– ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ
– ಸ್ವಲ್ಪ ಮಿಸ್ಸಾಗಿದ್ರೂ ಏರ್ ಇಂಡಿಯಾ ರೀತಿ ಮತ್ತೊಂದು ದುರಂತ
ಲಕ್ನೋ: ಅಹಮದಾಬಾದ್‌ನಲ್ಲಿ (Ahmedabad) ವಿಮಾನ ದುರಂತ ಘಟನೆ ಸಂಭವಿಸಿದ ಬಳಿಕ ಇತರೇ ವಿಮಾನಗಳಲ್ಲೂ ಒಂದಿಲ್ಲೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ವರದಿಯಾಗುತ್ತಿದೆ. ಅದೇ ರೀತಿ ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಸೌದಿಯಾ ಏರ್‌ಲೈನ್ಸ್ (Saudia Airlines) ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಲಕ್ನೋ ವಿಮಾನ ನಿಲ್ದಾಣದಲ್ಲಿ (Lucknow Airport) ತುರ್ತು ಭೂಸ್ಪರ್ಶ ಮಾಡಿದೆ.
लखनऊ एयरपोर्ट पर बड़ा हादसा टला
सऊदी से आए विमान में तकनीकी खराबी
लखनऊ एयरपोर्ट पर लैंडिंग के वक्त खराबी
लैंडिंग के वक्त विमान के पहिए से निकली चिंगारी#Lucknow #lucknowairport #flight pic.twitter.com/ZsXZ3vvK0O— Diksha singh (@DikshaSingh7522) June 16, 2025
ವಿಮಾನ ಚಕ್ರಗಳು ರನ್‌ವೇಗೆ (Runway) ಇಳಿಯುತ್ತಿದ್ದಂತೆ ಟೈಯರ್‌ನಿಂದ ಬೆಂಕಿ ಕಿಡಿಗಳು ಚಿಮ್ಮಿದ್ದು, ದಟ್ಟ ಹೊಗೆ ಹೊಮ್ಮಿದೆ. ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸದೇ ನೂರಾರು ಯಾತ್ರಿಕರು, ವಿಮಾನ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರ ವಿಡಿಯೋ ಕೂಡ ವೈರಲ್ ಆಗಿದೆ. ಇದನ್ನೂ ಓದಿ: ಅವಳ ಮಾತು ಕೇಳಿದ್ದಕ್ಕೆ ಜೀವ ಉಳಿಯಿತು.. ಥ್ಯಾಂಕ್ಸ್ ಹೆಂಡ್ತಿ: ಪತನವಾದ ಫ್ಲೈಟ್‌ನಲ್ಲೇ ಹೋಗ್ಬೇಕಿದ್ದ ವೈದ್ಯ ಪಾರು
ಮೂಲಗಳ ಪ್ರಕಾರ, SV3112 ಸಂಖ್ಯೆಯ ವಿಮಾನ ಶನಿವಾರ ರಾತ್ರಿ 10:45ಕ್ಕೆ ಜೆಡ್ಡಾದಿಂದ 250 ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿತ್ತು, ಸಿಬ್ಬಂದಿಗಳೂ ಇದ್ದರು. ಹಜ್‌ಗೆ ಹೊರಟಿದ್ದ ವೇಳೆ ಬೆಳಗ್ಗೆ 6:30ರ ಸುಮಾರಿಗೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ತುರ್ತು ಭೂಸ್ಪರ್ಶ ಮಾಡಿದೆ. ಈ ವೇಳೆ ವಿಮಾನದ ಟೈಯರ್‌ನಿಂದ (Wheel Glitch) ಬೆಂಕಿಯ ಕಿಡಿಗಳು ಚಿಮ್ಮಿದೆ ಜೊತೆಗೆ ಟೈರ್‌ನಿಂದ ದಟ್ಟ ಹೊಗೆ ಬಂದಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನ – 80 ಜನರ ಡಿಎನ್‌ಎ ಮ್ಯಾಚ್, 33 ಮೃತದೇಹಗಳ ಹಸ್ತಾಂತರ
ತಾಂತ್ರಿಕ ದೋಷ ಉಂಟಾದ ಕೆಲವೇ ಕ್ಷಣಗಳಲ್ಲಿ ಪೈಲಟ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದರು. ಈ ವೇಳೆ ವಿಮಾನ ನಿಲ್ದಾಣದ ಅಗ್ನಿಶಾಮಕ ಮತ್ತು ರಕ್ಷಣಾ ತಂಡವು ತಕ್ಷಣವೇ ನೆರವಿಗೆ ಧಾವಿಸಿ ಕೇವಲ 20 ನಿಮಿಷಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು. ಇದನ್ನೂ ಓದಿ: Israel-Iran Conflict | ಇಸ್ರೇಲ್ ಮಿಸೈಲ್ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ
ಪ್ರಾಥಮಿಕ ತನಿಖೆಯಲ್ಲಿ ಹೈಡ್ರಾಲಿಕ್ ಸಿಸ್ಟಮ್ ಸೋರಿಕೆಯೇ ತಾಂತ್ರಿಕ ದೋಷಕ್ಕೆ ಕಾರಣ ಎಂದು ತಿಳಿದುಬಂದಿದೆ. ಒಂದು ವೇಳೆ ವಿಮಾನ ಟೇಕ್ ಆಫ್ ಸಮಯದಲ್ಲಿ ದೋಷ ಕಾಣಿಸಿಕೊಂಡಿದ್ದರೆ, ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ವಿಮಾನಯಾನ ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್!