ಪಿಎಂ ಮನೆ ಮುಂದೆ ಎಲ್ಲ ಧರ್ಮದ ಸಾಲುಗಳನ್ನು ಪಠಿಸಲು ಅವಕಾಶ ಕೊಡಿ: NCP ನಾಯಕಿ

Public TV
2 Min Read

ನವದೆಹಲಿ: ಹನುಮಾನ್ ಚಾಲೀಸಾ ವಿವಾದದ ನಡುವೆಯೇ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(NCP) ಹಿರಿಯ ನಾಯಕಿ ಫಹ್ಮಿದಾ ಹಸನ್ ಖಾನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಎಲ್ಲ ಧರ್ಮಗಳ ಗ್ರಂಥಗಳನ್ನು ಪಠಿಸಲು ಅನುಮತಿ ಕೋರಿದ್ದಾರೆ.

ಹನುಮಾನ್ ಚಾಲೀಸಾ ವಿಚಾರವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಫಹ್ಮಿದಾ ಹಸನ್ ಖಾನ್, ಪ್ರಧಾನಿಯವರ ನವದೆಹಲಿಯ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಮತ್ತು ನಮಾಜ್ ಓದಲು ಅವಕಾಶ ನೀಡುವಂತೆ ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸದ ಹೊರಗೆ ಪ್ರತಿ ಧರ್ಮದ ಪ್ರಾರ್ಥನೆಗಳನ್ನು ಪಠಿಸಲು ನಾನು ಗೃಹ ಸಚಿವ ಅಮಿತ್ ಶಾ ಅವರಿಗೆ ಅನುಮತಿ ಕೇಳಿದ್ದೇನೆ. ಹಣದುಬ್ಬರ, ನಿರುದ್ಯೋಗ, ಹಸಿವು ಕಡಿಮೆ ಮಾಡಲು ಹಿಂದುತ್ವ, ಜೈನ ಧರ್ಮ ದೇಶಕ್ಕೆ ಅನುಕೂಲವಾದರೆ, ನಾನು ಅದನ್ನು ಮಾಡಲು ಬಯಸುತ್ತೇನೆ ಎಂದು ಉತ್ತರಿಸಿದರು. ಇದನ್ನೂ ಓದಿ:  ಪೋಸ್ಟ್‌ಮ್ಯಾನ್‍ನಿಂದಲೇ ಬಡ ಜನರ ಲಕ್ಷ, ಲಕ್ಷ ಹಣ ಗುಳುಂ 

ರವಿ ರಾಣಾ ಮತ್ತು ನವನೀತ್ ರಾಣಾ ಅವರು ಮಾತೋಶ್ರೀ(ಉದ್ಧವ್ ಠಾಕ್ರೆ ಅವರ ನಿವಾಸ) ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಓದಿ ಪ್ರಯೋಜನ ಪಡೆಯುತ್ತಾರೆ ಎಂದರೆ ನಮಗೂ ಆ ಅವಕಾಶ ನೀಡಬೇಕು. ದೆಹಲಿಯಲ್ಲಿರುವ ಪ್ರಧಾನಿ ಮೋದಿ ಅವರ ನಿವಾಸದಲ್ಲಿ ನಮಾಜ್, ಹನುಮಾನ್ ಚಾಲೀಸಾ ಮತ್ತು ದುರ್ಗಾ ಚಾಲೀಸಾವನ್ನು ಪಠಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆಯಲ್ಲಿ ಅವರು ತಮ್ಮ ಮನೆಯಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುತ್ತೇನೆ ಮತ್ತು ನಮ್ಮ ಮನೆಯಲ್ಲಿ ದುರ್ಗಾಪೂಜೆ ಮಾಡುತ್ತೇನೆ ಎಂದು ತಿಳಿಸಿದರು.

ಈ ಪತ್ರದ ಆಸಲಿ ಕಾರಣವೇನು?
ಈ ರೀತಿ ಇವರು ಪಾತ್ರ ಬರೆಯಲು ಮುಖ್ಯ ಕಾರಣ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುತ್ತೇವೆ ಎಂದು ಸಂಸದ-ಶಾಸಕ ದಂಪತಿ ರವಿ ರಾಣಾ ಮತ್ತು ನವನೀತ್ ರಾಣಾ ಘೋಷಿಸಿದ್ದರು. ಈ ಹಿನ್ನೆಲೆ ಅವರನ್ನು ಪೊಲೀಸರು ಬಂಧಿಸಿದ್ದು, ಮುಂಬೈ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಈ ಹಿನ್ನೆಲೆ ಇದರ ಪ್ರತೀಕಾರವಾಗಿ ಎನ್‍ಸಿಪಿ ನಾಯಕಿ ಗೃಹಮಂತ್ರಿಗೆ ಈ ರೀತಿಯ ಪಾತ್ರ ಬರೆದಿದ್ದಾರೆ. ಇದನ್ನೂ ಓದಿ: ವಿಜಯ್ ಸೇತುಪತಿ ಒಲಿಯುವುದು ನಯನತಾರಾಗಾ ಅಥವಾ ಸಮಂತಗಾ?: ಹೆಚ್ಚಿದ ಕುತೂಹಲ 

Share This Article
Leave a Comment

Leave a Reply

Your email address will not be published. Required fields are marked *