ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಪಾಂಡ್ಯ

1 Min Read

ಗುವಾಹಟಿ: ಮಂಗಳವಾರ ಇಲ್ಲಿ ನಡೆದ ಐಪಿಎಲ್‌ (IPL) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ರಾಜಸ್ಥಾನ ರಾಯಲ್ಸ್ (Rajasthan Royals,) ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿ 27 ರನ್​ಗಳ ಜಯ ಸಾಧಿಸಿತ್ತು. ಇನ್ನೂ ತಮ್ಮ ತಂಡದ ಸೋಲಿನ ಬಗ್ಗೆ ಪಂದ್ಯದ ನಂತರ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮಾತನಾಡಿದ್ದಾರೆ.

‘ಪವರ್‌ಪ್ಲೇ ಸಮಯದಲ್ಲಿ ನಮ್ಮ ಬೌಲರ್ಸ್ ತಮ್ಮ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ವಿಫಲರಾದರು. ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ನನಗೆ ದಿಗ್ಭ್ರಮೆಯನ್ನುಂಟು ಮಾಡಿತು. ಭವಿಷ್ಯದಲ್ಲಿ ಈ ಯುವಕ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಾನೆ. ವೈಭವ್ ಹಾಗೂ ಜೈಸ್ವಾಲ್ ಅದ್ಭುತ ಆರಂಭ ನೀಡಿದರು. ಅವರಿಬ್ಬರ ಜೊತೆಯಾಟ ದೊಡ್ಡ ಸ್ಕೋರ್‌ಗೆ ಕಾರಣವಾಯಿತು. ಇದು ನಮ್ಮ ಸೋಲಿಗೆ ಕಾರಣವಾಯಿತು ಎಂದಿದ್ದಾರೆ. ಇದನ್ನೂ ಓದಿ: ಬುಮ್ರಾಗೆ 2 ಸಿಕ್ಸ್‌ – ಮತ್ತೆ 5 ಸಿಕ್ಸ್‌ ಸಿಡಿಸಿದ ಸೂರ್ಯವಂಶಿ

ಬೌಲಿಂಗ್ ವೈಫಲ್ಯ
ನಮ್ಮ ಬೌಲಿಂಗ್ ವೈಫಲ್ಯ ಸಹ ಸೋಲಿಗೆ ಪ್ರಮುಖ ಕಾರಣ. ಖಂಡಿತವಾಗಿಯೂ ನಮ್ಮ ಬ್ಯಾಟಿಂಗ್ ಅಲ್ಲ. ನಮ್ಮ ಯೋಜನೆಗಳ ಪ್ರಕಾರ ಬೌಲಿಂಗ್ ಮಾಡಲು ನಮಗೆ ಸಾಧ್ಯವಾಗಲಿಲ್ಲ. ರಾಜಸ್ಥಾನ ರಾಯಲ್ಸ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿತು. ನಮ್ಮ ಬೌಲರ್‌ಗಳು ಈ ಸೋಲಿಗೆ ಜವಾಬ್ದಾರರಾಗಿರಬೇಕು. ರಾಜಸ್ಥಾನ ನಿಜವಾಗಿಯೂ ಅಸಾಧಾರಣವಾಗಿ ಆಡಿತು ಎಂದಿದ್ದಾರೆ.

5 ಉತ್ತಮ ಎಸೆತಗಳಿದ್ದಿದ್ದರೆ
ಟಿ20 ಕ್ರಿಕೆಟ್‌ನಲ್ಲಿ, ಪಂದ್ಯದ ಫಲಿತಾಂಶವು ಕೇವಲ ಎರಡು ಎಸೆತಗಳಲ್ಲಿ ಬದಲಾಗಬಹುದು ನಾವು 27 ರನ್‌ಗಳ ಅಂತರದಿಂದ ಸೋತಿದ್ದೇವೆ ಎಂಬ ಅಂಶ ನಾವು 5 ಎಸೆತಗಳನ್ನು ಉತ್ತಮವಾಗಿ ಬೌಲಿಂಗ್ ಮಾಡಬೇಕಾಗಿತ್ತು ಎಂಬುದನ್ನು ಸೂಚಿಸುತ್ತದೆ. ಆ ಐದು ಸಿಕ್ಸರ್‌ಗಳನ್ನು ಬಿಟ್ಟುಕೊಡದಿದ್ದರೆ ನಾವು ನಿಸ್ಸಂದೇಹವಾಗಿ ಈ ಪಂದ್ಯ ಗೆಲ್ಲುತ್ತಿದ್ದೆವು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯನ್ನು ಶ್ಲಾಘಿಸಿದ್ದಾರೆ. 15 ವರ್ಷದ ಆಟಗಾರನ ಭರ್ಜರಿ ಆಟದಿಂದ ನಾನು ಆಕರ್ಷಿತನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: IPL 2026 | ರಾಜಸ್ಥಾನ ರಾಯಲ್ಸ್‌ Vs ಮುಂಬೈ ಇಂಡಿಯನ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ

Share This Article