ಹನುಮಾನ್ ಚಾಲೀಸಾ ಹಾಕಲು ಅನುಮತಿ ಇಲ್ಲ, ರಸ್ತೆಯಲ್ಲಿ ನಮಾಜ್‌ ಮಾಡಲು ಅನುಮತಿ ಬೇಕಿಲ್ಲ: ಬಿಜೆಪಿ ಕಿಡಿ

Public TV
1 Min Read

ಬೆಂಗಳೂರು: ಹನುಮಾನ್‌ ಚಾಲೀಸಾ (Hanuman Chalisa) ಹಾಕುವುದಕ್ಕೆ ಅನುಮತಿ ಇಲ್ಲ. ಆದರೆ ರಸ್ತೆಯಲ್ಲಿ ಕೂತು ಬಾಂಧವರು ನಮಾಜ್‌ (Namaz) ಮಾಡುವುದಕ್ಕೆ ಯಾರಪ್ಪನ ಅನುಮತಿಯೂ ಬೇಕಿಲ್ಲ ಅಲ್ಲವೇ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ (BJP) ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದೆ.

ಮಂಗಳೂರಿನ ಕಂಕನಾಡಿಯಲ್ಲಿ ಶುಕ್ರವಾರ ಮುಸ್ಲಿಮರು (Muslims) ರಸ್ತೆಯಲ್ಲಿ ನಮಾಜ್‌ ಮಾಡಿದ ವಿಚಾರವನ್ನು  ಪ್ರಸ್ತಾಪ ಮಾಡಿ ಎಕ್ಸ್‌ನಲ್ಲಿ ಆಕ್ರೋಶ ಹೊರ ಹಾಕಿದೆ.

 

ಪೋಸ್ಟ್‌ನಲ್ಲಿ ಏನಿದೆ?
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸರ್ಕಾರದ ಕರ್ನಾಟಕ ಮಾಡೆಲ್‌ (Karnataka Model) ಯಾವ ಕಡೆ ಸಾಗುತ್ತಿದೆ ನೋಡಿ. ಕಾಂಗ್ರೆಸ್‌ ಕರ್ನಾಟಕ ಮಾದರಿಯಲ್ಲಿ ಹನುಮ ಧ್ವಜ ಹಾರಿಸುವುದಕ್ಕೆ ಅವಕಾಶವಿಲ್ಲ. ಹನುಮಾನ್‌ ಚಾಲಿಸಾ ಹಾಕುವುದಕ್ಕೂ ಪರ್ಮಿಷನ್‌ ಇಲ್ಲ. ಆದರೆ ರಸ್ತೆಯಲ್ಲಿ ಕುಳಿತು ಬಾಂಧವರು ನಮಾಜ್‌ ಮಾಡುವುದಕ್ಕೆ ಯಾರಪ್ಪನ ಅನುಮತಿಯೂ ಬೇಕಿಲ್ಲ ಅಲ್ಲವೇ? ಕರ್ನಾಟಕ ಕಾಂಗ್ರೆ ಕರ್ನಾಟಕ ಸರ್ವ ಜನಾಂಗದ ಅಶಾಂತಿಯ ತೋಟವಾಗಿದೆ. ಕಾನೂನು ಮತಾಂಧರ ಪರವಾಗಿ ನಿಂತಿದೆ ಎಂದು ಬರೆದುಕೊಂಡಿದೆ.

ಮಂಗಳೂರಿನ ಕಂಕನಾಡಿ ಮಸೀದಿ ಮುಂಭಾಗ ಇರುವ ರಸ್ತೆಯಲ್ಲಿ ನಮಾಜ್ ಮಾಡುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ಇದನ್ನೂ ಓದಿ: ಪ್ರೀತಿ, ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸುನಿಲ್‌ ನರೇನ್

Share This Article