ಹಂಸಲೇಖ ಹೇಳಿಕೆ ಬೆಂಬಲಿಸಿ ತಟ್ಟೆ ಚಳುವಳಿ

Public TV
1 Min Read

ಬೆಂಗಳೂರು: ನಾದ ಬ್ರಹ್ಮ, ಸಂಗೀತ ಮಾಂತ್ರಿಕ ಹಂಸಲೇಖ ಅವರ ಹೇಳಿಕೆಯನ್ನು ಬೆಂಬಲಿಸಿ ಇಂದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರ ವೃತ್ತದಲ್ಲಿ ಪ್ರತಿಭಟನಾ ಚಳುವಳಿಯನ್ನು ಹಮ್ಮಿಕೊಂಡು ಅವರಿಗೆ ಬೆಂಬಲ ಸೂಚಿಸಿದ್ದಾರೆ.

ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಈ ಚಳುವಳಿಯನ್ನು ಹಮ್ಮಿಕೊಂಡಿದ್ದು ತಟ್ಟೆ ಕಾಸು ಎಂಬುವ ಶೀರ್ಷಿಕೆಯನ್ನಿಟ್ಟು ಈ ಚಳುವಳಿಯನ್ನು ನಡೆಸಲಾಯಿತು. ಪ್ರತಿಭಟನಾಕಾರರು ತಟ್ಟೆಯನ್ನು ಹಿಡಿದು ವಿಭಿನ್ನವಾಗಿ ಜಾತಿ ಪರ ಬ್ರಾಹ್ಮಣತ್ವವನ್ನು ವಿರೋಧಿಸಿ ಪ್ರತಿಭಟನಾ ರ‍್ಯಾಲಿಯನ್ನು ನಡೆಸಿ ಬ್ರಾಹ್ಮಣತ್ವದ ಹಾಗೂ ಹಂಸಲೇಖ ಅವರ ವಿರುದ್ಧ ದೂರನ್ನು ನೀಡಿದವರ ವಿರುದ್ಧ ಘೋಷಣೆ ಕೂಗಿ ನೂರಾರು ಮಂದಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ

ದಲಿತ ಹಾಗೂ ಪ್ರಗತಿಪರ ಒಕ್ಕೂಟಗಳ ಅಧ್ಯಕ್ಷ ರಾವಣ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು. ಹಂಸಲೇಖ ಅವರು ಯಾವುದೇ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ನೀಡಿಲ್ಲ ಅಸಮಾನತೆ ಹಾಗೂ ತಾರತಮ್ಯದ ಬಗ್ಗೆ ಮಾತನಾಡಿರುವುದು ತಪ್ಪೇನಿಲ್ಲ ಇದರಲ್ಲಿ ವಿರೋಧಿಸುವುದು ಏನು ಇಲ್ಲ. ಹಂಸಲೇಖ ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ. ಇದೇ ಸಮಯದಲ್ಲಿ ಹಂಸಲೇಖ ಅವರ ವಿರುದ್ಧ ದೂರು ದಾಖಲು ಮಾಡಿದಂತಹ ವ್ಯಕ್ತಿಯ ವಿರುದ್ಧ ಸೂರ್ಯಸಿಟಿ ಪೊಲೀಸರಿಗೆ ಕ್ರಮ ತೆಗೆದುಕೊಳ್ಳುವಂತೆ ದೂರನ್ನು ನೀಡಲಾಗಿದೆ. ಇದನ್ನೂ ಓದಿ: ಪೇಜಾವರ ಶ್ರೀ ವಿರುದ್ಧದ ಹಂಸಲೇಖ ಹೇಳಿಕೆಗೆ ಪ್ರತಾಪ್ ಸಿಂಹ ಗರಂ

ಏನಿದು ವಿವಾದ?
ಮೈಸೂರಿನ ಮಾನಸಗಂಗೋತ್ರಿಯಲ್ಲಿಯಲ್ಲಿ ನಡೆದಿದ್ದ ಪ್ರಶಸ್ತಿ ಸಮಾರಂಭವೊಂದರ ಕಾರ್ಯಕ್ರಮದಲ್ಲಿ ಮಾತಾಡಿದ್ದ ಹಂಸಲೇಖ, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ ದಲಿತರು ಕೋಳಿ ಕೊಟ್ರೆ ತಿಂತಾರಾ..? ಕುರಿ ರಕ್ತ ಪ್ರೈ ಮಾಡಿ ಕೊಟ್ರೆ ತಿಂತಾರಾ..? ಲಿವರ್ ಕೊಟ್ರೆ ತಿಂತಾರಾ..? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯೋದು ದೊಡ್ಡ ವಿಷಯ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *