ಬರ್ತ್ ಡೇ ವಿಶ್ ತಿಳಿಸಿ ಪೇಚಿಗೆ ಸಿಲುಕಿದ ಪಾಂಡ್ಯ

Public TV
2 Min Read

-ಹಾರ್ದಿಕ್ ವಿಶ್‍ಗೆ ನೆಟ್ಟಿಗರಿಂದ ಕ್ಲಾಸ್

ನವದೆಹಲಿ: ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪೇಚಿಗೆ ಸಿಲುಕಿದ್ದಾರೆ. ಹಾರ್ದಿಕ್ ಶುಭಾಶಯಕ್ಕೆ ಜಹೀರ್ ಖಾನ್ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಗರಂ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕಟು ಪದಗಳಿಂದ ಟೀಕಿಸುತ್ತಿದ್ದಾರೆ. ಹಲವರು ನಯವಾದ ಮಾತುಗಳಿಂದಲೇ ಹಾರ್ದಿಕ್ ಪಾಂಡ್ಯ ಕಾಲೆಳೆಯುತ್ತಿದ್ದಾರೆ.

ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಸೋಮವಾರ ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕ್ರೀಡಾ ವಲಯದ ಗಣ್ಯರು ಸೇರಿದಂತೆ ಶುಭಾಶಯ ಮಹಾಪೂರವೇ ಜಹೀರ್ ಖಾನ್ ಅವರಿಗೆ ಹರಿದು ಬಂದಿತ್ತು. ಸಿನಿಮಾ ತಾರೆಯರು ಸಹ ಶುಭಾಶಯ ತಿಳಿಸಿದ್ದರು. ಅಂತೆಯೇ ಹಾರ್ದಿಕ್ ಪಾಂಡ್ಯ ವಿಡಿಯೋ ಅಪ್ಲೋಡ್ ಮಾಡಿಕೊಂಡು, ಹುಟ್ಟು ಹಬ್ಬದ ಶುಭಾಶಯಗಳು ಜಹೀರ್ ಖಾನ್. ನಾನು ಈ ವಿಡಿಯೋದಲ್ಲಿ ಮಾಡಿದಂತೆ ನೀವೂ ಹೀಗೆ ಮಾಡುತ್ತೀರಿ ಎಂದು ನಾನು ನಂಬುತ್ತೇನೆ ಎಂದು ಬರೆದುಕೊಂಡಿದ್ದರು.

ವಿಡಿಯೋದಲ್ಲಿ ಜಹೀರ್ ಖಾನ್ ಎಸೆದ ಚೆಂಡನ್ನು ಬ್ಯಾಟ್ಸಮನ್ ಬೌಂಡರಿಗೆ ಅಟ್ಟುತ್ತಾನೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಈ ರೀತಿಯ ವಿಡಿಯೋ ಹಾಕೋದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಬಹುತೇಕರು ಹಿರಿಯ ಆಟಗಾರರಿಗೆ ಗೌರವ ನೀಡುವುದನ್ನು ಕಲಿತುಕೊಳ್ಳಿ ಎಂದಿದ್ದಾರೆ.

https://twitter.com/rgis1369/status/1181436486614310913

ಕ್ರಿಕೆಟ್ ಬಗ್ಗೆ ಗೊತ್ತಿಲ್ಲದವರಿಗೆ 2011ರ ವಿಶ್ವಕಪ್ ಗೆಲುವಿನಲ್ಲಿ ಜಹೀರ್ ಖಾನ್ ಮಹತ್ವದ ಪಾತ್ರ ವಹಿಸಿದ್ದರು ಎಂಬುವುದು ನೆನಪಿರಲಿ. ಓರ್ವ ಬೌಲರ್ ಆದ್ರೂ ಜಹೀರ್ ಖಾನ್ ಅಂತರಾಷ್ಟ್ರೀಯ ಆಟದಲ್ಲಿ 53 ಸಿಕ್ಸರ್ ಬಾರಿಸಿದ್ದಾರೆ. ಇಷ್ಟು ಅಲ್ಲದೇ ಬ್ರೇಟ್ ಲೀ, ಶೋಯೆಬ್ ಅಖ್ತರ್ ನಂತವರ ಎಸೆತಗಳನ್ನು ಜಹೀರ್ ಸಮರ್ಥವಾಗಿ ಎದುರಿಸಿದ್ದರು ಎಂದು ನೆಟ್ಟಿಗರು ಜಹೀರ್ ಖಾನ್ ಅವರ ಸಾಧನೆಗಳನ್ನು ತಿಳಿಸುವ ಮೂಲಕ ಪಾಂಡ್ಯಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

https://twitter.com/RoshanKrRai/status/1181199113389408256

ಸದ್ಯ ಭಾರತ, ಸೌಥ್ ಆಫ್ರಿಕಾ ವಿರುದ್ಧ ಪಂದ್ಯಗಳನ್ನು ಆಡುತ್ತಿದೆ. ವಿಶಾಖಪಟ್ಟಣದಲ್ಲಿ ನಡೆದ ಸರಣಿಯ ಮೊದಲ ಪಂದ್ಯವನ್ನು ಭಾರತ 203 ರನ್ ಗಳಿಂದ ತನ್ನದಾಗಿಸಿಕೊಂಡಿತು. ತಂಡದ ಇಬ್ಬರು ಆಟಗಾರರಾದ ಬುಮ್ರಾ ಮತ್ತು ಪಾಂಡ್ಯ ಹೊರಗುಳಿದಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಹಾರ್ದಿಕ್ ಪಾಂಡ್ಯ ಲಂಡನ್ ನಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *