ಸಿದ್ದರಾಮಯ್ಯಗೆ ರಾಷ್ಟ್ರ ರಾಜಕಾರಣ ಹೋಗಲು ಪುಕ್ಕಲುತನವಿದೆ: ಎಚ್. ವಿಶ್ವನಾಥ್

Public TV
2 Min Read

– ಸಿದ್ದರಾಮಯ್ಯ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ
– ಬಿಎಸ್‍ವೈ ಪರವಾಗಿ ಸಿದ್ದರಾಮಯ್ಯ ಮೊಸಳೆ ಕಣ್ಣೀರು

ಮೈಸೂರು: ಯಡಿಯೂರಪ್ಪ ಅವರ ಪರವಾಗಿ ಸಿದ್ದರಾಮಯ್ಯ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಹುಸಿ ಪ್ರೇಮ ಪ್ರದರ್ಶನ ಮಾಡುತ್ತಿದ್ದಾರೆ. ಯಡಿಯೂರಪ್ಪರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಐಟಿ ದಾಳಿಯಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಎಚ್. ವಿಶ್ವನಾಥ್, ಯಡಿಯೂರಪ್ಪ ಅವರ ಪರವಾಗಿ ಸಿದ್ದರಾಮಯ್ಯ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಹುಸಿ ಪ್ರೇಮ ಪ್ರದರ್ಶನ ಮಾಡುತ್ತಿದ್ದಾರೆ. ಯಡಿಯೂರಪ್ಪರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಹಣವೇ ಇಲ್ಲ ಲಾಕ್ ಮಾಡುವ ಅವಶ್ಯಕತೆ ಇತ್ತಾ?- ಮಾಲೀಕನಿಗೆ ಪತ್ರ ಬರೆದ ಕಳ್ಳರು

ದಾಳಿ ಖಂಡಿಸಿ ಹೇಳಿಕೆ ನೀಡಿ ವೀರಶೈವ ಲಿಂಗಾಯತ ಸಮುದಾಯ ಮೆಚ್ಚಿಸಲು ಹೋಗುತ್ತಿದ್ದೀರಾ? ಇದು ನಿಮ್ಮ ಉದ್ದೇಶವಾಗಿದ್ದರೆ ನಿಮ್ಮಂಥ ದಡ್ಡರು ಯಾರು ಇಲ್ಲ. ಯಾಕೆಂದರೆ ವೀರಶೈವ – ಲಿಂಗಾಯತರು ಬುದ್ದಿವಂತ ಸಮುದಾಯ. ನಿಮ್ಮ ಹೇಳಿಕೆಯಿಂದ ಅವರ ಮತ ನಿಮಗೆ ಬರುತ್ತದೆ ಎಂಬುದು ನಿಮ್ಮ ದಡ್ಡತನ ಎಂದರು. ಇದನ್ನೂ ಓದಿ: ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

ಯಡಿಯೂರಪ್ಪ ಅವರೇ ಈ ದಾಳಿಗಳನ್ನು ಸ್ವಾಗತಿಸಿರುವಾಗ ನಿಮ್ಮದೇನೂ? ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ ಭ್ರಷ್ಟಾಚಾರದ ಪರವೋ ವಿರುದ್ದವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಜಿಂದಾಲ್ ವಿಚಾರ ಬಂದಾಗಲೂ ವಿರೋಧ ಪಕ್ಷದವರು ಧ್ವನಿ ಎತ್ತಲಿಲ್ಲ. ಈಗ ಐಟಿ ದಾಳಿ ನಡೆದರೆ ದಾಳಿಯನ್ನೆ ರಾಜಕೀಯ ಎಂದು ಆರೋಪ ಮಾಡುತ್ತೀರಾ? ನೀವು ಭ್ರಷ್ಟರ ಪರವಾ? ಎಂದು ಸಿದ್ದರಾಮಯ್ಯಗೆ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೆ ಆಗುತ್ತಿರುವ ಅನ್ಯಾಯಗಳು ಒಂದೆರಡಲ್ಲ: ಎಚ್‍ಡಿಕೆ

