ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

Public TV
1 Min Read

ನ್ನಡದ `ಬಿಂದಾಸ್’ (Bindas Kannada) ಚಿತ್ರದ ನಾಯಕಿ ಹನ್ಸಿಕಾ ಮೋಟ್ವಾನಿ(Hansika Motwani)  ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬ್ಯುಸಿನೆಸ್‌ಮ್ಯಾನ್ ಸೊಹೈಲ್ (Sohael) ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಸದ್ಯ ಈ ಜೋಡಿ ಪ್ರೀ ವೆಡ್ಡಿಂಗ್ ಸಂಭ್ರಮದಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತ ಫೋಟೋಗಳು ಸದ್ದು ಮಾಡುತ್ತಿದೆ. ಮದುವೆಯ ಪೂರ್ವ ತಯಾರಿ ಫೋಟೋ ನೆಟ್ಟಿಗರಿಗೆ ಮೋಡಿ ಮಾಡ್ತಿದೆ.

 

View this post on Instagram

 

A post shared by hansika???? (@ihansika_addicted)

ಬಾಲನಟಿಯಾಗಿ ಎಂಟ್ರಿ ಕೊಟ್ಟು, ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚಿದ ಹನ್ಸಿಕಾ ಮೋಟ್ವಾನಿ ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಸದ್ಯ ಪ್ರೀ ವೆಡ್ಡಿಂಗ್ ಶೂಟ್ ಸಂಭ್ರಮದಲ್ಲಿ ಈ ಜೋಡಿ ಮಿಂಚಿದ್ದಾರೆ. ಡಿಸೆಂಬರ್ 4ರಂದು ರಾತ್ರಿ ಹೊಸ ಬಾಳಿಗೆ ಕಾಲಿಡಲಿದ್ದಾರೆ.

 

View this post on Instagram

 

A post shared by hansika???? (@ihansika_addicted)

ಮೆಹೆಂದಿ ಮತ್ತು ಅರಿಶಿನ ಶಾಸ್ತ್ರದ ಸಂಭ್ರಮ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹೊಸ ಬಾಳಿಗೆ ಹೆಜ್ಜೆ ಇಡುತ್ತಿರುವ ಈ ಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ. ಇದನ್ನೂ ಓದಿ: `ಅವತಾರ್ 2′ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ: 2 ಕೋಟಿ ಟಿಕೆಟ್ ಸೋಲ್ಡ್ ಔಟ್

ಜೈಪುರದ 450 ವರ್ಷದ ಹಳೆಯ ಕಟ್ಟಡದಲ್ಲಿ ಈ ಜೋಡಿ ಹಸೆಮಣೆ ಏರಲಿದೆ. ಆಪ್ತರ ಸಮ್ಮುಖದಲ್ಲಿ ಈ ಮದುವೆ ಜರುಗಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *