ಹಕ್ಕಾ ನೂಡಲ್ಸ್ ಟೇಸ್ಟ್ ಮಾಡಿಲ್ಲ ಅಂದ್ರೆ ಇವತ್ತೇ ಟ್ರೈ ಮಾಡಿ..!

Public TV
2 Min Read

ನೂಡಲ್ಸ್ ಅಂದ್ರೆ ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಮಕ್ಕಳು ಮಾತ್ರವಲ್ಲದೇ ದೊಡ್ಡವರು ಸಹ ಇದನ್ನು ತಿನ್ನಲು ಬಯಸುತ್ತಾರೆ. ಇದು ತಿನ್ನಲು ರುಚಿಕರವಾಗಿದ್ದು, ಹೊಟ್ಟೆ ಹಸಿವನ್ನು ಸಹಾ ನೀಗಿಸುತ್ತದೆ. ಇದನ್ನು ತುಂಬಾ ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು. ಅಲ್ಲದೇ ಮಕ್ಕಳ ಲಂಚ್ ಬಾಕ್ಸ್‌ಗೂ ಹಾಕಿ ಕೊಡಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಹಕ್ಕಾ ನೂಡಲ್ಸ್ (Hakka Noodles) ಯಾವ ರೀತಿ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ. ಇದನ್ನೂ ಓದಿ: ಸುಲಭವಾಗಿ ಮಾಡಿ ಡ್ರೈಫ್ರೂಟ್ಸ್ ಬರ್ಫಿ

ಬೇಕಾಗುವ ಸಾಮಗ್ರಿಗಳು:
ನೂಡಲ್ಸ್ – 1 ಪ್ಯಾಕ್
ಉಪ್ಪು – 1 ಚಮಚ
ಎಣ್ಣೆ – 3 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಹೆಚ್ಚಿದ ಬೀನ್ಸ್ – ಅರ್ಧ ಕಪ್
ಹೆಚ್ಚಿದ ಕ್ಯಾಬೇಜ್ – ಅರ್ಧ ಕಪ್
ಹೆಚ್ಚಿದ ಕ್ಯಾರೆಟ್ – ಅರ್ಧ ಕಪ್
ಹೆಚ್ಚಿದ ಕಾಪ್ಸಿಕಮ್ – ಅರ್ಧ ಕಪ್
ಸೋಯಾ ಸಾಸ್ – 2 ಚಮಚ
ಗ್ರೀನ್ ಚಿಲ್ಲಿ ಸಾಸ್ – 2 ಚಮಚ
ಟೊಮೆಟೊ ಸಾಸ್ – 1 ಚಮಚ

ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿಕೊಂಡು ಅದಕ್ಕೆ ಉಪ್ಪನ್ನು ಸೇರಿಸಿಕೊಂಡು ನೂಡಲ್ಸ್ ಅನ್ನು ಬೇಯಿಸಿಕೊಳಿ.
* ಬೆಂದ ಬಳಿಕ ನೂಡಲ್ಸ್ ಅನ್ನು ಬಿಸಿನೀರಿನಿಂದ ಬೇರ್ಪಡಿಸಿ ಅದಕ್ಕೆ ತಣ್ಣೀರನ್ನು ಬೆರೆಸಿ ಸೋಸಿಕೊಳ್ಳಿ.
* ಈಗ ಒಂದು ಪ್ಯಾನ್ ಅಲ್ಲಿ 3 ಚಮಚ ಎಣ್ಣೆ ಹಾಕಿಕೊಂಡು ಬಿಸಿಯಾದ ಬಳಿಕ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿಕೊಂಡು ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
* ನಂತರ ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು ಹಾಕಿಕೊಳ್ಳಿ. ಬಳಿಕ ಸೋಯಾ ಸಾಸ್, ಗ್ರೀನ್ ಚಿಲ್ಲಿ ಸಾಸ್ ಮತ್ತು ಟೊಮೆಟೊ ಸಾಸ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ತರಕಾರಿ ಸ್ವಲ್ಪ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.
* ಈಗ ಅದಕ್ಕೆ ಬೇಯಿಸಿ ಇಟ್ಟಿದ್ದ ನೂಡಲ್ಸ್ ಅನ್ನು ಸೇರಿಸಿಕೊಂಡು ಚೆನ್ನಾಗಿ ತಿರುವಿಕೊಳ್ಳಿ.
* ನೂಡಲ್ಸ್ ತರಕಾರಿ ಮಿಶ್ರಣದೊಂದಿಗೆ ಚೆನ್ನಾಗಿ ಹೊಂದಿದ ಬಳಿಕ ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಬಿಸಿಬಿಸಿಯಾಗಿ ತಿನ್ನಲು ಕೊಡಿ. ಇದನ್ನೂ ಓದಿ: ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕುಡಿಯಿರಿ ಮೆಂತ್ಯ ಹಾಲು

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್