ಹ್ಯಾಪಿ ಬರ್ತ್ ಡೇ ರೋಹಿತ್- ನಿಮಗೆ ಗೊತ್ತಿರದ ‘ದಿ ಹಿಟ್‍ಮ್ಯಾನ್’ 3 ಪ್ರಸಿದ್ಧ ದಾಖಲೆಗಳು

Public TV
2 Min Read

ನವದೆಹಲಿ: ರೋಹಿಟ್, ಹಿಟ್‍ಮ್ಯಾನ್ ಖ್ಯಾತಿಯ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಶರ್ಮಾ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಟೀಂ ಇಂಡಿಯಾ ಸೇರಿದಂತೆ ವಿದೇಶಿ ಕ್ರಿಕೆಟಿಗರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ತಡವಾಗಿ ಮಿಂಚಿದ ರೋಹಿತ್ ಶರ್ಮಾ ಪ್ರಸ್ತುತ ವಿಶ್ವ ಕ್ರಿಕೆಟ್‍ನ ಅತ್ಯುತ್ತಮ ಬ್ಯಾಟ್ಸ್‌ಮನ್‍ಗಳಲ್ಲಿ ಒಬ್ಬರಾಗಿದ್ದಾರೆ. ಅವರು ಅಂತರರಾಷ್ಟ್ರೀಯ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಸ್ಟಾರ್ ಬ್ಯಾಟ್ಸ್‍ಮನ್ ಆಗಿದ್ದಾರೆ. 2019-20ರಲ್ಲಿ ತವರಿನಲ್ಲಿ ಟೆಸ್ಟ್ ಓಪನರ್ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಪ್ರಸ್ತುತ ಪೀಳಿಗೆಯ ಅತ್ಯಂತ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲ್ಪಟ್ಟ ರೋಹಿತ್ 2007ರಲ್ಲಿ ಟೀಂ ಇಂಡಿಯಾಗೆ ಪ್ರವೇಶ ಪಡೆದರು. ಆದಾಗ್ಯೂ ಅವರು ಮೊದಲ ಆರು ವರ್ಷಗಳ ಕಾಲ ಉತ್ತಮ ಪ್ರದರ್ಶನ ನೀಡಲು ಹೆಣಗಾಡಿದರು. ಈ ವೇಳೆ ತಂಡದ ನಾಯಕನಾಗಿದ್ದ ಎಂ.ಎಸ್.ಧೋನಿ ಅವರನ್ನು ಓಪನರ್ ಆಗಿ ಮೈದಾನಕ್ಕಿಳಿಸಿದ ಮೇಲೆ ತಂಡದಲ್ಲಿ ಸ್ಥಾನ ಖಚಿತಪಡೆಸಿಕೊಂಡರು.

ರೋಹಿತ್ ಅವರು ವೈಟ್-ಬಾಲ್ ಕ್ರಿಕೆಟ್‍ನ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 3 ಬಾರಿ ಏಕದಿನ ದ್ವಿಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ರೋಹಿತ್ ಗುರುವಾರ ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇಂದು ‘ದಿ ಹಿಟ್‍ಮ್ಯಾನ್’ ಮೂರು ಪ್ರಸಿದ್ಧ ದಾಖಲೆಗಳನ್ನು ಸ್ಮರಿಸಬೇಕಿದೆ.

ಐಪಿಎಲ್ ಟಿ20 ಶತಕ ದಾಖಲೆ:
ಐಪಿಎಲ್ ಟಿ20 ಪಂದ್ಯದಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದೆ. ಮನೀಶ್ ಪಾಂಡೆ, ಸುರೇಶ್ ರೈನಾ ಅವರಿಗಿಂತ ಮೊದಲೇ ರೋಹಿತ್ ಶತಕ ಸಾಧನೆ ಮಾಡಿದ್ದರು. ಟಿ20 ಕ್ರಿಕೆಟ್ ಭಾರತದಲ್ಲಿ ಅಷ್ಟೊಂದು ಜನಪ್ರಿಯವಾಗದ ಸಮಯದಲ್ಲಿ ರೋಹಿತ್ ಈ ದಾಖಲೆ ಬರೆದ್ದರು. ಹೀಗಾಗಿ ಅದು ಹೆಚ್ಚಾಗಿ ಕ್ರಿಕೆಟ್ ಅಭಿಮಾನಿಗಳ ನೆನಪಿನಲ್ಲಿ ಉಳಿದಿಲ್ಲ.

