ಉದ್ದೇಶಪೂರ್ವಕವಾಗಿಯೇ ಕೋವಿಡ್ ಸೋಂಕು ತಗುಲಿಸಿಕೊಂಡು ಗಾಯಕಿ ನಿಧನ

Public TV
2 Min Read

ದ್ದೇಶಪೂರ್ವಕವಾಗಿ ಕೋವಿಡ್ 19 ಸೋಂಕು ತಗುಲಿಸಿಕೊಂಡಿದ್ದ ಜೆಕ್ ಜಾನಪದ ಗಾಯಕಿ ಹನ ಹೊರ್ಕಾ ನಿಧನರಾಗಿದ್ದಾರೆ.

ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಹನ ಹೊರ್ಕಾ, ಕೆಲ ದಿನಗಳ ಹಿಂದೆ, ನನಗೆ ಕೋವಿಡ್ ಸೋಂಕು ತಗುಲಿದ್ದು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ನಾಲ್ಕೈದು ದಿನಗಳಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

 

View this post on Instagram

 

A post shared by Noticias SIN (@sin24horas)

ಹನ ಹೊರ್ಕಾರ ಮಗ ಮಾತನಾಡಿ, ನನಗೆ ಹಾಗೂ ನನ್ನ ತಂದೆಗೆ ಕೊರೊನಾ ಸೋಂಕು ತಗುಲಿತ್ತು. ನಾವು ಚೇತರಿಕೆಗೊಂಡಿದ್ದೆವು ಎನ್ನುವ ಕಾರಣಕ್ಕೆ ನನ್ನ ತಾಯಿ ಬೇಕೆಂದೇ ಸೋಂಕು ತಗುಲಿಸಿಕೊಂಡು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಸೋಂಕು ತಗುಲಿದ ತಕ್ಷಣ ಅವರು ಪ್ರತ್ಯೇಕವಾಸದಲ್ಲಿದ್ದರು. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು ಎಂದು ಅವರ ಮಗ ರೆಕ್ಸ್ ಹೇಳಿದ್ದಾರೆ. ಇದನ್ನೂ ಓದಿ:  ಪತಿ ಕೊಂದು ಕತ್ತರಿಸಿದ ತಲೆ ಠಾಣೆಗೆ ತಂದು ಶರಣಾದಳು

 

View this post on Instagram

 

A post shared by Noticias SIN (@sin24horas)

ವ್ಯಾಕಿನ್ ಪಡೆದಿಲ್ಲವೆಂದರೆ ಸಾರ್ವಜನಿಕ ಸ್ಥಳಗಳಿಗೆ ಹೋದಲು ಅವಕಾಶವಿಲ್ಲ. ಆದರೆ ಲಸಿಕೆ ಹಾಕಿಸಿಕೊಳ್ಳದವರು ಆರೋಗ್ಯ ಕಾರ್ಡ್ ಪಡೆಯಲು ಅವಕಾಶವಿದೆ. ಇತ್ತೀಚೆಗೆ ಸೋಂಕಿನಿಂದ ಚೇತರಿಸಿಕೊಂಡಿರಬೇಕು. ಸೋಂಕು ಬಂದು ಗುಣಮುಖರಾಗಿದ್ದರೆ ಅವರಲ್ಲಿ ಪ್ರತಿಕಾಯ ಶಕ್ತಿ ಇರುತ್ತದೆ ಎನ್ನುವ ಕಾರಣಕ್ಕೆ ಚೇತರಿಸಿಕೊಂಡವರಿಗೂ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಜೆಕ್‍ನಲ್ಲಿ ಲಸಿಕೆ ಪಡೆದವರು ಮತ್ತು ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರು ತಮ್ಮ ವಿವರಗಳನ್ನು ನೀಡಿ ಸಾರ್ವಜನಿಕ ಸ್ಥಳಗಳು, ಬಾರ್, ಪಬ್, ಕೆಫೆ, ಸಿನಿಮಾ ಮಂದಿರ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರಳಲು ಅವಕಾಶವಿದೆ. ಕಾರ್ಯಕ್ರಮಗಳಿಗೆ ತೆರಳಲು ಪಾಸ್ ಸಿಗುತ್ತದೆ ಎನ್ನುವ ಕಾರಣಕ್ಕೆ ನನ್ನ ತಾಯಿ ಕೋವಿಡ್ ಸೋಂಕು ತಗುಲಿಸಿಕೊಂಡರು. ಆದರೆ ಅವರು ಗುಣಮುಖರಾಗಲಿಲ್ಲ ಎಂದು ರೆಕ್ಸ್ ಹೇಳಿದ್ದಾರೆ. ಇದನ್ನೂ ಓದಿ:  ಮುಳುಗುತ್ತಿದ್ದ ಕಾರಿನ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳೆ

 ನಾನು, ತಂದೆ ಲಸಿಕೆ ಪಡೆದೆವು, ತಾಯಿ ಮಾತ್ರ ಲಸಿಕೆ ತೆಗೆದುಕೊಳ್ಳಲಿಲ್ಲ.  ಕ್ರಿಸ್‍ಮಸ್ ವೇಳೆ ಕೊರೊನಾ ಸೋಂಕು ಬಂದಿತ್ತು. ಆದರೆ ನನ್ನ ತಾಯಿ ನಮ್ಮಿಂದ ದೂರ ಇರಲು ಒಪ್ಪಲಿಲ್ಲ. ಬೇಕೆಂದೇ ಕೊರೊನಾ ಸೋಂಕು ತರಿಸಿಕೊಂಡು ಸಾವನ್ನಪಿದ್ದಾರೆ ಎಂದು ಹೇಳಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *