3ನೇ ಬ್ಯಾಚ್ ಒತ್ತೆಯಾಳುಗಳನ್ನು ಇಂದು ಬಿಡುಗಡೆ ಮಾಡಲಿದೆ ಹಮಾಸ್

Public TV
1 Min Read

ಟೆಲ್ ಅವಿವ್: ಇಸ್ರೇಲ್ (Israel) ಹಾಗೂ ಹಮಾಸ್ (Hamas) ನಡುವಿನ ಕದನಕ್ಕೆ ವಿರಾಮ ನೀಡಿದ ಬಳಿಕ ಇದೀಗ ಹಮಾಸ್ 3ನೇ ಬ್ಯಾಚ್ ಒತ್ತೆಯಾಳುಗಳನ್ನು (Hostages) ಬಿಡುಗಡೆ ಮಾಡಲು ಮುಂದಾಗಿದೆ.

ಹಮಾಸ್ ಭಾನುವಾರ ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿಯನ್ನು ಇಸ್ರೇಲ್ ಸ್ವೀಕರಿಸಿದೆ ಎಂದು ವರದಿಯಾಗಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ಮಧ್ಯವರ್ತಿಯಾಗಿ ಕತಾರ್ ನಿರ್ವಹಿಸುತ್ತಿದ್ದು, ಒತ್ತೆಯಾಳುಗಳ ಪಟ್ಟಿಯನ್ನು ಇಸ್ರೇಲ್‌ಗೆ ನೀಡಿದೆ.

ಇಸ್ರೇಲ್ ಹಾಗೂ ಹಮಾಸ್ ನಡುವೆ 4 ದಿನಗಳ ಕದನ ವಿರಾಮ ಘೋಷಿಸಿ ಇಂದಿಗೆ 3 ದಿನವಾಗಿದೆ. ಕದನ ವಿರಾಮವನ್ನು ಇನ್ನಷ್ಟು ವಿಸ್ತರಿಸಿದ್ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕತಾರ್ ತಿಳಿಸಿದೆ. ಇದನ್ನೂ ಓದಿ: ಕಡ್ಲೆಕಾಯಿ ಪರಿಷೆಯ ತುತ್ತೂರಿ ವಿರುದ್ಧ ಬಸವನಗುಡಿ ನಿವಾಸಿಗಳು ಗರಂ!

ಹಮಾಸ್ ಶನಿವಾರ ರಾತ್ರಿ ಒತ್ತೆಯಾಳುಗಳ 2ನೇ ಬ್ಯಾಚ್‌ನಲ್ಲಿ 17 ಜನರನ್ನು ಬಿಡುಗಡೆ ಮಾಡಿತು. ಇವರಲ್ಲಿ 13 ಇಸ್ರೇಲಿಗಳು ಮತ್ತು 4 ಥಾಯ್ ಪ್ರಜೆಗಳು ಸೇರಿದ್ದಾರೆ. 4 ದಿನಗಳ ಅವಧಿಯಲ್ಲಿ ಒಟ್ಟು 50 ಒತ್ತೆಯಾಳುಗಳನ್ನು 150 ಪ್ಯಾಲೇಸ್ತೀನಿಯನ್ ಕೈದಿಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಒತ್ತೆಯಾಳುಗಳ ವಿನಿಮಯವಾಗಿ ಇಸ್ರೇಲ್ 39 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಮಡಿಕೇರಿಯ ಈ ಗ್ರಾಮದ 30 ಯುವಕರಿಗಿಲ್ಲ ಕಂಕಣ ಭಾಗ್ಯ

Share This Article