ಐಪಿಎಲ್‍ನಲ್ಲಿ ಮುಂಬೈ ಪರ ಆಡುತ್ತಿದ್ದ ರೋಹಿತ್ ಗುಜರಾತ್ ವಿರುದ್ಧದ ಟಿ20 ಪಂದ್ಯದಲ್ಲಿ ಈ ಮೈಲಿಗಲ್ಲು ಸಾಧಿಸಿದ್ದರು. ಟೀಂ ಇಂಡಿಯಾದ ಸೀಮಿತ ಓವರ್‍ಗಳ ಉಪನಾಯಕ ಟಿ20 ಪಂದ್ಯದಲ್ಲಿ ಆರು ಶತಕಗಳನ್ನು ಹೊಂದಿದ್ದಾರೆ. ಇದರಲ್ಲಿ ನಾಲ್ಕು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಸಿಡಿಸಿದ ಶತಕಗಳಾಗಿವೆ.

ಟೆಸ್ಟ್ ಕ್ರಿಕೆಟ್:
ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ವಿಶೇಷವೆಂದರೆ ಈ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಅವರು ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. ರೋಹಿತ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದಾರೆ. ಚೊಚ್ಚಲ ಪಂದ್ಯದ ನಂತರ ಸತತ ಶತಕಗಳನ್ನು ಗಳಿಸಿದ ಪ್ರಮುಖ ಆಟಗಾರರ ಪಟ್ಟಿಗೆ ರೋಹಿತ್ ಸೇರಿದರು. ಚೊಚ್ಚಲ ಪಂದ್ಯದ ನಂತರ ಮೂರು ಶತಕಗಳ ಬಾರಿಸುವ ಮೂಲಕ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಸೌರವ್ ಗಂಗೂಲಿ, ಜೇಮ್ಸ್ ನೀಶಮ್, ಬಿಲ್ ಪೋನ್ಸ್‌ಫೋರ್ಡ್, ಡೌಗ್ ವಾಲ್ಟರ್ಸ್, ಆಲ್ವಿನ್ ಕಲ್ಲಿಚರಣ್, ಗ್ರೆಗ್ ಬ್ಲೆವೆಟ್ ಮತ್ತು ಅಬಿದ್ ಅಲಿ ಅವರೊಂದಿಗೆ ರೋಹಿತ್ ಎರಡನೇ ಸ್ಥಾನದಲ್ಲಿದ್ದಾರೆ

ಒಂದು ಸಿಕ್ಸರ್:
ಶ್ರೀಲಂಕಾ ವಿರುದ್ಧ 2013ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್ ದ್ವಿಶತಕ ಬಾರಿಸಿ, ಈ ಸಾಧನೆ ಮಾಡಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ವಿಶೇಷವೆಂದರೆ ಸಿಕ್ಸರ್ ಸಿಡಿಸುವ ಮೂಲಕ ರೋಹಿತ್ ಮೈಲಿಗಲ್ಲು ತಲುಪಿದ್ದರು. ಈ ದಾಖಲೆ ಇನ್ನೂ ಅವರ ಹೆಸರಿನಲ್ಲೇ ಇದೆ. ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ಮಾರ್ಟಿನ್ ಗುಪ್ಟಿಲ್, ಫಖರ್ ಜಮಾನ್ ಏಕದಿನ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ರೋಹಿತ್ 2013, 2014ರಲ್ಲಿ ಶ್ರೀಲಂಕಾ ಮತ್ತು 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದ್ವಿಶತಕ ಬಾರಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *