿ 217 ರನ್ ಹೊಡೆದಿದ್ದಾರೆ. ಎರಡು ಅರ್ಧಶತಕದೊಂದಿಗೆ 9 ವಿಕೆಟ್‌ ಕಿತ್ತಿದ್ದಾರೆ. . ಐಸಿಸಿ ಟಿ20 ವಿಶ್ವಕಪ್‌ ನಂತರ ಪ್ರಕಟಿಸಿದ ಆಲ್‌ರೌಂಡರ್‌ ರ‍್ಯಾಕಿಂಗ್‌ ಪಟ್ಟಿಯಲ್ಲಿ ಪಾಂಡ್ಯ 299 ರೇಟಿಂಗ್‌ನಲ್ಲಿ 2ನೇ ಸ್ಥಾನ ಪಡೆದಿದ್ದಾರೆ.

Share This Article