T20 Blast: ವಿಶ್ವಕಪ್‌ಗೂ ಮುನ್ನ ವಿಶ್ವದಾಖಲೆ ಬರೆದ ಅಫ್ರಿದಿ, ಭಾರತಕ್ಕೆ ಎಚ್ಚರಿಕೆ ಗಂಟೆ ಎಂದ ನೆಟ್ಟಿಗರು

Public TV
3 Min Read

ಲಂಡನ್‌: ಪಾಕಿಸ್ತಾನ ಕ್ರಿಕೆಟ್‌ ತಂಡದ (Pakistan Cricket) ಯಾರ್ಕರ್‌ ಸ್ಪೆಷಲಿಸ್ಟ್‌ ಶಾಹೀನ್‌ ಅಫ್ರಿದಿ T20 ಬ್ಲಾಸ್ಟ್‌ (T20 Blast) ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್‌ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ. ದುರದೃಷ್ಟವಶಾತ್‌ ಅಫ್ರಿದಿ ಯಾರ್ಕರ್‌ ದಾಳಿಯ ಹೊರತಾಗಿಯೂ ಪಾಕ್‌ ತಂಡ 2 ವಿಕೆಟ್‌ಗಳ ಅಂತರದಿಂದ ಸೋಲು ಕಂಡಿದೆ.

ಹೌದು. ಟಿ20 ಬ್ಲಾಸ್ಟ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ನಾಟಿಂಗ್ಹ್ಯಾಮ್ ಶೈರ್ (Nottinghamshire) ಪರ ಪ್ರತಿನಿಧಿಸಿದ್ದ ಎಡಗೈ ಅಫ್ರಿದಿ, ಮೊದಲ ಓವರ್‌ನಲ್ಲೇ ಅಲೆಕ್ಸ್ ಡೇವಿಡ್ಸ್(0), ಕ್ರಿಸ್ ಬೆನ್ಜಮಿನ್‌(0), ಡ್ಯಾನ್ ಮೌಸ್ಲಿ(1) ಹಾಗೂ ಎಡ್ ಬೆರ್ನಾರ್ಡ್‌(0) ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಟಿ20‌ ಕ್ರಿಕೆಟ್‌ನಲ್ಲಿ ಧೂಳೆಬ್ಬಿಸಿದ್ದಾರೆ. ಇದರೊಂದಿಗೆ ಒಂದೇ ಓವರ್‌ನಲ್ಲಿ 4 ವಿಕೆಟ್‌ ಕಿತ್ತ ಮೊದಲ ವೇಗಿ ಎಂಬ ವಿಶ್ವದಾಖಲೆಯನ್ನೂ ಬರೆದಿದ್ದಾರೆ. ಇದನ್ನೂ ಓದಿ: Byju’sಗೆ ಗುಡ್‌ಬೈ – Dream11 ತೆಕ್ಕೆಗೆ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವ

ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ತೋರಿದರೂ ಬೌಲಿಂಗ್‌ನಲ್ಲಿ 4 ಓವರ್‌ಗಳಲ್ಲಿ 29 ರನ್‌ ನೀಡಿ 4 ವಿಕೆಟ್‌ ಕಿತ್ತರು. ಶಾಹೀನ್‌ ವಿಕೆಟ್‌ ಪಡೆದ ವೀಡಿಯೋ ತುಣುಕು ಇದೀಗ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.

ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ನಾಟಿಂಗ್ಹ್ಯಾಮ್ ಶೈರ್​ 20 ಓವರ್‌ಗಳಲ್ಲಿ 168ಕ್ಕೆ ಆಲೌಟ್​ ಆಯಿತು. 169 ರನ್‌ಗಳ ಗುರಿ ಬೆನ್ನಟ್ಟಿದ ಬರ್ಮಿಂಗ್‌ಹ್ಯಾಮ್‌ ಬೇರ್ಸ್‌ ತಂಡವು 19.1 ಓವರ್​ಗಳಲ್ಲೇ 8 ವಿಕೆಟ್​ಗೆ 172 ರನ್​ ಗಳಿಸಿ ಗೆಲುವು ಸಾಧಿಸಿತು. ಸೋಲು ಕಂಡ ನಾಟಿಂಗ್‌ಹ್ಯಾಮ್‌ಶೈರ್ ತಂಡವು ಕ್ವಾರ್ಟರ್ವ್‌ ಫೈನಲ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು. ಇದನ್ನೂ ಓದಿ: ಪಾಕಿಸ್ತಾನ ವಿಶ್ವಕಪ್‌ ಟೂರ್ನಿಗೆ ಬಾರದಿದ್ರೆ ICC ಬಳಿಯಿದೆ ಮಾಸ್ಟರ್‌ ಪ್ಲ್ಯಾನ್‌ – ಇದರಿಂದ ಯಾರಿಗೆ ನಷ್ಟ?

ಟೀಂ ಇಂಡಿಯಾಕ್ಕೆ ಎಚ್ಚರಿಕೆ ಗಂಟೆ:
ಅ.5 ರಿಂದ ನ.19ರ ವೆರೆಗೆ ಭಾರತದಲ್ಲಿ ಆಯೋಜನೆಗೊಂಡಿರುವ ವಿಶ್ವಕಪ್‌ ಟೂರ್ನಿಗೆ (ICC World Cup) ಪಾಕಿಸ್ತಾನ ಬರುವ ನೀರಿಕ್ಷೆಯಲ್ಲಿದೆ. ನಿಗದಿತ ವೇಳಾಪಟ್ಟಿಯಂತೆ ಭಾರತದ 5 ಪ್ರಮುಖ ನಗರಗಳಲ್ಲಿ ಪಾಕಿಸ್ತಾನ 9 ಪಂದ್ಯಗಳನ್ನಾಡಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್​ ಲೀಗ್​ ಪಂದ್ಯ ಅ. 15ರಂದು ಅಹಮದಾಬಾದ್​ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿದ್ದು, ಈ ಪಂದ್ಯವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದೀಗ ಶಾಹೀನ್ ಅಫ್ರಿದಿ ಬೌಲರ್​ ಕಂಡ ಕೆಲವರು ಏಕದಿನ ವಿಶ್ವಕಪ್​ನಲ್ಲಿ ಇದು ಎಚ್ಚರಿಕೆ ಗಂಟೆಯಾಗಿದೆ ಎಂದು ಬಣ್ಣಿಸಿದ್ದಾರೆ. ಏಕೆಂದರೆ 2021ರ ಟಿ20 ವಿಶ್ವಕಪ್‌ ಟೂರ್ನಿಯಲ್ಲೂ‌ ಮೊದಲ ಓವರ್‌ನಲ್ಲೇ ಕೆ.ಎಲ್‌ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಅವರ ವಿಕೆಟ್‌ಗಳನ್ನ ಉರುಳಿಸಿ ಟೀಂ ಇಂಡಿಯಾ ಹೀನಾಯ ಸೋಲಿಗೆ ಕಾರಣವಾಗಿದ್ದರು.

ಭಾರತದಲ್ಲಿ ಪಾಕ್‌ ತಂಡದ ವೇಳಾಪಟ್ಟಿ ಹೀಗಿದೆ…

ಪಾಕಿಸ್ತಾನ vs ಕ್ವಾಲಿಫೈಯರ್ 1, ಅಕ್ಟೋಬರ್ 6 – ಹೈದರಾಬಾದ್
ಪಾಕಿಸ್ತಾನ vs ಕ್ವಾಲಿಫೈಯರ್ 2, ಅಕ್ಟೋಬರ್ 12 – ಹೈದರಾಬಾದ್
ಪಾಕಿಸ್ತಾನ vs ಭಾರತ, ಅಕ್ಟೋಬರ್ 15 – ಅಹಮದಾಬಾದ್
ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20 – ಬೆಂಗಳೂರು
ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23- ಚೆನ್ನೈ
ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27- ಚೆನ್ನೈ
ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31 – ಕೋಲ್ಕತ್ತಾ
ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 4 – ಬೆಂಗಳೂರು
ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12- ಕೋಲ್ಕತ್ತಾ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್