ತಮ್ಮ ಹಗರಣ ಮುಚ್ಚಿಕೊಳ್ಳಲು ಲೋಕಾಯುಕ್ತವನ್ನೆ ಮುಚ್ಚಿದವರು ಸಿದ್ದರಾಮಯ್ಯ. ಅವರ ಆಡಳಿತ ಭ್ರಷ್ಟಾಚಾರ ಮುಕ್ತವಾಗಿರಲಿಲ್ಲ. ಸಿದ್ದರಾಮಯ್ಯ ಆಡಳಿತದಲ್ಲಿ ಮಹಾ ಭ್ರಷ್ಟಾಚಾರವೇ ನಡೆಯಿತು. ಅಂದು ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟರು. ಇಂದು ಕೂಡ ಐಟಿ ದಾಳಿ ಖಂಡಿಸಿ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕಸ ಸಂಗ್ರಹಣಾ ವಾಹನ ಚಲಾಯಿಸಿ ಜಾಗೃತಿ ಮೂಡಿಸಿದ ಶ್ರೀರಾಮುಲು

ಸಿದ್ದರಾಮಯ್ಯ ಆಡಳಿತವಾಧಿಯಲ್ಲಿ ಮುಚ್ಚಿರೋ ಲೋಕಾಯುಕ್ತವನ್ನು ಮತ್ತೆ ಆರಂಭಿಸಬೇಕು. ಇವತ್ತು ಯಾರಿಗೂ ಭಯವಿಲ್ಲ. ಮತ್ತೆ ಲೋಕಾಯುಕ್ತ ಆರಂಭಿಸಿ ಎಲ್ಲರಿಗೂ ಭಯ ಮುಟ್ಟಿಸಬೇಕು. ನನ್ನಂಥ ಪ್ರಾಮಾಣಿಕ ಇನ್ನೊಬ್ಬ ಇಲ್ಲ ಅಂತಾ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳುತ್ತಾರೆ. ಆದರೆ ರಮೇಶ್ ಕುಮಾರ್ ನಂಥ ಭ್ರಷ್ಟ ಇನ್ನೊಬ್ಬ ಇಲ್ಲ. ಅರಣ್ಯ ಭೂಮಿಯನ್ನೆ ನುಂಗಿದ ಭ್ರಷ್ಟ ರಮೇಶ್ ಕುಮಾರ್. ರಮೇಶ್ ಕುಮಾರ್ ಯಶಸ್ವಿನಿ ಯೋಜನೆ ಮುಚ್ಚಿ ರೈತರಿಗೆ ಅನ್ಯಾಯ ಮಾಡಿದರು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಸಚಿವ ಯಶಪಾಲ್ ಆರ್ಯ, ಶಾಸಕ ಸಂಜೀವ್ ಆರ್ಯ

ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ರಾಷ್ಟ್ರ ರಾಜಕಾರಣಕ್ಕೆ ಬರ್ತಿನಿ ಎಂಬ ಧೈರ್ಯ ತೊರಬೇಕಿತ್ತು ಸಿದ್ದರಾಮಯ್ಯ. ಆದರೆ ಸಿದ್ದರಾಮಯ್ಯ ರಾಜಕೀಯ ಪುಕ್ಕಲುತನ ಪ್ರದರ್ಶನ ಮಾಡುತ್ತಿದ್ದಾರೆ. ಮೋದಿ ಅವರ ಬಗ್ಗೆ ಲಘುವಾಗಿ ಮಾತಾಡುವ ಸಿದ್ದರಾಮಯ್ಯಗೆ ರಾಷ್ಟ್ರ ರಾಜಕಾರಣ ಹೋಗಲು ಪುಕ್ಕಲುತನವಿದೆ. ನೀವು ಹೇಗೆ ಮೋದಿ ಅವರ ಬಗ್ಗೆ ಲಘುವಾಗಿ ಮಾತಾಡಲು ಸಮರ್ಥರು? ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗಿ ಪ್ರಧಾನಿ ಆದರೆ ನನಗೆ ಸಂತೋಷ ಎಂದರು.

Share This Article
Leave a Comment

Leave a Reply

Your email address will not be published. Required fields are marked *