GST ಕೌನ್ಸಿಲ್ ಸಭೆಗೆ ಸಿದ್ದರಾಮಯ್ಯ ಹೋಗದ್ದಕ್ಕೆ ವಿಶ್ವನಾಥ್ ಕಿಡಿ

1 Min Read

ಬೆಂಗಳೂರು: GST ಕೌನ್ಸಿಲ್ ಸಭೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಭಾಗಿಯಾಗದ್ದಕ್ಕೆ ವಿಚಾರ ವಿಧಾನ ಪರಿಷತ್‌‌ನಲ್ಲಿ ಪ್ರಸ್ತಾಪ ಆಯ್ತು‌. ಬಿಜೆಪಿ‌ ಸದಸ್ಯ ಹೆಚ್‌‌.ವಿಶ್ವನಾಥ್ (H.Vishwanath) ಸಿಎಂ ನಡೆಯನ್ನ ಖಂಡಿಸಿದರು.

ರಾಜ್ಯಪಾಲರು ಭಾಷಣದ ಮೇಲೆ ಚರ್ಚೆ ಮಾಡೋ ವೇಳೆ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜ ಮಾತಾಡಿ, ಕರ್ನಾಟಕ ಅತಿ ಹೆಚ್ಚು GST ಕೊಡುವ ರಾಜ್ಯ. ನಮ್ಮ ತೆರಿಗೆ ರಾಜ್ಯಕ್ಕೆ ಸರಿಯಾಗಿ ಹಂಚಿಕೆ ಆಗಿಲ್ಲ. GST ಹಂಚಿಕೆ ಸಮಾನವಾಗಿ ಆಗಬೇಕು ಅಂತ‌‌ ಕೇಂದ್ರವನ್ನ ಆಗ್ರಹಿಸಿದರು. ಇದನ್ನೂ ಓದಿ: ಬಸ್‌ ವ್ಯವಸ್ಥೆ ಸರಿಯಿಲ್ಲ.. ನಿಮ್ಮ ಜೊತೆ ಚರ್ಚಿಸಲು BMTC ಎಂಡಿ ಸಾಕು – ಮೋಹನ್‌ದಾಸ್‌ ಪೈ Vs ರಾಮಲಿಂಗಾರೆಡ್ಡಿ

ಐವಾನ್ ಡಿಸೋಜ ಮಾತಿಗೆ ಬಿಜೆಪಿ ಸದಸ್ಯ ವಿಶ್ವನಾಥ್ ಕಿಡಿಕಾರಿ, GST ಬಗ್ಗೆ ನೀವು ರೋಷವೇಷವಾಗಿ ಮಾತಾಡಬೇಡಿ. ಸಿಎಂ ಹಣಕಾಸು ಮಂತ್ರಿ. ಯಾಕೆ GST ಮೀಟಿಂಗ್‌ಗೆ ಸಿಎಂ ಹೋಗಿಲ್ಲ. ಎಷ್ಟು ಮೀಟಿಂಗ್ ಸಿದ್ದರಾಮಯ್ಯ ಹೋಗಿದ್ದಾರೆ. ಸಿಎಂ GST ಮೀಟಿಂಗ್‌ಗೆ ಹೋಗಿ ಅಲ್ಲಿ ಅನ್ಯಾಯದ ಬಗ್ಗೆ ಮಾತಾಡಬೇಕು ತಾನೆ. ಇಲ್ಲಿ ಮಾತಾಡೋದು ಯಾಕೆ ಅಂತ ಸಿದ್ದರಾಮಯ್ಯ GST ಮೀಟಿಂಗ್‌ಗೆ ಹೋಗದ್ದಕ್ಕೆ ವಿಶ್ವನಾಥ್ ಕಿಡಿಕಾರಿದರು.

ಈ ವೇಳೆ ಆಡಳಿತ, ವಿಪಕ್ಷ ‌ನಡುವೆ ವಾಕ್ಸಮರ ನಡೀತು.‌‌ ವಿಶ್ವನಾಥ್ ಮಾತಿಗೆ ಪ್ರಿಯಾಂಕ್ ಖರ್ಗೆ ಮಾತಾಡಿ, ಸಿಎಂ ಯಾರನ್ನ ಬೇಕಾದ್ರು ಕಳಿಸಬಹುದು. ಸಿದ್ದರಾಮಯ್ಯ ಕೃಷ್ಣಬೈರೇಗೌಡ ಅವರನ್ನು ನೇಮಕ ಮಾಡಿದ್ರು. ಯಡಿಯೂರಪ್ಪ ಇದ್ದಾಗ ಬೊಮ್ಮಾಯಿ ಸದಸ್ಯರಾಗಿ ಮಾಡಿದ್ರು. ಇಂತಹದ್ದು ಆಗುತ್ತೆ ಎಂದರು.

ಸಭಾ ನಾಯಕ ಬೋಸರಾಜು ಮಾತಾಡಿ, ಸಿಎಂ ಸಭೆಗೆ ಹೋಗಿಲ್ಲ ಅಂದರು ತಮ್ಮ ವಾದ ಸಿಎಂ ಮಂಡನೆ ಮಾಡಿದ್ದಾರೆ. ಹಣಕಾಸು ಸಚಿವರನ್ನ ಭೇಟಿಯಾಗಿ ಮನವಿ ಮಾಡಿದ್ದಾರೆ.ಆದ್ರೆ ಸಿಎಂ ಮಾತಿಗೆ ಬೆಲೆ ಕೊಟ್ಟಿಲ್ಲ‌ ಎಂದರು. ಬೋಸರಾಜು ವಿತಂಡವಾದ ಮಾಡಬೇಡಿ ಎಂದು ಮತ್ತೆ ವಿಶ್ವನಾಥ್ ‌ಕಿಡಿಕಾರಿದರು. ಇದನ್ನೂ ಓದಿ: NCP ಎರಡು ಬಣಗಳ ವಿಲೀನಕ್ಕೆ ನಿರ್ಧರಿಸಿದ್ದ ಅಜಿತ್ ಪವಾರ್: ತೆರೆಮರೆಯ ರಾಜಕೀಯ ಗುಟ್ಟು ಬಿಚ್ಚಿಟ್ಟ ಆಪ್ತ ಕಿರಣ್ ಗುಜಾರ್

Share This Article