ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಯುವಕರನ್ನ ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರ ಕೆನಡಾದಲ್ಲಿ ಬಂಧನ

Public TV
1 Min Read

ಒಟ್ಟಾವಾ: ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಯುವಕರನ್ನ ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರ (Khalistani Terrorist) ಹಾಗೂ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ ಸಹಾಯಕ ಅರ್ಶ್‌ದೀಪ್‌ ಡಲ್ಲಾನನ್ನ (Arshdeep Dalla) ಕೆನಡಾ ಭದ್ರತಾ ಏಜೆನ್ಸಿ ಅಧಿಕಾರಿಗಳು ಬಂಧಿಸಿದ್ದಾರೆ. ಆದ್ರೆ ಬಂಧಿತನನ್ನ ಜೈಲಿನಲ್ಲಿಟ್ಟಿದ್ದಾರಾ? ಅಥವಾ ಬಿಡುಗಡೆ ಮಾಡಿದ್ದಾರೆಯೇ ಅನ್ನೋ ಮಾಹಿತಿ ಬಹಿರಂಗಪಡಿಸಿಲ್ಲ ಎಂದು ವರದಿಗಳಿಂದ ತಿಳಿದುಬಂದಿದೆ.

ಕಳೆದ ಅಕ್ಟೋಬರ್ 27-28 ರಂದು ಕೆನಡಾದಲ್ಲಿ (Canada) ಮಿಲ್ಟನ್‌ನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿದಂತೆ ಡಲ್ಲಾನನ್ನ ಬಂಧಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ಭದ್ರತಾ ಏಜೆನ್ಸಿಗಳು ಸ್ಪಷ್ಟಪಡಿಸಿವೆ. 28 ವರ್ಷದ ಡಲ್ಲಾ ತನ್ನ ಪತ್ನಿಯೊಂದಿಗೆ ಕೆನಡಾದ ಸರ್ರೆಯಲ್ಲಿ ನೆಲೆಸಿದ್ದಾನೆ ಎಂದು ಭಾರತೀಯ ಭದ್ರತಾ ಏಜೆನ್ಸಿಗಳ ಮೂಲಗಳು ತಿಳಿಸಿವೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದಿಂದ ಕೆನಡಾ-ಭಾರತದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಟ್ರಂಪ್‌ಗೆ `ಎಕ್ಸ್‌’ನಲ್ಲಿ ಪಾಕ್ ಪ್ರಧಾನಿ ಅಭಿನಂದನೆ – ಬ್ಯಾನ್ ಮಾಡಿದ್ದ ಸೋಶಿಯಲ್‌ ಮೀಡಿಯಾ ವೇದಿಕೆ ಬಳಸಿದ್ದಕ್ಕೆ ಜನರ ಆಕ್ಷೇಪ

ಡಲ್ಲಾ ಸುಲಿಗೆ, ಕೊಲೆ ಮತ್ತು ಇತರ ಭಯೋತ್ಪಾದನೆ ಚಟುವಟಿಕೆಗಳಿಗೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣಗಳನ್ನ ದಾಖಲಿಸಲಾಗಿದೆ. ಅಲ್ಲದೇ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಪಂಜಾಬ್‌ನ ಜಾಗರಾನ್‌ನಿಂದ ಎಲೆಕ್ಟ್ರಿಷಿಯನ್ ಪರಮ್‌ಜೀತ್ ಸಿಂಗ್ ಹತ್ಯೆಯ ಹೊಣೆ ಹೊತ್ತುಕೊಂಡ ನಂತರ ಈತನ ವಿರುದ್ಧ ಪಂಜಾಬ್ ಪೊಲೀಸರು ಲುಕ್‌ಔಟ್ ಸುತ್ತೋಲೆ ಜಾರಿಗೊಳಿಸಿದ್ದರು. ಇದನ್ನೂ ಓದಿ: ಯುಪಿ ಪ್ರಧಾನಿ ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಎಣ್ಣೆ, ಮಾಂಸ – ಬ್ರಿಟಿಷ್‌ ಹಿಂದೂಗಳು ಶಾಕ್‌!

ಭಾರತದಲ್ಲಿ ಭಯೋತ್ಪಾದನೆಗೆ ಪ್ರಚೋದನೆ:
ಜೊತೆಗೆ 2020ರ ನವೆಂಬರ್‌ನಲ್ಲಿ ನಡೆದ ಡೇರಾ ಸಚ್ಚಾ ಸೌದಾ ಅನುಯಾಯಿ ಮನೋಹರ್ ಲಾಲ್‌ನನ್ನ ಅಪಹರಣ, ಹತ್ಯೆಗೆ ಸಂಚು ರೂಪಿಸುವ ಪ್ರಕರಣದಲ್ಲೂ ಭಾಗಿಯಾಗಿದ್ದ. ಜೊತೆಗೆ ಭಾರತದಲ್ಲಿ ಭಯೋತ್ಪಾದನೆ ಸಂಬಂಧಿತ ಚಟುವಟಿಕೆ ನಡೆಸಲು ಯುವಕರನ್ನು ಪ್ರೇರೇಪಿಸುತ್ತಿದ್ದ, ಆಮೂಲಾಗ್ರಿಕರಣ ಮಾಡುವಲ್ಲಿ ಪರಿಣಿತನಾಗಿದ್ದ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: ದಿನಕ್ಕೆ ಒಂದಲ್ಲ.. 16 ಬಾರಿ ಆಗುತ್ತೆ ಸೂರ್ಯೋದಯ, ಸೂರ್ಯಾಸ್ತ – ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್‌ಗೆ ಆಗ್ತಿರೋ ಅನುಭವಗಳೇನು?

Share This Article