ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – ಹ್ಯಾರಿಸ್, ಲಮಾಣಿ ಪುತ್ರರ ಹೆಸರು ಹೇಳಿರೋ ಹ್ಯಾಕರ್ ಶ್ರೀಕಿ

Public TV
1 Min Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಟ್ ಕಾಯಿನ್ ಬಿರುಗಾಳಿ ಎದ್ದಿದ್ದು, ಇದರಲ್ಲಿ ರಾಜಕೀಯ ನಾಯಕರ ಮಕ್ಕಳು ಇರುವುದು ಬೆಳಕಿಗೆ ಬಂದಿದೆ. ಆ ರಾಜಕಾರಣಿಗಳ ಮಕ್ಕಳ ಜೊತೆ ಶ್ರೀಕಿಗೆ ನಂಟಿತ್ತು. ಹಾಗಾದರೆ ಬಿಟ್ ಕಾಯಿನ್‍ನಲ್ಲಿ ಇರುವವರು ಯಾರು ಎಂಬ ಕುರಿತು ಪಬ್ಲಿಕ್ ಟಿವಿ ಬಳಿ ಎಕ್ಸ್ ಕ್ಲೂಸೀವ್ ಮಾಹಿತಿ ಇದೆ.

ಶಾಸಕ ಹ್ಯಾರಿಸ್ ಪುತ್ರ ಒಮರ್ ನಲಪಾಡ್ ಹಾಗೂ ಮಾಜಿ ಶಾಸಕ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಇರುವುದು ಬಯಲಾಗಿದೆ. ಚಾರ್ಜ್‍ಶೀರ್ಟ್‍ನಲ್ಲಿ ಈ ಇಬ್ಬರು ಮಕ್ಕಳ ಹೆಸರನ್ನು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳುವಾಗ ಬಂಡೆಯಿಂದ‌ ಜಾರಿ‌ ನದಿಗೆ ಬಿದ್ದ ಯುವಕ ಕಣ್ಮರೆ!

ಸಿಸಿಬಿ ಮುಂದೆ ಹೇಳಿಕೆ ಕೊಟ್ಟಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ನಾನು ಸ್ವಲ್ಪವೂ ಹಣವಿಲ್ಲದೆ ಎಲ್ಲೆಲ್ಲೋ ಸುತ್ತಾಡ್ತಿದ್ದೆ. ನೆಟ್‍ವರ್ಕ್ ಹೆಚ್ಚಿಸಿಕೊಳ್ಳೋಕೆ ಸ್ವಿಟ್ಜರ್‍ಲ್ಯಾಂಡ್, ಸ್ವೀಡನ್, ಫ್ರಾನ್ಸ್, ಜರ್ಮನಿ ಸುತ್ತಾಡಿದೆ. ಒಮ್ಮೆ ‘ಬಿಟ್ ಫ್ಲಿಕ್ಸ್’ ಅನ್ನೋ ಸರ್ವರ್ ಹ್ಯಾಕ್ ಮಾಡಿದ್ದೆ. 2015ರಲ್ಲಿ ಭಾರತಕ್ಕೆ ವಾಪಸ್ ಬಂದೆ. 2015ರಲ್ಲಿ ನನ್ನ ಸ್ನೇಹಿತ ಮನಿಶ್ ಮೂಲಕ ಒಮರ್ ನಲಪಾಡ್ ಜೊತೆ ಸ್ನೇಹವಾಯಿತು. 2018ರಿಂದ ಪ್ರತಿದಿನ ಕೂಡ ಪಾರ್ಟಿಗಳಲ್ಲಿ ಭಾಗಿ ಆಗ್ತಿದ್ವಿ. ಒಮರ್ ನಲಪಾಡ್, ಅಭಿಷೇಕ್, ಗ್ಯಾರಿ ಜೊತೆ ಚಂಡೀಗಢ, ಜೈಪುರ ಸುತ್ತಾಡಿದ್ದೆ ಎಂದು ಹೇಳಿರುವುದು ಬಯಲಾಗಿದೆ. ಇದನ್ನೂ ಓದಿ: ವಿವಾಹವಾಗಲು ನಿರಾಕರಿಸಿದ್ದಕ್ಕೆ ಪ್ರೇಯಸಿಗೆ ಚಾಕುವಿನಿಂದ 18 ಬಾರಿ ಇರಿದ ಪ್ರಿಯಕರ!

ಇತ್ತ ಹ್ಯಾರಿಸ್ ಹಿರಿಯ ಪುತ್ರ ಮಹಮದ್ ನಲಪಾಡ್ ಜೊತೆಗೂ ಶ್ರೀಕಿ ನಂಟು ಹೊಂದಿದ್ದ. 2018ರ ಫರ್ಜಿ ಕೆಫೆ ಗಲಾಟೆಯಲ್ಲಿ ಮಹಮದ್ ನಲಪಾಡ್ ಆರೋಪಿ ನಂಬರ್ 1 ಆಗಿದ್ದ. ಇದೇ ಗಲಾಟೆ ಪ್ರಕರಣದಲ್ಲಿ ಶ್ರೀಕೃಷ್ಣ ನಂಬರ್ 3 ಆರೋಪಿಯಾಗಿದ್ದ. ಈ ಪ್ರಕಾರ ನಲ್ಪಾಡ್ ಬ್ರದರ್ಸ್-ಶ್ರೀಕಿ ಸ್ನೇಹಿತರಾಗಿದ್ದಾರೆ. ಆದರೆ ಬಿಟ್ ಕಾಯಿನ್ ವ್ಯವಹಾರದಲ್ಲಿ ನಲಪಾಡ್ ಬ್ರದರ್ಸ್ ಹೆಸರಿಲ್ಲ, ಶ್ರೀಕಿ ಎಲ್ಲೂ ಹೇಳಿಲ್ಲ. ಆದರೆ ಸಿಸಿಬಿ ಮುಂದೆ ನಲಪಾಡ್ ಬದ್ರರ್ಸ್ ನನ್ನ ಫ್ರೆಂಡ್ಸ್ ಅಷ್ಟೇ ಅಂತ ಶ್ರೀಕಿ ಹೇಳಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *