ದೀಪಿಕಾ ಮದ್ವೆ ಸುದ್ದಿ ಕೇಳಿ ಎಮೋಷನಲ್ ಆಗ್ಬಿಟ್ಟೆ: ಶಾರೂಖ್ ಖಾನ್

Public TV
2 Min Read

ಮುಂಬೈ: ಬಾಲಿವುಡ್ ಗುಳಿ ಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಮದುವೆ ಸುದ್ದಿ ಕೇಳಿದಾಗ ನಾನು ಎಮೋಷನಲ್ ಆದೆ ಎಂದು ಕಿಂಗ್ ಖಾನ್ ಶಾರೂಖ್ ಖಾನ್ ಹೇಳಿದ್ದಾರೆ.

ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ವಿಷಯವನ್ನು ರಿವೀಲ್ ಮಾಡಿದಾಗ ತುಂಬಾನೇ ಖುಷಿ ಆಯಿತು. ನಾನು ಅಂದೇ ದೀಪಿಕಾಗೆ ಮದುವೆ ಶುಭಾಶಯವನ್ನು ಸಹ ತಿಳಿಸಿದೆ. ನಾನು ನನ್ನ ದಾಂಪತ್ಯ ಜೀವನದಲ್ಲಿ ತುಂಬಾ ಸಂತೋಷವಾಗಿದ್ದೇನೆ. ಹಾಗೆಯೇ ನನ್ನ ಜೊತೆ ನಟಿಸಿದ್ದ ನಟಿಯರು ಸಾಂಸಾರಿಕ ಜೀವನದಲ್ಲಿ ಚೆನ್ನಾಗಿರಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

ನನಗೆ ಜೊತೆಯಾಗಿ ನಟಿಸಿದ ನಟಿಯರ ಮದುವೆ ಸುದ್ದಿ ಕೇಳಿದಾಗ ಸಹಜವಾಗಿ ಖುಷಿ ಆಗುತ್ತದೆ. ಮೊದಲಿಗೆ ನಾನು ಶ್ರೀದೇವಿ ಮತ್ತು ಮಾಧುರಿ ಅವರೊಂದಿಗೆ ಸಿನಿ ಜೀವನವನ್ನು ಆರಂಭಿಸಿದೆ. ಅಂದು ನಾನು ಈ ನಟಿಯರೊಂದಿಗೆ ನಟಿಸಿದ್ದ ಸಿನಿಮಾಗಳು ನನ್ನ ಫಿಲಂ ಕೆರಿಯರ್ ನ್ನು ಎತ್ತರಕ್ಕೆ ತಲಪುವಂತೆ ಮಾಡಿದ್ದವು. ಇನ್ನು ಎರಡನೇ ಜನರೇಷನ್ ನಲ್ಲಿ ನನಗೆ ಜೊತೆಯಾಗಿ ನಟಿಸಿದ್ದು ದೀಪಿಕಾ ಪಡುಕೋಣೆ ಮತ್ತು ಅನುಷ್ಕಾ ಶರ್ಮಾ. ಈ ಮಹಿಳೆಯರು ನನ್ನ ಜೀವನದಲ್ಲಿ ಅತ್ಯಂತ ಪ್ರಮುಖರು. ಸಹಜವಾಗಿ ಇವರೆಲ್ಲರೂ ಮದುವೆ ಆಗ್ತಿದ್ದೀನಿ ಅಂದಾಗ ಒಂದು ಕ್ಷಣ ಭಾವುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.

2007ರಲ್ಲಿ ತೆರೆಕಂಡ ಶಾರೂಖ್ ಅಭಿನಯದ ‘ಓಂ ಶಾಂತಿ ಓಂ’ ಚಿತ್ರದ ಮೂಲಕ ದೀಪಿಕಾ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು. 2008 ರಲ್ಲಿ ತೆರೆಕಂಡ ‘ರಬನೇ ಬನಾ ದಿ ಜೋಡಿ’ ಸಿನಿಮಾ ಮೂಲಕ ಅನುಷ್ಕಾ ಶರ್ಮಾ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ದೀಪಿಕಾ ಮತ್ತು ಶಾರೂಖ್ ಖಾನ್ ಜೊತೆಯಾಗಿ ನಟಿಸಿದ್ದ ಓಂ ಶಾಂತಿ ಓಂ, ಚೆನ್ನೈ ಎಕ್ಸ್ ಪ್ರೆಸ್ ಮತ್ತು ಹ್ಯಾಪಿ ನ್ಯೂ ಇಯರ್ ಮೂರು ಸಿನಿಮಾಗಳು ಬಾಲಿವುಡ್ ನಲ್ಲಿ ಸಖತ್ ಸದ್ದು ಮಾಡಿವೆ.

ನವೆಂಬರ್ 14 ಮತ್ತು 15ರಂದು ಬಾಲಿವುಡ್ ತಾರೆ, ದೀಪಿಕಾ ಪಡುಕೋಣೆ ಮತ್ತು ನಟ ರಣ್‍ವೀರ್ ಸಿಂಗ್ ಮದುವೆ ನಡೆಯಲಿದೆ. ಈಗಾಗಲೇ ಬೆಂಗಳೂರು ತಲುಪಿರುವ ದೀಪಿಕಾ ಮದುವೆ ಶಾಸ್ತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿಗೆ ಬರುವ ಮುನ್ನವೇ ದೀಪಿಕಾ ಚಿನ್ನಾಭರಣ ಖರೀದಿಸಿದ್ದು, 20 ಲಕ್ಷ ರೂ. ಬೆಲೆ ಬಾಳುವ ಮಂಗಳಸೂತ್ರ ಖರೀದಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *