ಪ್ರತಾಪ್ ಸಿಂಹ ಅಯೋಗ್ಯ, ವಕೀಲ ವೃತ್ತಿ ಬಗ್ಗೆ ಅವನಿಗೇನು ಗೊತ್ತು: ಹೆಚ್. ವಿಶ್ವನಾಥ್ ಕಿಡಿ

Public TV
1 Min Read

ಮೈಸೂರು: ಪ್ರತಾಪ್ ಸಿಂಹ ಅಯೋಗ್ಯ, ವಕೀಲ ವೃತ್ತಿ ಬಗ್ಗೆ ಅವನಿಗೇನು ಗೊತ್ತು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಾವೆಲ್ಲರೂ ಒಟ್ಟಿಗೆ ಲಾ ಪ್ರಾಕ್ಟೀಸ್ ಮಾಡಿದ್ದೇವೆ. ಅವನಿಗೇನಾಗಿದೆ ಬಾಯಿಗೆ ಬಂದಂಗೆ ಮಾತನಾಡುತ್ತಾನೆ. ಮಹಾರಾಜರನ್ನು ಬಿಟ್ಟರೇ ನಾನೇ ಹೆಚ್ಚು ಕೆಲಸ ಮಾಡಿದ್ದೇನೆ ಅಂತಾನೆ. ಈ ಎಂಪಿ ಕಾಲದಲ್ಲಿ ಏನೂ ಕೆಲಸವಾಗಿಲ್ಲ. 2014ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ, ನಾನು ಸೋಲುತ್ತಿರಲಿಲ್ಲ. ರಾಜ್ಯದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿದ್ದೀರಾ, ನಿಮಗೆ ನಾಚಿಕೆ ಆಗುವುದಿಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ಭ್ರಷ್ಟಾಚಾರ – ಭಾರತ ಮೂಲದ ಗುಪ್ತಾ ಬ್ರದರ್ಸ್ ಯುಎಇನಲ್ಲಿ ಬಂಧನ

H VISHWANSTH SIDDARAMAIAH

ಕರ್ನಾಟಕದ ಶಾಂತಿಯನ್ನು ಮಸೀದಿಯಲ್ಲಿ ಶಿವಲಿಂಗ ಹುಡುಕುವ ಮೂಲಕ ಕದಡಲಾಗುತ್ತಿದೆ. ಬಿಜೆಪಿ ವಕ್ತಾರರು ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ನಾಯಕರು ಇದಕ್ಕೆ ಕಡಿವಾಣ ಹಾಕಬೇಕು. ಈ ಬಗ್ಗೆ ಆರ್‌ಎಸ್‌ಎಸ್‌ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಹೇಳಬೇಕು. ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದನ್ನು ನಿಲ್ಲಿಸಿ ಅಂತಾ ಹೇಳಬೇಕು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ನೆಲೆಸಿದ್ದ ಉಗ್ರ, ಹಿಂದೂಗಳ ಹತ್ಯೆ ಮಾಡುತ್ತಿದ್ದ ಸಂಘಟನೆಯ ಕಮಾಂಡೋ ಆಗಿದ್ದ

ಇದೇ ವೇಳೆ, 25 ಲಕ್ಷ ಮುಸ್ಲಿಂ ಕುಟುಂಬಗಳು ಬದುಕುತ್ತಿವೆ. ಹೆಚ್ಚು ಕಡಿಮೆ ಆದರೆ ಅವರು ಬದುಕುವುದಕ್ಕೆ ಆಗುತ್ತಾ ಎಂದು ಕಳವಳ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *