ದುಬೈನಲ್ಲಿ ತೇಜಸ್‌ ಪತನ – ಇದೊಂದು ಪ್ರತ್ಯೇಕ ಘಟನೆ ಎಂದ HAL

2 Min Read

ನವದೆಹಲಿ: ದುಬೈ ಏರ್‌ಶೋನದಲ್ಲಿ (Dubai Air Show) ತೇಜಸ್‌ (Tejas) ಯುದ್ಧ ವಿಮಾನ ಪತನಗೊಂಡಿದ್ದನ್ನು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಇದೊಂದು ಪ್ರತ್ಯೇಕ ಘಟನೆ (An Isolated Ocurrence) ಎಂದು ತಿಳಿಸಿದೆ.

ದುಬೈ ವಾಯು ಪ್ರದರ್ಶನದಲ್ಲಿ ವೈಮಾನಿಕ ಪ್ರದರ್ಶನದ ಸಮಯದಲ್ಲಿ ಇತ್ತೀಚೆಗೆ ನಡೆದ ಘಟನೆ ಅಸಾಧಾರಣ ಸಂದರ್ಭಗಳಿಂದ ಉಂಟಾದ ಪ್ರತ್ಯೇಕ ಘಟನೆಯಾಗಿದೆ ಎಂದು ನಾವು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ ಎಂದು ಹೆಚ್‌ಎಎಲ್‌ (HAL) ಸ್ಪಷ್ಟನೆ ನೀಡಿದೆ.

ಕಂಪನಿಯ ವ್ಯವಹಾರ ಕಾರ್ಯಾಚರಣೆಗಳು, ಆರ್ಥಿಕ ಕಾರ್ಯಕ್ಷಮತೆ ಅಥವಾ ಅದರ ಭವಿಷ್ಯದ ವಿತರಣೆಗಳ ಮೇಲೆ ಈ ಘಟನೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ:  ನಕ್ಸಲ್ ಮುಖಂಡನ ಪರ ಘೋಷಣೆ; ಹಿಂಸಾರೂಪಕ್ಕೆ ತಿರುಗಿದ ದೆಹಲಿ ಪ್ರತಿಭಟನೆ – 15ಕ್ಕೂ ಹೆಚ್ಚು ಮಂದಿ ಬಂಧನ


ತನಿಖೆ ನಡೆಸುವ ಸಂಸ್ಥೆಗಳಿಗೆ ಕಂಪನಿಯು ತನ್ನ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡುತ್ತೇವೆ. ವುದೇ ಮಹತ್ವದ ಬೆಳವಣಿಗೆಗಳ ಬಗ್ಗೆ ಕಂಪನಿಯು ಪಾಲುದಾರರಿಗೆ ತಿಳಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದೆ.

ನವೆಂಬರ್ 21 ರಂದು ದುಬೈ ವಾಯು ಪ್ರದರ್ಶನದಲ್ಲಿ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಯುದ್ಧ ವಿಮಾನ ಪತನಗೊಂಡು ಅದರ ಪೈಲಟ್ ಸಾವನ್ನಪ್ಪಿದರು.

ಇಲ್ಲಿಯವರೆಗೆ ತೇಜಸ್‌ ವಿಮಾನ ಎರಡು ಬಾರಿ ಪತನಗೊಂಡಿದೆ. ಮಾರ್ಚ್ 12, 2024 ರಂದು ತೇಜಸ್ ಜೆಟ್ ಜೈಸಲ್ಮೇರ್‌ನಲ್ಲಿ ತರಬೇತಿ ಹಾರಾಟಕ್ಕಾಗಿ ಹೊರಟಿದ್ದಾಗ ಪತನವಾಗಿತ್ತು. ಆದರೆ ಪೈಲಟ್‌ ಯಶಸ್ವಿಯಾಗಿ ಎಜೆಕ್ಟ್‌ ಆಗಿ ಪ್ಯಾರಾಚೂಟ್ ಮೂಲಕ ಯಶಸ್ವಿಯಾಗಿ ಕೆಳಗೆ ಬಂದಿದ್ದರು.

Share This Article