IPL 2026 | DC vs MI ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಡ್ತಿಲ್ಲ ಯಾಕೆ?

1 Min Read

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ (Mumbai Indians) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ನಡುವಿನ ಇಂದಿನ ಐಪಿಎಲ್‌ ಪಂದ್ಯದಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮಿಸ್‌ ಆಗಿದ್ದಾರೆ. ಪಾಂಡ್ಯ ಅನುಪಸ್ಥಿತಿಯಲ್ಲಿ, ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಟಾಸ್ ಸಮಯದಲ್ಲಿ ಪಾಂಡ್ಯ ಇಂದು ಏಕೆ ಆಡುತ್ತಿಲ್ಲ ಎಂದು ಕೇಳಿದಾಗ, ಹಾರ್ದಿಕ್ ಆರೋಗ್ಯ ಸರಿ ಇಲ್ಲ. ಆದ್ದರಿಂದ, ಅವರ ಸ್ಥಾನದಲ್ಲಿ ಸೀಮರ್ ದೀಪಕ್ ಚಾಹರ್ ಆಡುತ್ತಿದ್ದಾರೆ ಎಂದು ನಾಯಕ ಸೂರ್ಯಕುಮಾರ್ (Suryakumar) ಹೇಳಿದ್ದಾರೆ. ದೆಹಲಿ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.‌ ಇದನ್ನೂ ಓದಿ: ಶ್ರೇಯಸ್‌ ಅಯ್ಯರ್‌ಗೆ 24 ಲಕ್ಷ ದಂಡ – ಪಂಜಾಬ್‌ ಕ್ಯಾಪ್ಟನ್‌ಗೆ ಕಾಡ್ತಿದೆ ಬ್ಯಾನ್‌ ಭೀತಿ

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ನಮನ್ ಧೀರ್, ಶೆರ್ಫೇನ್ ರುದರ್ಫೋರ್ಡ್, ಮಿಚೆಲ್ ಸ್ಯಾಂಟ್ನರ್, ಕಾರ್ಬಿನ್ ಬಾಷ್, ಶಾರ್ದುಲ್ ಠಾಕೂರ್, ದೀಪಕ್ ಚಾಹರ್, ಜಸ್ಪ್ರಿತ್ ಬುಮ್ರಾ.

ಇಂಪ್ಯಾಕ್ಟ್ ಪ್ಲೇಯರ್: ಮಯಾಂಕ್ ಮಾರ್ಕಂಡೆ, ಟ್ರೆಂಟ್ ಬೌಲ್ಟ್, ರಾಜ್ ಬಾವಾ, ಅಶ್ವನಿ ಕುಮಾರ್, ರಾಬಿನ್ ಮಿಂಜ್.

ಡೆಲ್ಲಿ ಕ್ಯಾಪಿಟಲ್ಸ್: ಕೆಎಲ್ ರಾಹುಲ್ (ವಿಕೆ), ಪಾತುಮ್ ನಿಸ್ಸಂಕಾ, ನಿತೀಶ್ ರಾಣಾ, ವಿಪ್ರಜ್ ನಿಗಮ್, ಅಕ್ಷರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಕುಲದೀಪ್ ಯಾದವ್, ಲುಂಗಿ ಎನ್‌ಗಿಡಿ, ಟಿ ನಟರಾಜನ್, ಮುಖೇಶ್ ಕುಮಾರ್.

ಇಂಪ್ಯಾಕ್ಟ್ ಪ್ಲೇಯರ್: ಕರುಣ್ ನಾಯರ್, ಅಶುತೋಷ್ ಶರ್ಮಾ, ಸಮೀರ್ ರಿಜ್ವಿ, ದುಷ್ಮಂತ ಚಮೀರ, ಔಕಿಬ್ ನಬಿ. ಇದನ್ನೂ ಓದಿ: ನಾನು ವಿದೇಶಿ ಆಟಗಾರನಾ? – ಕಾಲೆಳೆದ ಮಿಸ್ಟರ್‌ ನಾಗ್ಸ್‌ ಬುಡಕ್ಕೆ ಬೆಂಕಿಯಿಟ್ಟ ಕೊಹ್ಲಿ; ವಿಡಿಯೋ ಫುಲ್‌ ವೈರಲ್‌

Share This Article