ಟಿವಿ ಪ್ರೇಕ್ಷಕರಿಗೆ ಗುಡ್ ನ್ಯೂಸ್- ಇನ್ಮುಂದೆ ವಾರದ 7 ದಿನವೂ ಪ್ರಸಾರವಾಗಲಿದೆ ಸೀರಿಯಲ್ಸ್

Public TV
1 Min Read

ಲರ್ಸ್ ಕನ್ನಡ ವಾಹಿನಿ ಸದಾ ಹೊಸ ಬಗೆಯ ಕಥೆಗಳನ್ನು ತೆರೆದಿಡೋದ್ರಲ್ಲಿ ಯಾವಾಗಲೂ ಮುಂದು. ಇದೀಗ ಸೀರಿಯಲ್ (Serial) ಪ್ರಿಯರಿಗೆ ವಾಹಿನಿ ಗುಡ್ ನ್ಯೂಸ್ ನೀಡಿದೆ. ಇದನ್ನೂ ಓದಿ:‘ಅಮರನ್‌’ ಚಿತ್ರದ ಅಬ್ಬರ- ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ಸಿನಿಮಾಗೆ ಪ್ರೇಕ್ಷಕ ಜೈಕಾರ

ಕನ್ನಡದ ಬಿಗ್ ಬಾಸ್ 11ರ ಜೊತೆ ಹಲವು ಸೀರಿಯಲ್‌ಗಳ ಮೂಲಕ ವಾಹಿನಿ ಮನರಂಜನೆ ನೀಡುತ್ತಿದೆ. ಹೊಸ ಕಥೆಗಳನ್ನು ಕೊಡುವ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಿದೆ. ಹೀಗಿರುವಾಗ ಪ್ರೇಕ್ಷಕರಿಗಾಗಿ ವಾಹಿನಿ ಸಿಹಿಸುದ್ದಿ ನೀಡಿದೆ.

ಇಷ್ಟು ದಿನ ವಾಹಿನಿಯ ಸೀರಿಯಲ್‌ಗಳು 7 ದಿನಗಳು ಪ್ರಸಾರ ಕಾಣುತ್ತಿರಲಿಲ್ಲ. ಆದರೆ ಇನ್ಮೇಲೆ ವೀಕ್ಷಕರ ನೆಚ್ಚಿನ ಶೋಗಳು ವಾರದ ಏಳು ದಿನಗಳು ಪ್ರಸಾರವಾಗಲಿದೆ. ಈ ಗುಡ್ ನ್ಯೂಸ್ ಅನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದೆ.

ಕಾರ್ತಿಕ್ ಅತ್ತಾವರ್, ಅಮೂಲ್ಯ ಗೌಡ ನಟನೆಯ ‘ಶ್ರೀಗೌರಿ’ (Shree Gowri), ಶಮಂತ್ ಮತ್ತು ಭೂಮಿಕಾ ನಟನೆಯ ‘ಲಕ್ಷ್ಮಿ ಬಾರಮ್ಮ’, ದಿವ್ಯಾ ಉರುಡುಗ ನಟನೆಯ ‘ನಿನಗಾಗಿ’, ‘ಕರಿಮಣಿ’, ‘ದೃಷ್ಟಿ ಬೊಟ್ಟು’ ಹೀಗೆ ಪ್ರೇಕ್ಷಕರ ಇಷ್ಟದ ಸೀರಿಯಲ್‌ಗಳನ್ನು ವಾರ ಪೂರ್ತಿ ನೋಡುವ ಅವಕಾಶ ಸಿಗುತ್ತಿದೆ. ಈ ಮೂಲಕ ವಾಹಿನಿ ಗುಡ್ ನ್ಯೂಸ್ ಕೊಟ್ಟಿದೆ.

Share This Article