ಕೆಎಲ್ ರಾಹುಲ್‍ಗೆ ಜನ್ಮದಿನದ ಶುಭ ಕೋರಿದ ಪಾಂಡ್ಯ

Public TV
1 Min Read

– ಐಪಿಎಲ್‍ನಲ್ಲಿ ರಾಹುಲ್ ವಿಶೇಷ ಸಾಧನೆ

ಮೊಹಾಲಿ: ಟೀಂ ಇಂಡಿಯಾ ಯುವ ಆಟಗಾರ ಕೆಎಲ್ ರಾಹುಲ್ ಇಂದು ತಮ್ಮ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಆಟಗಾರರು ರಾಹುಲ್‍ಗೆ ಶುಭಕೋರಿದ್ದಾರೆ.

ಕಾಫಿ ವಿಥ್ ಕರಣ್ ಶೋ ಬಳಿಕ ಟೀಂ ಇಂಡಿಯಾಗೆ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದ ರಾಹುಲ್ ಹಾಗೂ ಪಾಂಡ್ಯ ವಿಶ್ವಕಪ್ ಆಯ್ಕೆ ಆಗಿರುವ ಸಂಭ್ರಮದಲ್ಲಿದ್ದು, ಹಾರ್ದಿಕ್ ಪಾಂಡ್ಯ, ಕೃಣಾಲ್, ಅಕ್ಷರ್ ಪಟೇಲ್ ಅವರೊಂದಿಗೆ ಸಂಭ್ರಮ ಆಚರಿಸಿಕೊಂಡಿದ್ದಾರೆ. ರಾಹುಲ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶುಭ ಕೋರಿರುವ ಹಾರ್ದಿಕ್ ಪಾಂಡ್ಯ, ಇಡೀ ಜೀವನಕ್ಕೆ ನನಗೆ ಸಹೋದರನಿದ್ದಂತೆ ನಡೆದಿದ್ದನ್ನು ಹೊರತು ಪಡಿಸಿ ಈ ವರ್ಷವನ್ನು ಸ್ಮರಣೀಯವಾಗಿಸೋಣ ಎಂದು ಬರೆದುಕೊಂಡಿದ್ದಾರೆ.

https://www.instagram.com/p/BwXevAylkLI/?utm_source=ig_embed

ಇತ್ತ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಅರ್ಧ ಶತಕಗಳಿಸಿ ತಂಡದ ಗೆಲುವಿಗೆ ರಾಹುಲ್ ಕಾರಣರಾಗಿದ್ದರು. ಈ ಬಾರಿಯ ಐಪಿಎಲ್ ನಲ್ಲಿ ಮೊದಲ ಶತಕ ಸಿಡಿಸಿದ್ದ ರಾಹುಲ್, 23 ಪಂದ್ಯಗಳಿಂದ 1 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಐಪಿಎಲ್ ನಲ್ಲಿ 1 ಸಾವಿರ ರನ್ ಪೂರೈಸಿದ 8ನೇ ಆಟಗಾರರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *