ವೀರಶೈವ ಲಿಂಗಾಯತ ಧರ್ಮ ಹುಟ್ಟಿದ್ದೇ ಮತಾಂತರದಿಂದ: ಮಸೂದೆ ವಿರುದ್ಧ ಎಚ್.ವಿಶ್ವನಾಥ್ ಕಿಡಿ

Public TV
2 Min Read

-ಮತಾಂತರ ನಿಷೇಧ ಮಸೂದೆಗೆ ವಿರೋಧ
-ಬಸವಣ್ಣರ ಮಾನವ ಧರ್ಮ ಒಡೆಯುತ್ತಿದ್ದಾರೆ ಸಿಎಂ

ಮೈಸೂರು: ವೀರಶೈವ ಲಿಂಗಾಯತ ಧರ್ಮ ರೂಪುಗೊಂಡಿದ್ದೇ ಮತಾಂತರದಿಂದ. ನೀವು ಬಸವಣ್ಣ ಅವರನ್ನು ಬಂಧಿಸುತ್ತೀರಾ ಎನ್ನುವ ಮೂಲಕ ರಾಜ್ಯ ಸರ್ಕಾರದ ಮತಾಂತರ ನಿಷೇಧ ಮಸೂದೆಯನ್ನು ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್ ವಿರೋಧಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದರು. ಬಸವೇಶ್ವರರು ಕಟ್ಟಿದ ಮಾನವ ಧರ್ಮವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಂದಲೇ ಒಡೆಸಲಾಗುತ್ತಿದೆ. ಇದು ನಿಜಕ್ಕೂ ವಿಪರ್ಯಾಸದ ಸಂಗತಿ. ಭಾರತ ಬಹುತ್ವದ ದೇಶ. ಸಂವಿಧಾನದಲ್ಲೇ ಧಾರ್ಮಿಕ ಸ್ವಾತಂತ್ರ್ಯ ಕೊಡಲಾಗಿದೆ. ಬಸವಣ್ಣನ ಕಾಲದಲ್ಲೇ ಮತಾಂತರ ನಡೆಯಿತು. ಬಸವಣ್ಣ 12ನೇ ಶತಮಾನದಲ್ಲೇ ಶೋಷಿತರು, ಅಸ್ಪೃಶ್ಯರಿಗೆ ಲಿಂಗ ದೀಕ್ಷೆ ಮಾಡಿ ಲಿಂಗಾಯತ ಮಾನವ ಧರ್ಮ ಕಟ್ಟಿದರು. ಮಾನವ ಧರ್ಮಕ್ಕೆ ಬಸವಣ್ಣ ಅವರು ಎಲ್ಲರನ್ನೂ ಸೇರಿಸಿಕೊಂಡರು ಎಂದರು.

basavaraj bommai

ಹಾಗಾದರೆ ಮತಾಂತರ ವಿಧೇಯಕದ ಮೂಲಕ ಗಾಂಧೀಜಿ, ಬಸವಣ್ಣ ಅವರನ್ನು ಬಂಧಿಸಬೇಕು. ಅಡ್ವಾಣಿ, ಬಾಳಾ ಠಾಕ್ರೆ, ಪ್ರವೀಣ್ ತೊಗಾಡಿಯಾ ಕುಟುಂಬದಲ್ಲಿ ಅನ್ಯ ಧರ್ಮದವರನ್ನು ಮದುವೆಯಾಗಿದ್ದಾರೆ. ಇವರನ್ನೆಲ್ಲಾ ಡಿಸಿಗಳ ಮೂಲಕ ಜೈಲಿಗೆ ಹಾಕುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದರು.

ಕಾಂಗ್ರೆಸ್ ಮತಾಂತರ ಕಾಯ್ದೆ ವಿಚಾರದಲ್ಲಿ ಇಬ್ಬಂದಿತನ ಪ್ರದರ್ಶನ ಮಾಡುತ್ತಿದೆ. ಕಲಾಪದ ಬೆಲ್ ಬಾರಿಸಿದ ಮೇಲೂ ಸದನದ ಹೊರಗೆ ಹರಟೆ ಹೊಡೆಯುತ್ತಾ ಕೂತಿದ್ದರು. ಕಾಂಗ್ರೆಸ್‌ನವರು ಮತ ಬ್ಯಾಂಕ್‌ಗಾಗಿ ಹೀಗೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ದಲಿತರು, ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಾಡಲು ಸಾಧ್ಯವಿದೆಯಾ ಎಂದು ಪ್ರಶ್ನಿಸಿದ ಅವರು, ಸರ್ಕಾರದಿಂದ ಧಾರ್ಮಿಕ ದಿಗ್ಭಂಧನ ಹಾಕಲಾಗುತ್ತಿದೆ. ದಲಿತರಿಗೆ ಇದು ದೊಡ್ಡ ದಿಗ್ಭಂಧನ ಎಂದು ಕಿಡಿಕಾರಿದರು. ಇದನ್ನೂ ಓದಿ: ವಿಚಾರಣೆಗೆ ಕೋರ್ಟ್‌ಗೆ ಬಂದವರ ಮೇಲೆ ತಹಶೀಲ್ದಾರ್‌ ಹಲ್ಲೆ!

ಮತಾಂತರ ತಡೆ ವಿಧೇಯಕದ ವಿಷಯದಲ್ಲಿ ಬಸವೇಶ್ವರರ ಹೆಸರಿನ ಮಠಗಳು, ಅಹಿಂದ ಮಠಗಳು, ವೀರಶೈವ ಮಠಗಳು, ಚಿತ್ರದುರ್ಗದ ಪ್ರಗತಿಪರ ಮುರುಘ ಮಠದ ಸ್ವಾಮೀಜಿ ಯಾಕೆ ಮಾತಾಡುತ್ತಿಲ್ಲ. ಸರ್ಕಾರದ ಅನುದಾನ ಮಠಗಳ ಬಾಯಿ ಮುಚ್ಚಿಸಿದೆಯಾ ಎಂದು ಪ್ರಶ್ನಿಸಿದರು.

ಸಾಹಿತಿಗಳು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಮಾತ್ರ ಸಿಮೀತರಾಗಿದ್ದಾರೆ. ಕ್ರಿಶ್ಚಿಯನ್ ದೇಶಗಳಲ್ಲಿ ಕನ್ನಡಿಗರು ಬದುಕು ಕಟ್ಟಿಕೊಂಡಿದ್ದಾರೆ. ಅವರನ್ನು ಅಲ್ಲಿಂದ ವಾಪಾಸ್ ಕರೆಸಿಕೊಳ್ಳಿ. ಕ್ರಿಶ್ಚಿಯನ್ನರಿಗೆ ಇಲ್ಲಿ ಯಾಕೆ ಕಿರುಕುಳ ನೀಡುತ್ತೀದ್ದಿರಾ? ಈ ವಿಧೇಯಕ ಜಾಗತಿಕವಾಗಿ ಪರಿಣಾಮ ಬೀರುತ್ತದೆ ಎಂದರು. ಇದನ್ನೂ ಓದಿ: ಅಖಿಲೇಶ್ ಯಾದವ್‍ಗೆ ಕೊರೊನಾ ನೆಗೆಟಿವ್ – ಪತ್ನಿ, ಮಗಳಿಗೆ ಪಾಸಿಟಿವ್

ಶಾಸಕಾಂಗ ಸಮಿತಿ ರಚಿಸಿ ಮತ್ತೆ ಈ ವಿಧೇಯಕದ ಚರ್ಚೆ ಆಗಲಿ. ಈ ನಿಟ್ಟಿನಲ್ಲಿ ದಲಿತರ ಧಾರ್ಮಿಕ ಸ್ವಾತಂತ್ರ್ಯ ಹರಣ ತಡೆಯಬೇಕು. ಈ ವಿಧೇಯಕ ತರುವುದರಿಂದ ರಾಜ್ಯದ ಅಭಿವೃದ್ಧಿ ಆಗುತ್ತದೆಯೇ? ಅವರು ಈ ವಿಧೇಯಕ ತರಲು ಯಾಕೆ ಇಷ್ಟು ಅವಸರ ಮಾಡುತ್ತಿದ್ದಾರೆ? ಜನರಿಗೆ ಸರ್ಕಾರ ಉತ್ತರ ಕೊಡಲಿ. ವೀರಶೈವ ಲಿಂಗಾಯತ ಧರ್ಮ ಮತಾಂತರದಿಂದಲೇ ರೂಪಗೊಂಡಿದೆ ಎಂದು ಹೇಳಿದರು. ಇದನ್ನೂ ಓದಿ: 2023ರ ಚುನಾವಣೆ ಬೊಮ್ಮಾಯಿ ನಾಯಕತ್ವದಲ್ಲೇ ನಡೆಯುತ್ತೆ: ವಿ. ಸೋಮಣ್ಣ

ಬೆಳಗಾವಿಯಲ್ಲಿ ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮರಾಠಿ ಮತಕ್ಕಾಗಿ ಬೆಳಗಾವಿಯ ಮುಖಂಡರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನವಾದರೂ ಮಾತಾಡುತ್ತಿಲ್ಲ. ಸರ್ಕಾರ ಎಂಇಎಸ್ ಬ್ಯಾನ್ ಮಾಡಬೇಕು. ನಮ್ಮ ಅನ್ನ ತಿಂದು, ನೀರು ಕುಡಿದು ನಮ್ಮ ಬಾವುಟ ಸುಟ್ಟರೆ ಅಂಥವರನ್ನು ಸುಮ್ಮನೆ ಬಿಡಲಾಗುವುದಿಲ್ಲ. ಎಂಇಎಸ್ ಅನ್ನು ಮೊದಲು ಬ್ಯಾನ್ ಮಾಡಿ ಎಂದು ಒತ್ತಾಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *