ಹೇರ್ ಕಟ್ ಎಡವಟ್ಟು-ಮಾಡೆಲ್‍ಗೆ 2ಕೋಟಿ ಪರಿಹಾರ ನೀಡುವಂತೆ ಆದೇಶ

Public TV
1 Min Read

ನವದೆಹಲಿ: ಹೇರ್ ಕಟ್ ಮಾಡುವಾಗ ಎಡವಟ್ಟು ಮಾಡಿರುವುದಕ್ಕೆ ಮಾಡೆಲ್ ಗೆ 2 ಕೋಟಿ ಪರಿಹಾರ ನೀಡುವಂತೆ ಹೋಟೆಲ್ ಒಂದಕ್ಕೆ NCDRC (National Consumer Disputes Redressal Commission)ಆದೇಶ ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಖ್ಯಾತ ರೂಪದರ್ಶಿಯಾಗಬೇಕು ಎಂಬ ಆಸೆಯಿಂದ ಹೇರ್ ಕಟ್ ಮಾಡಿಸಿಕೊಳ್ಳಲು ಹೋಗಿದ್ದ ಮಹಿಳೆಗೆ ತಪೊದಾ ಹೇರ್ ಕಟ್ ಮತ್ತು ಚಿಕಿತ್ಸೆ ಮಾಡಿದ್ದಕ್ಕಾಗಿ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ (NCDRC) ದೆಹಲಿ ಮೂಲದ ಸಲೂನ್ ಒಂದಕ್ಕೆ ಆದೇಶ ನೀಡಿದೆ. ಇದನ್ನೂ ಓದಿ:  ಸೆ.27ರ ಭಾರತ್ ಬಂದ್‍ಗೆ ಪಾಪ್ಯುಲರ್ ಫ್ರಂಟ್‍ನಿಂದ ಸಂಪೂರ್ಣ ಬೆಂಬಲ

ರೂಪದರ್ಶಿ ಆಶ್ನಾ ರಾಯ್ ತಮ್ಮ ನೀಳ ಕೇಶದ ಕಾರಣದಿಂದಾಗಿ ಹಲವಾರು ಕಂಪೆನಿಗಳ ಕೇಶ ಉತ್ಪನ್ನಗಳ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಐಷಾರಾಮಿ ಹೋಟೆಲ್‍ನಲ್ಲಿ ಇರುವ ಸಲೂನ್‍ಗೆ ಅವರು ಕೇಶವಿನ್ಯಾಸಕ್ಕಾಗಿ ಭೇಟಿಕೊಟ್ಟಿದ್ದರು. ಈ ವೇಳೆ ಅವರ ಕೂದಲು ಹಾಳಾದ್ದರಿಂದ ಜಾಹೀರಾತುಗಳು ತಪ್ಪಿಹೋಗುವ ಸಂದರ್ಭ ಎದುರಾಗಿದೆ. ಹೀಗಾಗಿ 2018 ರಲ್ಲಿ ಕಂಪೆನಿಯ ವಿರುದ್ಧ  NCDRCಗೆ ಅವರು ದೂರು ನೀಡಿದ್ದರು.

ಈ ಕುರಿತಾಗಿ ವಿಚಾರಣೆ ನಡೆಸಿದ ಎನ್‍ಸಿಡಿಆರ್  ಅಧ್ಯಕ್ಷ ಆರ್.ಕೆ ಅಗರ್‍ವಾಲ್ ಮತ್ತು ಡಾ.ಎಂ ಕಂಠೀಕರ್ ಅವರಿದ್ದ ಪೀಠ ತಪ್ಪಾದ ಹೇರ್ ಕಟ್ ನಿಂದ ರೂಪದರ್ಶಿಯಾಗಬೇಕು ಎಂಬ ಅವರ ಕನಸು ನಾಶವಾಗಿದೆ. ಇದರಿಂದ ಮಾನಸಿಕವಾಗಿ ಅವರು ನೊಂದಿದ್ದಾರೆ. ಹೀಗಾಗಿ ಪರಿಹಾರ ನೀಡುವಂತೆ ಆದೇಶಿಸಿದೆ.

Share This Article
Leave a Comment

Leave a Reply

Your email address will not be published. Required fields are marked *