ಕುರುಬ ಸಮಾಜ ಹರಾಜು ಹಾಕೋ ಕೆಲಸ ಮಾಡ್ತಿದ್ದಾರೆ ಸಿದ್ದರಾಮಯ್ಯ: ಎಚ್.ವಿಶ್ವನಾಥ್ ಕಿಡಿ

Public TV
2 Min Read

ಮೈಸೂರು: ಕುರುಬ ಸಮಾಜವನ್ನು ಹರಾಜು ಹಾಕುವ ಕೆಲಸವನ್ನು ಸಿದ್ದರಾಮಯ್ಯ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ತರಾಟೆಗೆ ತೆಗೆದುಕೊಂಡರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳಿ ಬಗ್ಗೆ ಉಪ ಚುನಾವಣೆಯಲ್ಲಿ ಅನವಶ್ಯಕವಾಗಿ ಚರ್ಚೆ ಆಗುತ್ತಿದೆ. ಕಂಬಳಿ ಒಂದೇ ಜಾತಿಯ ಗುತ್ತಿಗೆ ಅಲ್ಲ. ಸಿಎಂಗೆ ಕುರುಬ ಸಮುದಾಯದವರು ಕಂಬಳಿ ಹೊದ್ದಿಸಿ ಹರಸಿದ್ದಾರೆ. ಇದನ್ನೆ ದೊಡ್ಡ ಅಪರಾಧ ಅನ್ನೋ ರೀತಿ ಸಿದ್ದರಾಮಯ್ಯ ಬಿಂಬಿಸುತ್ತಿದ್ದಾರೆ. ‘ಕಂಬಳಿ ಹೊದ್ದುಕೊಳ್ಳಲು ಅವನೇನೂ ಕುರುಬನೇನ್ರಿ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದು ತಪ್ಪು. ಸಿಎಂ ಕಂಬಳಿ ಹೊದ್ದು ಕೊಂಡಿದ್ದನ್ನು ಪ್ರಶ್ನಿಸೋದು ಸಣ್ಣತನ. ಕಂಬಳಿಯ ಗೌರವ ಕಾಪಾಡುತ್ತೇನೆ ಎಂದು ಸಿಎಂ ಸೌಜನ್ಯದಿಂದ ಹೇಳಿದ್ದಾರೆ. ಇದನ್ನು ಸಿದ್ದರಾಮಯ್ಯ ಅನವಶ್ಯಕವಾಗಿ ಹಾದಿ ರಂಪ ಬೀದಿ ರಂಪ ಮಾಡುತ್ತಿದ್ದಾರೆ. ಏಕವಚನದಲ್ಲಿ ಸಿಎಂ ಹಾಗೂ ಪ್ರಧಾನ ಮಂತ್ರಿಯನ್ನು ಸಂಬೋಧಿಸೋದು ಸರಿಯಲ್ಲ. ಸಿದ್ದರಾಮಯ್ಯ, ರಾಹುಲ್ ಗಾಂಧಿಯನ್ನು ಏನ್ಲಾ ರಾಹುಲ್ ಗಾಂಧಿ ಅನ್ನಲಿ ನೋಡೋಣಾ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಎರಡೂ ಉಪಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೆ ಇಲ್ಲ: ಜಮೀರ್

H. Vishwanath

ಸಿದ್ದರಾಮಯ್ಯ ಸಂಕುಚಿತ ಮನೋಭಾವ ತೋರಿ ಕುರುಬರನ್ನು ಏಕಾಂಗಿ ಮಾಡಿ ಬಿಡುತ್ತೀರಾ ನೀವು? ಯಾವ ಜಾತಿಯೂ ಏಕಾಂಗಿಯಾಗುವುದು ಒಳ್ಳೆಯದಲ್ಲ. ಸಿದ್ದರಾಮಯ್ಯಗೆ ಕೃತಜ್ಞತೆಯೇ ಇಲ್ಲ. ಕೃತಜ್ಞತೆಯೆ ಇಲ್ಲದ ರಾಜಕಾರಣಿ ಅಂದರೆ ಅದು ಸಿದ್ದರಾಮಯ್ಯ. ಸಿದ್ದರಾಮಯ್ಯ ಒಂಥರ ಇಂಗ್ಲೀಷ್‍ನವರು ಇದ್ದಾಂಗೆ. ಜನರನ್ನು ಬಳಸಿಕೊಂಡು ನಂತರ ಅವರನ್ನೆ ಹೊರಗಡೆ ಬಿಸಾಕುತ್ತಾರೆ. ನಿಮ್ಮ ಮನೋಭಾವದ ಪರಿಣಾಮ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿರಿ ಎಂದು ವಾಗ್ದಾಳಿ ನಡೆಸಿದರು.

ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಕೊಡುಗೆ ಶೂನ್ಯ. ನಮ್ಮನ್ನೆ ಬಲಿ ಹಾಕಲಿಲ್ವಾ ನೀನು? ಸಮುದಾಯದ ನಾಯಕರನ್ನು ತುಳಿದು ಹಾಕಿದ್ದೀರಿ. ಅಹಿಂದ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ನೀನು ಏನ್ ಈ ಸಮಾಜದ ಉದ್ಧಾರಕ್ಕೆ ಮಾಡಿದ್ದೀಯಾ ಹೇಳು ಸಿದ್ದರಾಮಯ್ಯ? ಸಿಎಂ ಕುರುಬ ಸಮುದಾಯಕ್ಕೆ ಏನೂ ಮಾಡಿದ್ದಾರೆ ಎಂದು ಆಮೇಲೆ ಕೇಳಿ. ಮೊದಲು ನಿಮ್ಮ ಕೊಡುಗೆ ಏನೂ ಹೇಳಿ. ಸಿದ್ದರಾಮಯ್ಯ ನಡವಳಿಕೆಗಳು ಕುರುಬ ಸಮುದಾಯವನ್ನು ಏಕಾಂಗಿ ಮಾಡಬಾರದು ಎಂದು ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ಧ ಗರಂ ಆದರು.

basavaraj bommai

ನಮ್ಮ ಕುರುಬ ಹುಡುಗರಿಗೆ ಸಿದ್ದರಾಮಯ್ಯ ನೋಡಿದರೆ ಇಂಗ್ಲಿಷ್ ಸಿನಿಮಾ ಹೀರೋ ನೋಡಿದಂತೆ ಆಗುತ್ತೆ. ಹಿಂದೆ ನೋಡಲ್ಲ, ಮುಂದೆ ನೋಡಲ್ಲ ಶಿಳ್ಳೆ ಹೊಡೆಯುತ್ತಾರೆ ಅಷ್ಟೆ. ಸಿದ್ದರಾಮಯ್ಯ ನಮಗೇನು ಮಾಡಿದರು ಅನ್ನೋದನ್ನು ಹುಡುಗರು ಯೋಚಿಸೋದೆ ಇಲ್ಲ. ಸಿದ್ದರಾಮಯ್ಯ ನೋಡಿದರೆ ಸಾಕು ಸುಮ್ಮೆ ಶಿಳ್ಳೆ ಹೊಡೆಯುತ್ತಾರೆ ಎಂದು ಯುವಸಮುದಾಯಕ್ಕೆ ಚಾಟಿ ಬೀಸಿದರು.

ಉಪ ಚುನಾವಣೆಗಳನ್ನೆ ಮಾಡಬೇಡಿ. ಚುನಾವಣೆಯಲ್ಲಿ ಗೆದ್ದವರು ಸತ್ತರೆ ಅವರ ಮುಂದೆ ಸೋತವರಿಗೆ ಗೆಲುವು ಘೋಷಿಸಿ. ಉಪ ಚುನಾವಣೆಯ ಗೊಡವೆಗಳೆ ಬೇಡ ಎಂದು ಆಶಯ ವ್ಯಕ್ತಪಡಿಸಿದರು.

SIDDARAMAIAH

ಕುರುಬ ಸಮುದಾಯದವರ ಸಮಾವೇಶವೊಂದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಂಬಳಿ ಹೊದ್ದುಕೊಂಡು ಭರವಸೆಯ ನುಡಿಗಳನ್ನಾಡಿದ್ದರು. ‘ಕಂಬಳ ಹೊದ್ದುಕೊಳ್ಳಲು ಅವನೇನು ಕುರುಬನೇನ್ರಿ’ ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *