ಕೈ ಇಲ್ಲದ ಯುವತಿಯಿಂದ ಕಾಲಿನಲ್ಲೇ ವೋಟ್!

Public TV
1 Min Read

ಮಂಗಳೂರು: ಎರಡೂ ಕೈಗಳಿಲ್ಲದಿದ್ದರೂ ಮತಗಟ್ಟೆಗೆ ಬಂದು ಕಾಲಿನಿಂದ ಮತ ಚಲಾಯಿಸಿ ಯುವತಿಯೊಬ್ಬಳು ಮತದಾನ ನಮ್ಮ ಹಕ್ಕು ಎಂದು ಸಾರಿ ಇತರರಿಗೆ ಮಾದರಿಯಾಗಿದ್ದಾರೆ.

ಬೆಳ್ತಂಗಡಿಯ ಸಬಿತಾ ಮೋನಿಶಾ ಅವರು ಗರ್ಡಾಡಿ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಇವರಿಗೆ ಎರಡೂ ಕೈಗಳು ಇಲ್ಲದಿದ್ದರೂ ಮತದಾನ ನನ್ನ ಹಕ್ಕು ಎಂದು ಮತಗಟ್ಟೆಗೆ ಬಂದು ವೋಟ್ ಮಾಡಿ ಕಾಲಿಗೇ ಇಂಕ್ ಹಾಕಿಸಿಕೊಂಡ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ದೇಶದ ನಾಯಕನನ್ನು ಆರಿಸಲು ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ಮರೆಯಬೇಡಿ ಎಂದು ಮತ ಹಾಕದೆ ಉದಾಸೀನ ತೋರುವವರಿಗೆ ಮೋನಿಶಾ ಅವರು ಕಿವಿ ಮಾತನ್ನೂ ಕೂಡ ಹೇಳಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಹಾಲಕ್ಷ್ಮಿ ಲೇಔಟ್‍ನ ನಿವಾಸಿಗಳಾದ ರಮೇರ್ಶ-ವಾಣಿ ದಂಪತಿ ಅವರು ಹಾಂಕಾಂಗ್‍ನಿಂದ ಬಂದಿದ್ದರು. ಆದರೆ, ಮತಪಟ್ಟಿಯಲ್ಲಿ ಹೆಸರು ಇಲ್ಲ ಅಂತ ಬೂತ್ ನಂಬರ್ 170ರ ಅಧಿಕಾರಿಗಳು ಮತದಾನಕ್ಕೆ ಅವಕಾಶ ಕೊಡ್ಲೇ ಇಲ್ಲ. ಇದರಿಂದ ಬೇಸರಗೊಂಡ ದಂಪತಿ, ಓಟರ್ ಐಡಿ ತೋರಿಸಿದ್ರೂ ಪ್ರಯೋಜನ ಆಗ್ಲಿಲ್ಲ. ಸಂಜೆವರೆಗೆ ಕಾದು ಆಯೋಗಕ್ಕೆ ದೂರು ನೀಡೋದಾಗಿ ಹೇಳಿದ್ರು. ಬೆಂಗಳೂರಿನ ಆರ್‍ಆರ್ ನಗರದ ನಿವಾಸಿ ಅನೂಪ್ ನೈಜೀರಿಯಾದಿಂದ ಬಂದು ಓಟ್ ಮಾಡಿ ಸಂಜೆ ವಾಪಸ್ ತೆರಳಿದ್ರು. ಮಂಡ್ಯದ ಸೌರವ್ ಬಾಬು ಹಾಗೂ ಚಿತ್ರದುರ್ಗದ ಭರತ್ ಅಮೆರಿಕಾದಿಂದ ಆಗಮಿಸಿ ಹಕ್ಕು ಚಲಾಯಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *